ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೇಕೆ ಬೈಬಲನ್ನು ತಿಳಿದುಕೊಳ್ಳಬೇಕು?

ನೀವೇಕೆ ಬೈಬಲನ್ನು ತಿಳಿದುಕೊಳ್ಳಬೇಕು?

ಬೈಬಲ್‌ ಬಗ್ಗೆ ನಿಮಗೆ ಗೊತ್ತೆ? ಇತಿಹಾಸದಲ್ಲಿ ಬೇರೆ ಎಲ್ಲಾ ಪುಸ್ತಕಗಳಿಗಿಂತಲೂ ಹೆಚ್ಚು ವಿತರಿಸಲ್ಪಟ್ಟ ಗ್ರಂಥ ಇದಾಗಿದೆ. ಎಲ್ಲಾ ಸಂಸ್ಕೃತಿಯ ಜನರು ಈ ಗ್ರಂಥದಲ್ಲಿರುವ ಸಂದೇಶದಿಂದ ಸಾಂತ್ವನ ಹಾಗೂ ನಿರೀಕ್ಷೆಯನ್ನು ಕಂಡುಕೊಂಡಿದ್ದಾರೆ. ಮಾತ್ರವಲ್ಲ, ತಮ್ಮ ದಿನನಿತ್ಯದ ಜೀವನಕ್ಕೆ ನೆರವಾಗುವ ಸಲಹೆಯನ್ನೂ ಕಂಡುಕೊಂಡಿದ್ದಾರೆ. ಆದರೂ, ಇಂದು ಅನೇಕರಿಗೆ ಬೈಬಲಿನ ಕುರಿತು ಹೆಚ್ಚೇನೂ ತಿಳಿದಿಲ್ಲ. ನಿಮಗೆ ಧರ್ಮದಲ್ಲಿ ಆಸಕ್ತಿ ಇರಲಿ ಇಲ್ಲದಿರಲಿ, ಬೈಬಲಿನಲ್ಲಿ ಏನಿದೆ ಎಂದು ತಿಳಿಯುವ ಕುತೂಹಲ ಇರಬಹುದು. ಈ ಕಿರುಪುಸ್ತಿಕೆಯು, ಬೈಬಲಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಬೈಬಲನ್ನು ಓದಲು ಆರಂಭಿಸುವ ಮುಂಚೆ ಅದರ ಕುರಿತು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಬೈಬಲಿನಲ್ಲಿ ಒಟ್ಟು 66 ಪುಸ್ತಕಗಳು ಅಥವಾ ಭಾಗಗಳಿವೆ. ಅದು ಆದಿಕಾಂಡ ಎಂಬ ಪುಸ್ತಕದಿಂದ ಆರಂಭಗೊಂಡು ಪ್ರಕಟನೆ ಎಂಬ ಪುಸ್ತಕದೊಂದಿಗೆ ಕೊನೆಗೊಳ್ಳುತ್ತದೆ. ಬೈಬಲನ್ನು ‘ಪವಿತ್ರ ಶಾಸ್ತ್ರಗಳು’ ಎಂದು ಸಹ ಕರೆಯಲಾಗುತ್ತದೆ.

