ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 57

ನನ್ನ ಹೃದಯದ ಧ್ಯಾನ

ನನ್ನ ಹೃದಯದ ಧ್ಯಾನ

(ಕೀರ್ತನೆ 19:14)

1. ನನ್ನ ಹೃದಯದ ಧ್ಯಾನ,

ದಿನನಿತ್ಯದ ಯೋಚನೆ,

ಮೆಚ್ಚಿಕೆಯಾಗಲಿ ನಿಂಗೆ,

ಸ್ಥಿರತೆಯ ಕೊಡೆನಗೆ.

ನಾ ಚಿಂತಾಕ್ರಾಂತನಾಗಿದ್ದು

ನಿದ್ರಾರಹಿತನಾಗಿರೆ,

ಧ್ಯಾನಿಸುವೆ ನಿನ್ನ ಬಗ್ಗೆ,

ಯೋಗ್ಯ ಕಾರ್ಯಗಳ ಬಗ್ಗೆ.

2. ಸತ್ಯ, ನಿರ್ಮಲ, ಸದ್ಗುಣ

ಇಂಥ ಆಲೋಚನೆಗಳು

ತರಲಿ ಶಾಂತಿಯೆನಗೆ.

ಮಾನ್ಯತಾ ವಿಷಯಗಳು,

ನಿನ್ನಾಲೋಚನೆ ಅಮೂಲ್ಯ,

ಎಣಿಕೆಗೆ ನಿಲುಕದು.

ನಿನ್ನ ವಾಕ್ಯ ಓದುತ್ತಿದ್ದು,

ಮಗ್ನನಾಗಿ ಇರ್ವೆ ನಾನು.