ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 134

ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

(ಪ್ರಕಟನೆ 21:1-5)

1. ನೋಡು ನಿನ್ನ, ನನ್ನ ಸಹ;

ಹೊಸ ಲೋಕದಲ್ಲಿ ಜೀವಿಸ್ವಾಗ.

ನಿನ್ನದೇನು ಅನಿಸಿಕೆ

ಶಾಂತಿಯ ಜೀವನ ಬಗೆಗೆ.

ಇರೋದಿಲ್ಲ ದುಷ್ಟ ಜನ,

ಇರುತೆ ದೇವಾಳ್ವಿಕೆ ಸದಾ.

ಆಗೋದಾಗ ಭೂಮಿಯ ಹೊಸಾರಂಭ,

ಹಾರ್ದಿಕ ಸ್ತುತಿಯು ಕೇಳಿ ಬರೋದಾಗ.

(ಪಲ್ಲವಿ)

ಯೆಹೋವ ದೇವಾ, ನೀನು ವಿಜೇತ!

ನೂತನವಾಯ್ತು ಪುತ್ರ ಮೂಲಕ.

ಹೃದಯದಿ ಉಕ್ಕೇರುತೆ ಹರ್ಷ ಗೀತೆ;

ನಿನಗೆ ಸಲ್ಲಲಿ ಸ್ತುತಿ, ಘನ, ಮಾನ.

2. ನೋಡು ನಿನ್ನ, ನನ್ನ ಸಹ;

ನೋಡು ಈಗ ನೂತನ ಲೋಕವ.

ಭೀಕರತೆ, ಆರ್ತನಾದ,

ಭಯವು ಇಲ್ಲವಲ್ಲಿ ಈಗ.

ಯೆಹೋವನ ನುಡಿ ಸತ್ಯ;

ಗುಡಾರದಲ್ಲಿದ್ದಾರೆ ಜನ.

ಎಬ್ಬಿಸುವನಾತ ಈಗ ಮೃತರ;

ಉಕ್ಕೇರುವುದಾಗ ಕೃತಜ್ಞತಾ ಗೀತೆ.

(ಪಲ್ಲವಿ)

ಯೆಹೋವ ದೇವಾ, ನೀನು ವಿಜೇತ!

ನೂತನವಾಯ್ತು ಪುತ್ರ ಮೂಲಕ.

ಹೃದಯದಿ ಉಕ್ಕೇರುತೆ ಹರ್ಷ ಗೀತೆ;

ನಿನಗೆ ಸಲ್ಲಲಿ ಸ್ತುತಿ, ಘನ, ಮಾನ.