ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ಪಯನೀಯರ್‌ ಸೇವೆ ಅಂದರೇನು?

ಪಯನೀಯರ್‌ ಸೇವೆ ಅಂದರೇನು?

ಕೆನಡ

ಮನೆಮನೆ ಸೇವೆ

ಬೈಬಲ್‌ ಕಲಿಕೆ

ವ್ಯಕ್ತಿಗತ ಕಲಿಕೆ

ಹಿಂದೆ ಬರುವವರಿಗೆ ದಾರಿ ರಚಿಸಿ ಕೊಡಲು ಮುಂದೆ ಹೋಗುವ ವ್ಯಕ್ತಿಯನ್ನು “ಪಯನೀಯರ್‌” ಎಂದು ಕರೆಯುತ್ತಾರೆ. ಒಂದರ್ಥದಲ್ಲಿ ಯೇಸುವನ್ನು ಸಹ ಪಯನೀಯರ್‌ ಎಂದು ಹೇಳಬಹುದು. ರಕ್ಷಣೆಯ ಮಾರ್ಗ ಯಾವುದೆಂದು ಮಾನವರಿಗೆ ಸ್ಪಷ್ಟವಾಗಿ ತೋರಿಸಲು ಅವನು ಭೂಮಿಗೆ ಬಂದು ದೇವರ ಸೇವೆ ಆರಂಭಿಸಿದನು. (ಮತ್ತಾಯ 20:28) ಆತನ ಮಾದರಿಯನ್ನು ಅನುಸರಿಸುತ್ತಾ ಇಂದು ಅನೇಕರು ‘ಶಿಷ್ಯರನ್ನಾಗಿ ಮಾಡುವ’ ಕೆಲಸದಲ್ಲಿ ಬಹಳ ಸಮಯ ವ್ಯಯಿಸುತ್ತಿದ್ದಾರೆ. (ಮತ್ತಾಯ 28:19, 20) ಇನ್ನು ಕೆಲವರು ದೇವರ ಸೇವೆಗೆ ತಮ್ಮ ಹೆಚ್ಚಿನ ಸಮಯ ಶಕ್ತಿಯನ್ನು ಮುಡಿಪಾಗಿಟ್ಟಿದ್ದಾರೆ. ಅವರನ್ನು ಪಯನೀಯರ್‌ ಎಂದು ಕರೆಯುತ್ತೇವೆ.

