ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 66

ಯೆಹೋವನಿಗೆ ಪೂರ್ಣ ಪ್ರಾಣದ ಸೇವೆ ಸಲ್ಲಿಸುವುದು

ಯೆಹೋವನಿಗೆ ಪೂರ್ಣ ಪ್ರಾಣದ ಸೇವೆ ಸಲ್ಲಿಸುವುದು

(ಮತ್ತಾಯ 22:37)

1. ಓ ಯೆಹೋವ ಪರಮನೇ,

ಪ್ರೀತಿ, ವಿಧೇಯತೆಗೆ ಪಾತ್ರ.

ಪೂರ್ಣ ಭಕ್ತಿಗೆ ನೀ ಯೋಗ್ಯ;

ನಿಂಗೆ ನಿರಾಶೆ ತರೆನು ನಾ.

ಪಾಲಿಸುವೆ ನಿನ್ನಾಜ್ಞೆಯ

ನಾ ಮಾಡುವೆ ನಿನ್ನ ಚಿತ್ತವ.

(ಪಲ್ಲವಿ)

ಓ ಯೆಹೋವ, ಅರ್ಹ ನೀನು;

ಸಲ್ಲಿಸುವೆ ಪೂರ್ಣ ಭಕ್ತಿಯ.

2. ನಿನ್ನ ಸೃಷ್ಟಿ ಕೀರ್ತಿಸುತೆ,

ಪ್ರಭೆ ಆಕಾಶ ಅರುಹುತೆ.

ನನ್ನ ಜೀವ ಅರ್ಪಿಸುವೆ,

ನಿನ್ನ ನಾಮವ ಘೋಷಿಸುವೆ.

ಸಮರ್ಪಣಾ ಪ್ರತಿಜ್ಞೆಗೆ

ನಾ ವಚನಬದ್ಧನಾಗುವೆ.

(ಪಲ್ಲವಿ)

ಓ ಯೆಹೋವ, ಅರ್ಹ ನೀನು;

ಸಲ್ಲಿಸುವೆ ಪೂರ್ಣ ಭಕ್ತಿಯ.