ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1

ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?

ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?

ದೇವರು ಬೈಬಲ್‌ನ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. 2 ತಿಮೊಥೆಯ 3:16

ದೇವರು ತನ್ನ ಆಲೋಚನೆಗಳನ್ನು ಒಂದು ಪವಿತ್ರ ಪುಸ್ತಕದಲ್ಲಿ ಬರೆಯಿಸಿದನು. ಆ ಪುಸ್ತಕವೇ ಬೈಬಲ್‌. ಅದರಲ್ಲಿ ಪ್ರಾಮುಖ್ಯ ವಿಷಯಗಳಿವೆ. ಅವುಗಳನ್ನು ನಾವು ತಿಳಿದುಕೊಳ್ಳಬೇಕೆಂದು ದೇವರು ಇಷ್ಟಪಡುತ್ತಾನೆ.

ನಮಗೆ ಯಾವುದು ಒಳ್ಳೇದು ಎಂದು ದೇವರಿಗೆ ಚೆನ್ನಾಗಿ ಗೊತ್ತಿದೆ. ಅವನು ನಮಗೆ ಬೇಕಾದ ಜ್ಞಾನವನ್ನು ಕೊಡುತ್ತಾನೆ. ಆ ಸುಜ್ಞಾನವನ್ನು ನೀವು ಪಡೆದುಕೊಳ್ಳಬೇಕಾದರೆ ಅವನ ಮಾತನ್ನು ಆಲಿಸಬೇಕು.—ಜ್ಞಾನೋಕ್ತಿ 1:5.

ಎಲ್ಲಾ ಜನರು ಬೈಬಲ್‌ ಓದಬೇಕೆಂದು ದೇವರು ಇಷ್ಟಪಡುತ್ತಾನೆ. ಅದು ಅನೇಕ ಭಾಷೆಗಳಲ್ಲಿ ದೊರೆಯುತ್ತದೆ.

ದೇವರ ಮಾತನ್ನು ಕೇಳಿಸಿಕೊಳ್ಳಬೇಕಾದರೆ, ನೀವು ಬೈಬಲನ್ನು ಓದಿ ಅರ್ಥಮಾಡಿಕೊಳ್ಳಬೇಕು.

ಪ್ರಪಂಚದಾದ್ಯಂತ ಜನರು ಆಲಿಸುತ್ತಿದ್ದಾರೆ. ಮತ್ತಾಯ 28:19

ಬೈಬಲನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ.

ಅವರು ಪ್ರಪಂಚದ ವಿವಿಧ ಭಾಗಗಳಲ್ಲಿರುವ ಜನರಿಗೆ ದೇವರ ಕುರಿತ ಸತ್ಯವನ್ನು ಕಲಿಸುತ್ತಿದ್ದಾರೆ.

ಸಮೀಪದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೂಡ ನೀವು ದೇವರ ಬಗ್ಗೆ ಕಲಿತುಕೊಳ್ಳಬಹುದು. ಕಲಿಯಲು ನೀವು ಹಣ ಕೊಡಬೇಕಾಗಿಲ್ಲ.