ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2

ಸೃಷ್ಟಿಕರ್ತನು ಯಾರು?

ಸೃಷ್ಟಿಕರ್ತನು ಯಾರು?

ಸಕಲವನ್ನು ಉಂಟುಮಾಡಿದ ಸೃಷ್ಟಿಕರ್ತನು ಒಬ್ಬನೇ. ಆತನ ಹೆಸರು ಯೆಹೋವ. (ಕೀರ್ತನೆ 83:18) ಆತನನ್ನು ನಾವು ಕಣ್ಣಿಂದ ನೋಡಲು ಸಾಧ್ಯವಿಲ್ಲ. ಆದರೆ ಅವನು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ ಹಾಗೂ ನಾವು ಸಹ ಅವನನ್ನು ಪ್ರೀತಿಸಬೇಕೆಂದು ಬಯಸುತ್ತಾನೆ. ಅಷ್ಟೇ ಅಲ್ಲ, ಎಲ್ಲರನ್ನೂ ನಾವು ಪ್ರೀತಿಸಬೇಕು ಎನ್ನುವುದು ಅವನ ಅಪೇಕ್ಷೆ. (ಮತ್ತಾಯ 22:35-40) ಅವನು ಅತ್ಯುನ್ನತನು, ಸತ್ಯ ದೇವರು ಆಗಿದ್ದಾನೆ.

ದೇವರು ಮೊದಲು ಸೃಷ್ಟಿಮಾಡಿದ್ದು ಒಬ್ಬ ಬಲಿಷ್ಠ ದೇವದೂತನನ್ನು. ಈ ದೇವದೂತನೇ ಮುಂದೆ ಯೇಸು ಕ್ರಿಸ್ತನೆಂದು ಪ್ರಖ್ಯಾತನಾದನು. ಯೆಹೋವನು ಇತರ ದೇವದೂತರನ್ನೂ ಸೃಷ್ಟಿಸಿದನು.

ಯೆಹೋವನು ಎಲ್ಲವನ್ನು ಸೃಷ್ಟಿಸಿದನು. ಆಕಾಶದಲ್ಲಿ ಇರುವುದನ್ನೂ . . .

ಭೂಮಿಯಲ್ಲಿ ಇರುವುದನ್ನೂ ಸೃಷ್ಟಿಸಿದನು. ಪ್ರಕಟನೆ 4:11

ಯೆಹೋವನು ನಕ್ಷತ್ರಗಳನ್ನು ಸೃಷ್ಟಿಸಿದನು. ಭೂಮಿಯನ್ನೂ ಅದರಲ್ಲಿರುವ ಎಲ್ಲವನ್ನೂ ಉಂಟುಮಾಡಿದನು.—ಆದಿಕಾಂಡ 1:1.

ದೇವರು ಮಣ್ಣಿನಿಂದ ಮೊದಲ ಮನುಷ್ಯನಾದ ಆದಾಮನನ್ನು ಉಂಟುಮಾಡಿದನು.—ಆದಿಕಾಂಡ 2:7.