ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 94

ದೇವರ ಒಳ್ಳೆಯ ದಾನಗಳಿಂದ ತೃಪ್ತರು

ದೇವರ ಒಳ್ಳೆಯ ದಾನಗಳಿಂದ ತೃಪ್ತರು

(ಯಾಕೋಬ 1:17)

1. ಸಕಲ ಸುವರಗಳು,

ಇಷ್ಟವಸ್ತುಗಳು,

ಜೀವನಯೋಗ್ಯ ವಸ್ತುವು,

ದೇವದಾನಗಳು.

ಆತನಲ್ಲಿಲ್ಲ ಎಳ್ಳಷ್ಟೂ

ವ್ಯತ್ಯಾಸ, ಇಬ್ಬಗೆ.

ಯೆಹೋವ ಪೂರಕ, ಬೆಳಕು,

ಜೀವದ ಚಿಲುಮೆ.

2. ದೈನಿಕ ಪೂರೈಕೆಗಳ

ಚಿಂತೆ ನಮಗಿಲ್ಲ;

ಆತ ಪ್ರೀತಿಯ ಪೋಷಕ,

ಪಕ್ಷಿಗಳ ಸಹ.

ವ್ಯರ್ಥ ವಿಷಯಗಳಿಗೆ

ನಮಗಿಲ್ಲ ವೇಳೆ.

ನಮಗೆ ಸರಳ ಜೀವನ

ತೃಪ್ತಿ ತರುತ್ತದೆ.

3. ಲೋಕವಸ್ತುಗಳು ವ್ಯರ್ಥ

ದೇವದೃಷ್ಟಿಯಲಿ.

ಬಳಸೋಣ ದಿನಗಳ,

ನಿತ್ಯ ಲಾಭಕ್ಕಾಗಿ.

ನಾವು ಸತ್ತರೂ ಸುಭದ್ರ

ಆಧ್ಯಾತ್ಮಿಕ ಧನ.

ಸಂತೃಪ್ತರು ನಾವು, ಸರಳ

ನಮ್ಮೆಲ್ಲರ ನೇತ್ರ.