ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 121

ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

(ಇಬ್ರಿಯ 10:24, 25)

1. ಯೆಹೋವನನ್ನು ಸೇವಿಸಲು

ಪರಸ್ಪರ ಪ್ರೋತ್ಸಾಹಿಸೆ,

ಪ್ರೀತಿ ಬಂಧ ಬಲಗೊಳ್ಳುತೆ,

ಸತ್ಕಾರ್ಯ ಶಾಂತಿ ತರುತೆ.

ದೇವರ ಜನರ ಪ್ರೀತಿಯು

ಕೊಡುತೆ ತಾಳಲು ಧೈರ್ಯ.

ನಮ್ಮ ಸಭೆ ಆಶ್ರಯ ದುರ್ಗ,

ಸ್ಥಳವದು ಸುರಕ್ಷಿತ.

2. ಸಮಯೋಚಿತವಾದ ನುಡಿ

ಅದೆಷ್ಟೋ ಸಾಂತ್ವನಕರ.

ನೆಮ್ಮದಿ ತರುವ ನುಡಿಯು

ಬರುತೆ ಸ್ನೇಹಿತರಿಂದ.

ಏಕ ಗುರಿಯವರೊಂದಿಗೆ

ಸೇವೆ ಅದೆಷ್ಟೋ ಉತ್ತಮ.

ಹೆಗಲು ಕೊಟ್ಟು ಪರಸ್ಪರ,

ನೀಡೋಣ ಉತ್ತೇಜನವ.

3. ನಂಬಿಕೆ ದೃಷ್ಟಿ ತೋರಿಸುತೆ

ದೇವದಿನ ಸಾಮೀಪ್ಯವ.

ಕೂಟಗಳೆಮಗೆ ಅಗತ್ಯ

ಸನ್ಮಾರ್ಗದಲ್ಲಿ ನಡೆಯ.

ದೇವಜನರ ಜೊತೆಯಲಿ

ಸೇವಿಸುವೆವು ಸರ್ವದಾ.

ಸಮಗ್ರತೆಯ ಕಾಪಾಡಲು

ನೀಡೋಣ ನಾವು ಪ್ರೋತ್ಸಾಹ.