ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 96

ಯೋಗ್ಯರನ್ನು ಹುಡುಕಿ

ಯೋಗ್ಯರನ್ನು ಹುಡುಕಿ

(ಮತ್ತಾಯ 10:11-15)

1. ರಾಜ್ಯ ಸಾರೋಣದಲಿ ಮಾದರಿಯ

ನಮಗೆ ಕ್ರಿಸ್ತ ಇಟ್ಟನು.

‘ಹೋಗಿ ಹುಡುಕಿ ಆಧ್ಯಾತ್ಮಿಕವಾಗಿ

ಹಸಿದಿರುವ ಯೋಗ್ಯರನು.

ಅವರ ವಂದಿಸಿ, ಶಾಂತಿ ಹಾರೈಸಿ

ಕೊಡುವಿರಿ ಯೋಗ್ಯಗೆ ಶಾಂತಿ.

ಹೋಗಿ ಇಲ್ಲಿಂದ ಎಂದು ಹೇಳಿದರೆ

ಧೂಳು ಝಾಡಿಸಿ ಹೋಗಿಬಿಡಿ.’

2. ನಿಮ್ಮನ್ನಾಲಿಸುವ ಹೃದಯವನು

ದೇವರು ತೆರೆಯುವನು.

ನಿತ್ಯಜೀವ ಪ್ರೀತಿಸುವ ಅವರು

ನಿಮ್ಮೊಂದಿಗೆ ಸೇವಿಸುವರು.

ಏನು ಹೇಳಬೇಕೆನ್ನುವ ವಿಷಯ

ಯೆಹೋವ ನೀಡುವ ಸಹಾಯ.

ರುಚಿಕರವಾಗಿರೆ ನಿಮ್ಮುತ್ತರ

ಮೆಚ್ಚುವನದನ್ನು ದೀನನು.