ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

ಯೆಹೋವನ ಸಾಕ್ಷಿಗಳ ಪರಿಚಯ ನಿಮಗಿದೆಯೇ?

ಯೆಹೋವನ ಸಾಕ್ಷಿಗಳ ಪರಿಚಯ ನಿಮಗಿದೆಯೇ?

ಡೆನ್ಮಾರ್ಕ್‌

ಥೈವಾನ್‌

ವೆನಿಸ್ವೇಲ

ಭಾರತ

ನಿಮಗೆ ಯೆಹೋವನ ಸಾಕ್ಷಿಗಳ ಪರಿಚಯ ಇದೆಯೇ? ಅವರು ನಿಮ್ಮ ಮನೆಯ ಹತ್ತಿರವೇ ವಾಸಿಸುತ್ತಿರಬಹುದು, ನಿಮ್ಮೊಂದಿಗೆ ಕೆಲಸ ಅಥವಾ ವ್ಯಾಸಂಗ ಮಾಡುತ್ತಿರಬಹುದು. ನಿಮ್ಮನ್ನು ಭೇಟಿಯಾಗಿ ಬೈಬಲ್‌ ಬಗ್ಗೆ ತಿಳಿಸಿರಬಹುದು. ಯೆಹೋವನ ಸಾಕ್ಷಿಗಳಾದ ನಾವು ನಿಜವಾಗಿಯೂ ಯಾರಾಗಿದ್ದೇವೆ? ನಾವೇಕೆ ಬೈಬಲ್‌ ವಿಷಯಗಳನ್ನು ಬೇರೆಯವರಿಗೆ ತಿಳಿಸುತ್ತೇವೆ?

ಸಾಮಾನ್ಯ ಜನರಾಗಿದ್ದೇವೆ. ಯೆಹೋವನ ಸಾಕ್ಷಿಗಳಾದ ನಾವು ಬೇರೆ ಬೇರೆ ಹಿನ್ನೆಲೆಯಿಂದ ಬಂದವರಾಗಿದ್ದೇವೆ. ಯೆಹೋವನ ಸಾಕ್ಷಿಗಳಾಗುವ ಮುಂಚೆ ನಮ್ಮಲ್ಲಿ ಕೆಲವರು ವಿಭಿನ್ನ ಧಾರ್ಮಿಕ ಆಚಾರಗಳನ್ನು ಪಾಲಿಸುತ್ತಿದ್ದೆವು. ಇನ್ನು ಕೆಲವರು ದೇವರೇ ಇಲ್ಲ ಎಂದು ನಂಬಿದ್ದೆವು. ಆದರೆ ಬೈಬಲ್‌ನಲ್ಲಿ ಏನಿದೆ ಎಂದು ಪರೀಕ್ಷಿಸಿ ತಿಳಿದುಕೊಂಡೆವು. (ಅಪೊಸ್ತಲರ ಕಾರ್ಯಗಳು 17:11) ಅದರ ಬೋಧನೆಗಳು ಸತ್ಯ ಎಂದು ಮನಗಂಡ ನಂತರ ಯೆಹೋವ ದೇವರನ್ನು ಆರಾಧಿಸುವ ಸ್ವಂತ ಆಯ್ಕೆ ಮಾಡಿದೆವು.

ಬೈಬಲ್‌ ಓದುವುದರಿಂದ ಪ್ರಯೋಜನ ಪಡೆದಿದ್ದೇವೆ. ನಾವು ಸಹ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇವೆ. ನಮ್ಮಲ್ಲೂ ದೌರ್ಬಲ್ಯಗಳಿವೆ. ಆದರೆ ಬೈಬಲ್‌ನಲ್ಲಿ ಇರುವ ತತ್ವಗಳಿಗೆ ಅನುಗುಣವಾಗಿ ಜೀವಿಸಲು ಪ್ರಯತ್ನ ಮಾಡುತ್ತಿರುವುದರಿಂದ ಜೀವನದಲ್ಲಿ ಅನೇಕ ಸುಧಾರಣೆಗಳನ್ನು ಕಂಡಿದ್ದೇವೆ. (ಕೀರ್ತನೆ 128:1, 2) ನಮ್ಮ ಈ ಸ್ವಂತ ಅನುಭವದ ಕಾರಣ ಬೈಬಲ್‌ನಿಂದ ಕಲಿತ ವಿಷಯಗಳನ್ನು ನಾವು ಬೇರೆಯವರಿಗೆ ತಿಳಿಸುತ್ತೇವೆ.

ದೈವಿಕ ಮೌಲ್ಯಗಳನ್ನು ಪಾಲಿಸುತ್ತೇವೆ. ನಮ್ಮ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ದೇವರು ಬೈಬಲ್‌ನಲ್ಲಿ ತಿಳಿಸಿದ್ದಾನೆ. ಅವು ಆರೋಗ್ಯ ಕಾಪಾಡಿಕೊಳ್ಳುವಂತೆ, ಇತರರಿಗೆ ಗೌರವ ತೋರಿಸುವಂತೆ, ಪ್ರಾಮಾಣಿಕತೆ, ಪ್ರೀತಿ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಹಾಯ ಮಾಡುತ್ತವೆ. ಆ ಮೌಲ್ಯಗಳನ್ನು ಅನುಸರಿಸುವಾಗ ಆರೋಗ್ಯಕರವಾದ ಉತ್ತಮ ಸಮಾಜ ಕಟ್ಟಲು ಸಾಧ್ಯ. ಏಕೆಂದರೆ ಅವು ಕುಟುಂಬದ ಬಾಂಧವ್ಯವನ್ನು ಬಿಗಿಗೊಳಿಸುತ್ತವೆ ಮತ್ತು ನೈತಿಕತೆಯನ್ನು ವರ್ಧಿಸುತ್ತವೆ. “ದೇವರು ಪಕ್ಷಪಾತಿಯಲ್ಲ” ಎನ್ನುವುದು ನಮಗೆ ಮನವರಿಕೆ ಆಗಿರುವ ಕಾರಣ ಜಾತಿ ರಾಷ್ಟ್ರ ಎಂಬ ಭೇದವಿಲ್ಲದ ಒಂದು ಅಂತಾರಾಷ್ಟ್ರೀಯ ಕುಟುಂಬವಾಗಿ ಅಣ್ಣತಮ್ಮಂದಿರಂತೆ ಜೀವಿಸುತ್ತಿದ್ದೇವೆ. ನಾವು ಸಾಮಾನ್ಯ ಜನರಾಗಿದ್ದರೂ ನಮ್ಮಲ್ಲಿ ಅಸಾಧಾರಣ ಭಾವೈಕ್ಯವಿದೆ.—ಅಪೊಸ್ತಲರ ಕಾರ್ಯಗಳು 4:13; 10:34, 35.

  • ಬೇರೆಯವರಂತೆ ಯೆಹೋವನ ಸಾಕ್ಷಿಗಳೂ ಸಾಮಾನ್ಯ ಜನರು ಹೇಗೆ?

  • ಯೆಹೋವನ ಸಾಕ್ಷಿಗಳು ಬೈಬಲ್‌ನಿಂದ ಯಾವ ಮೌಲ್ಯಗಳನ್ನು ಕಲಿತಿದ್ದಾರೆ?