ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4

ಅವರು ಸೈತಾನನ ಮಾತನ್ನು ಕೇಳಿದರು—ಪರಿಣಾಮ ಏನಾಯಿತು?

ಅವರು ಸೈತಾನನ ಮಾತನ್ನು ಕೇಳಿದರು—ಪರಿಣಾಮ ಏನಾಯಿತು?

ಆದಾಮ ಹವ್ವ ದೇವರ ಮಾತನ್ನು ಕೇಳಲಿಲ್ಲ. ಅದಕ್ಕೇ ಸಾವನ್ನಪ್ಪಿದರು. ಆದಿಕಾಂಡ 3:6, 23

ಹಾವಿನ ಮಾತನ್ನು ಕೇಳಿ ಹವ್ವ ಹಣ್ಣನ್ನು ತಿಂದಳು. ಅನಂತರ ಆದಾಮನಿಗೆ ಕೊಟ್ಟಾಗ ಅವನೂ ತಿಂದನು.

ಅವರು ಮಾಡಿದ್ದು ತಪ್ಪಾಗಿತ್ತು. ಅದೊಂದು ಪಾಪವಾಗಿತ್ತು. ಅದಕ್ಕೆ ದೇವರು ಅವರನ್ನು ಪರದೈಸ್‌ ಉದ್ಯಾನದಿಂದ ಹೊರಹಾಕಿದನು.

ಅಂದಿನಿಂದ ಅವರ ಹಾಗೂ ಅವರ ಮಕ್ಕಳ ಬದುಕು ತುಂಬ ಕಠಿನವಾಯಿತು. ಆದಾಮ ಹವ್ವ ಮುದಿಪ್ರಾಯ ತಲುಪಿ ಸತ್ತರು. ಮರಣದ ನಂತರ ಅವರು ಯಾವುದೇ ಆತ್ಮಲೋಕಕ್ಕೆ ಹೋಗಲಿಲ್ಲ. ಬದಲಿಗೆ ಇಲ್ಲವಾದರಷ್ಟೇ.

ಸತ್ತವರು ಮಣ್ಣಿನಂತೆಯೇ—ಜೀವವಿರುವುದಿಲ್ಲ. ಆದಿಕಾಂಡ 3:19

ಮನುಷ್ಯರೆಲ್ಲರೂ ಆದಾಮ ಹವ್ವರ ಸಂತತಿಯವರಾದ ಕಾರಣ ಸಾಯುತ್ತಾರೆ. ಸತ್ತವರು ನೋಡಲಾರರು, ಕೇಳಿಸಿಕೊಳ್ಳಲಾರರು, ಯಾವುದೇ ಕೆಲಸವನ್ನು ಮಾಡಲಾರರು.—ಪ್ರಸಂಗಿ 9:5, 10.

ಮನುಷ್ಯರು ಸಾಯುವುದು ಯೆಹೋವನ ಉದ್ದೇಶವಾಗಿರಲಿಲ್ಲ. ಆತನು ಸತ್ತವರನ್ನು ಪುನಃ ಜೀವಿಸುವಂತೆ ಮಾಡುತ್ತಾನೆ. ಅವರು ಅವನ ಮಾತನ್ನು ಕೇಳಿದರೆ ಸದಾಕಾಲ ಜೀವಿಸುವರು.