ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 62

ನಾವು ಯಾರ ಸ್ವತ್ತು?

ನಾವು ಯಾರ ಸ್ವತ್ತು?

(ರೋಮನ್ನರಿಗೆ 14:8)

1. ನೀವು ಯಾರ ಸ್ವತ್ತು?

ಯಾರಿಗೆ ವಿಧೇಯರು?

ನೀವು ನಮಿಸುವ ಧಣಿಯು

ನೀವು ಸೇವಿಸೋ ದೇವನು.

ಸೇವಿಸಲಾರಿರಿ

ಧಣಿಗಳಿಬ್ಬರನ್ನು.

ಪೂರ್ಣ ಹೃದದ ಪ್ರೀತಿಯನ್ನಾಗ

ಅಸಾಧ್ಯ ತೋರಿಸೋದು.

2. ನೀವು ಯಾರ ಸ್ವತ್ತು?

ಯಾರಿಗೆ ವಿಧೇಯರು?

ಸತ್ಯ, ಸುಳ್ಳು ದೇವರ್ಗಳಲ್ಲಿ

ಒಬ್ಬನ ಆಯ್ಕೆ ಮಾಡಿರಿ.

ನೀವು ಕೈಸರಗೆ

ಸಲ್ಲಿಸುತ್ತೀರೊ ನಿಷ್ಠೆ?

ಇಲ್ಲವೆ ಸತ್ಯ ದೇವರ ಚಿತ್ತ

ಮಾಡುವಿರೊ ಸರ್ವದಾ?

3. ನಾನು ಯಾರ ಸ್ವತ್ತು?

ಯೆಹೋವನದ್ದೇ ಸ್ವತ್ತು.

ಸೇವಿಸಿ ಸ್ವರ್ಗೀಯ ಪಿತನ

ಆಗುವೆ ವಚನಬದ್ಧ.

ಆತ ಕೊಂಡ ನನ್ನ

ಕೊಟ್ಟು ಕ್ರಯ ಅಪಾರ.

ಪುತ್ರನ ಸಾವು ಬಿಡಿಸಿತೆನ್ನ,

ಮಾನ್ಯಮಾಡುವೆ ನಾನು.