ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 132

ವಿಜಯ ಗೀತೆ

ವಿಜಯ ಗೀತೆ

(ವಿಮೋಚನಕಾಂಡ 15:1)

1. ಹಾಡು ಯಾಹುಗೆ, ಆ ನಾಮ ಉನ್ನತಕ್ಕೇರಿದೆ.

ಐಗುಪ್ತ್ಯ ವೈರಿಯ ಕಡಲಿಗೆ ದೊಬ್ಬಿದ.

ಹಾಡು ಯಾಹುಗೆ, ಬೇರೆ ಯಾವ ದೇವರೂ ಇಲ್ಲ.

ಯೆಹೋವ ಆ ನಾಮ, ಹಾಡು ಆ ವಿಜೇತಗೆ.

(ಪಲ್ಲವಿ)

ಯೆಹೋವಾ, ನೀ ಸರ್ವೋನ್ನತನು,

ಎಂದಿಗೂ ಬದಲಾಗದವನು.

ವೈರಿಯ ಹತಿಸಿ ನಿನ್ನ ನಾಮ

ಪವಿತ್ರ ಮಾಡುವಿ ನೀನು.

2. ಜನಾಂಗಗಳು ನಿಂತಿವೆ ಯೆಹೋವಗೆದಿರು.

ಬಲಾಢ್ಯರು ಆದರೂ ಹತರಾಗುವರು.

ಪಾರಾಗೋದಿಲ್ಲ ಅವರು ಅರ್ಮಗೆದೋನನ್ನು.

ಗೊತ್ತಾಗೋದು ಬೇಗ ದೇವರು ಯೆಹೋವನು.

(ಪಲ್ಲವಿ)

ಯೆಹೋವಾ, ನೀ ಸರ್ವೋನ್ನತನು,

ಎಂದಿಗೂ ಬದಲಾಗದವನು.

ವೈರಿಯ ಹತಿಸಿ ನಿನ್ನ ನಾಮ

ಪವಿತ್ರ ಮಾಡುವಿ ನೀನು.