ಬೈಬಲಿನಲ್ಲಿರುವ ಸಂದೇಶ ಯಾರದ್ದು? ಈ ಪ್ರಶ್ನೆ ಮನಸ್ಸಿಗೆ ಬರುವುದು ಸಹಜ. ಏಕೆಂದರೆ, ಈ ಗ್ರಂಥವನ್ನು ಸುಮಾರು 40 ಮಂದಿ ಪುರುಷರು ಬರೆದರು ಮತ್ತು ಇದು ಸುಮಾರು 1600 ವರ್ಷಗಳ ಅವಧಿಯಲ್ಲಿ ಬರೆಯಲ್ಪಟ್ಟಿತು. ಆದರೆ ಗಮನಿಸಬೇಕಾದ ವಿಷಯವೇನಂದರೆ ಆ ಲೇಖಕರಲ್ಲಿ ಯಾರೊಬ್ಬರೂ ಬೈಬಲಿನಲ್ಲಿರುವ ಸಂದೇಶವನ್ನು ತಮ್ಮದೆಂದು ಹೇಳಿಕೊಳ್ಳಲಿಲ್ಲ. ಅವರಲ್ಲಿ ಒಬ್ಬ ಲೇಖಕನು ಹೇಳಿದ್ದು: “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ.” (2 ತಿಮೊಥೆಯ 3:16) ಇನ್ನೊಬ್ಬ ಲೇಖಕನು ಹೇಳಿದ್ದು: “ಯೆಹೋವನ ಆತ್ಮವು ನನ್ನಲ್ಲಿ ಉಸುರಿತು; ಆತನ ವಾಕ್ಯವು ನನ್ನ ಬಾಯಲ್ಲಿತ್ತು.” (2 ಸಮುವೇಲ 23:2) ಹೀಗೆ ಅವರು, ಬೈಬಲಿನ ಸಂದೇಶವು ವಿಶ್ವದ ಪರಮಾಧಿಕಾರಿಯಾಗಿರುವ ಯೆಹೋವ ದೇವರಿಂದಲೇ ಬಂದಿದೆ, ಆತನೇ ಅದರ ಗ್ರಂಥಕರ್ತ ಎಂಬುದನ್ನು ಸ್ಪಷ್ಟಪಡಿಸಿದರು. ಮಾತ್ರವಲ್ಲ, ಎಲ್ಲಾ ಮಾನವರು ತನ್ನ ಬಗ್ಗೆ ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ ಎಂಬುದನ್ನೂ ಆ ಲೇಖಕರು ತಿಳಿಸಿದರು.

ಬೈಬಲನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ ಬೈಬಲಿನ ಮುಖ್ಯ ವಿಷಯ ಏನಾಗಿದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳುವುದು ಅವಶ್ಯ. ಮಾನವರನ್ನು ಆಳಲು ತನಗೆ ಹಕ್ಕಿದೆ ಎಂಬುದನ್ನು ದೇವರು ತನ್ನ ಸ್ವರ್ಗೀಯ ರಾಜ್ಯದ ಮೂಲಕ ಸಾಬೀತುಪಡಿಸುವುದೇ ಆ ಮುಖ್ಯ ವಿಷಯ. ಬೈಬಲಿನ ಮೊದಲನೇ ಪುಸ್ತಕವಾದ ಆದಿಕಾಂಡದಿಂದ ಕೊನೆಯ ಪುಸ್ತಕವಾದ ಪ್ರಕಟನೆಯವರೆಗೆ ಈ ಮುಖ್ಯ ವಿಷಯವನ್ನು ಹೇಗೆ ವಿವರಿಸಲಾಗಿದೆ ಎಂಬುದನ್ನು ನೀವು ಮುಂದಿನ ಪುಟಗಳಲ್ಲಿ ನೋಡುವಿರಿ.

ಈ ಮೇಲಿನ ವಿಷಯವನ್ನು ನೆನಪಿನಲ್ಲಿಡುತ್ತಾ ಜಗತ್ಪ್ರಸಿದ್ಧ ಗ್ರಂಥವಾಗಿರುವ ಬೈಬಲಿನ ಸಂದೇಶವನ್ನು ಈಗ ಪರೀಕ್ಷಿಸಿರಿ.

^ ಪ್ಯಾರ. 9 ಪುಟಗಳ ಕೊನೆಯಲ್ಲಿ ಕೊಡಲಾಗಿರುವ ‘ಕಾಲಗಣನ ರೇಖೆ’ಯಲ್ಲಿ ‘ಕ್ರಿಸ್ತ ಪೂರ್ವ’ವನ್ನು ಕ್ರಿ.ಪೂ. ಎಂದೂ ‘ಕ್ರಿಸ್ತ ಶಕ’ವನ್ನು ಕ್ರಿ.ಶ. ಎಂದೂ ಸಂಕ್ಷಿಪ್ತ ರೂಪದಲ್ಲಿ ಕೊಡಲಾಗಿದೆ.