ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 6

ಮಹಾ ಜಲಪ್ರಳಯದಿಂದ ನಮಗೇನು ಪಾಠ?

ಮಹಾ ಜಲಪ್ರಳಯದಿಂದ ನಮಗೇನು ಪಾಠ?

ದೇವರು ನೋಹನ ಕಾಲದಲ್ಲಿ ಕೆಟ್ಟ ಜನರನ್ನು ನಾಶಮಾಡಿದನು. ನೋಹ ಮತ್ತವನ ಕುಟುಂಬವನ್ನು ರಕ್ಷಿಸಿದನು. ಆದಿಕಾಂಡ 7:11, 12, 23

40 ದಿನ ಹಗಲುರಾತ್ರಿ ಮಳೆ ಸುರಿಯಿತು. ಭೂಮಿ ಸಂಪೂರ್ಣವಾಗಿ ಜಲಾವೃತವಾಯಿತು. ಕೆಟ್ಟ ಜನರೆಲ್ಲಾ ಅಳಿದುಹೋದರು.

ಮಾನವ ರೂಪವನ್ನು ಧರಿಸಿದ್ದ ದೇವದೂತರೆಲ್ಲರು ಆ ರೂಪವನ್ನು ತೊರೆದರು. ನೀಚರಾದ ಇವರನ್ನು ದೆವ್ವಗಳೆಂದು ಕರೆಯಲಾಗುತ್ತದೆ.

ನಾವೆಯಲ್ಲಿದ್ದ ನೋಹ ಮತ್ತು ಅವನ ಮನೆಯವರು ಮಾತ್ರ ಸುರಕ್ಷಿತವಾಗಿದ್ದರು. ಅವರು ಈ ಭೂಮಿಯಲ್ಲಿ ಅನೇಕ ವರ್ಷ ಬದುಕಿ ಕಾಲಾನಂತರ ವಯಸ್ಸಾಗಿ ತೀರಿಹೋದರು. ಆದರೆ ದೇವರು ಅವರನ್ನು ಪುನಃ ಜೀವಕ್ಕೆ ತರುವನು. ಆಗ ಅವರಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯಿರುವುದು.

ದೇವರು ನಮ್ಮ ಕಾಲದಲ್ಲೂ ಕೆಟ್ಟ ಜನರನ್ನು ನಾಶಮಾಡುವನು. ಒಳ್ಳೆಯವರನ್ನು ರಕ್ಷಿಸುವನು. ಮತ್ತಾಯ 24:37-39

ಅಂದಿನಿಂದ ಸೈತಾನ ಮತ್ತು ಅವನ ದೆವ್ವಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಾ ಇವೆ.

ನೋಹನ ಕಾಲದ ಜನರಂತೆ ಇಂದು ಸಹ ಅನೇಕರು ದೇವರ ಪ್ರೀತಿಯ ಮಾರ್ಗದರ್ಶನವನ್ನು ತಳ್ಳಿಹಾಕುತ್ತಿದ್ದಾರೆ. ಕೆಟ್ಟ ಜನರನ್ನು ಯೆಹೋವನು ಬೇಗನೆ ನಾಶಮಾಡಲಿದ್ದಾನೆ.—2 ಪೇತ್ರ 2:5, 6.

ನೋಹನಂತೆ ಇಂದು ಕೂಡ ಕೆಲವರು ದೇವರ ಮಾತಿಗೆ ವಿಧೇಯತೆ ತೋರಿಸುತ್ತಿದ್ದಾರೆ. ಅವರೇ ಯೆಹೋವನ ಸಾಕ್ಷಿಗಳು.