ಪಯನೀಯರ್‌ ಸೇವೆ ಮಾಡುವವರು ಸುವಾರ್ತೆ ಸಾರಲು ಹೆಚ್ಚು ಸಮಯ ವ್ಯಯಿಸುತ್ತಾರೆ. ಯೆಹೋವನ ಸಾಕ್ಷಿಗಳೆಲ್ಲರೂ ಸುವಾರ್ತೆಯ ಪ್ರಚಾರಕರಾಗಿದ್ದಾರೆ. ಆದರೆ ಅವರಲ್ಲಿ ಕೆಲವರು ಪಯನೀಯರರಾಗಿ, ವಿಶೇಷ ಪಯನೀಯರರಾಗಿ ಮತ್ತು ಸಹಾಯಕ ಪಯನೀಯರರಾಗಿ ಸೇವೆ ಸಲ್ಲಿಸುತ್ತಾರೆ. ಪ್ರತಿ ತಿಂಗಳು 70 ತಾಸುಗಳನ್ನು ಸುವಾರ್ತೆ ಸಾರುವ ಕಾರ್ಯದಲ್ಲಿ ವ್ಯಯಿಸುವವರನ್ನು ಪಯನೀಯರ್‌ ಎಂದು ಕರೆಯುತ್ತಾರೆ. ದೇವರ ಸೇವೆಯಲ್ಲಿ ಅಷ್ಟು ತಾಸುಗಳನ್ನು ವ್ಯಯಿಸುವ ಸಲುವಾಗಿ ಅವರಲ್ಲಿ ಅನೇಕರು ಪೂರ್ಣಕಾಲಿಕ ಕೆಲಸದ ಬದಲು ಅರೆಕಾಲಿಕ ಕೆಲಸ ಮಾಡುತ್ತಾರೆ. ಸುವಾರ್ತೆ ಸಾರಲು ಪ್ರಚಾರಕರ ಆವಶ್ಯಕತೆ ಇರುವ ಕಡೆಗಳಲ್ಲಿ ವಿಶೇಷ ಪಯನೀಯರ್‌ ಅನ್ನು ನೇಮಿಸಲಾಗುತ್ತದೆ. ಅವರು ಪ್ರತಿ ತಿಂಗಳು 130 ಕ್ಕಿಂತ ಹೆಚ್ಚಿನ ತಾಸುಗಳನ್ನು ಸುವಾರ್ತೆ ಸಾರುವ ಕೆಲಸದಲ್ಲಿ ವ್ಯಯಿಸುತ್ತಾರೆ. ಪಯನೀಯರ್‌ ಸೇವೆ ಮಾಡುವವರು ಯೆಹೋವ ದೇವರ ಮೇಲೆ ಭಾರ ಹಾಕಿ ಸರಳ ಜೀವನ ನಡೆಸುತ್ತಾ ಆತನ ಸೇವೆಗೆ ಆದ್ಯತೆ ನೀಡುತ್ತಾರೆ. (ಮತ್ತಾಯ 6:31-33; 1 ತಿಮೊಥೆಯ 6:6-8) ದೇವರ ಸೇವೆಯಲ್ಲಿ ತಿಂಗಳೊಂದಕ್ಕೆ 70 ತಾಸು ವ್ಯಯಿಸಲು ಆಗದವರು ಸಹಾಯಕ ಪಯನೀಯರ್‌ ಸೇವೆ ಮಾಡಬಹುದು. ಅವರು ತಿಂಗಳೊಂದಕ್ಕೆ 30 ಅಥವಾ 50 ತಾಸು ವ್ಯಯಿಸಬಹುದು.

ಪಯನೀಯರ್‌ ಸೇವೆ ಮಾಡುವವರು ದೇವರ ಮೇಲೆ ಹಾಗೂ ಜನರ ಮೇಲೆ ಆಳವಾದ ಪ್ರೀತಿ ಇಟ್ಟಿರುತ್ತಾರೆ. ದೇವರ ಬಗ್ಗೆ ಆತನ ಇಷ್ಟದ ಬಗ್ಗೆ ಏನೂ ಅರಿಯದ ಜನರಿಗೆ ಯೇಸು ಸಹಾಯ ಮಾಡಿದನು. (ಮಾರ್ಕ 6:34) ಅದೇ ರೀತಿ ಆಧ್ಯಾತ್ಮಿಕವಾಗಿ ಅಂಧಕಾರದಲ್ಲಿರುವ ಜನರಿಗೆ ನಾವು ಸಹ ಸಹಾಯ ಮಾಡುತ್ತೇವೆ. ಈಗಲೂ ಭವಿಷ್ಯದಲ್ಲೂ ಅವರಿಗೆ ಪ್ರಯೋಜನ ತರಬಲ್ಲ ಬೈಬಲ್‌ ಜ್ಞಾನವನ್ನು ಹಂಚಿಕೊಳ್ಳುತ್ತೇವೆ. ಪಯನೀಯರರು ತಮ್ಮ ಸಮಯ ಹಾಗೂ ಶಕ್ತಿಯನ್ನು ಧಾರಾಳವಾಗಿ ಉಪಯೋಗಿಸಿ ದೇವರ ಬಗ್ಗೆ ಜನರಿಗೆ ತಿಳಿಸಲು ಕಾರಣ ಅವರ ಮೇಲಿರುವ ಪ್ರೀತಿ. (ಮತ್ತಾಯ 22:39; 1 ಥೆಸಲೊನೀಕ 2:8) ಪಯನೀಯರ್‌ ಸೇವೆ ಮಾಡುವವರಿಗೆ ದೇವರ ಮೇಲೆ ಹೆಚ್ಚು ನಂಬಿಕೆ ವಿಶ್ವಾಸ ಇರುತ್ತದೆ. ಅವರು ದೇವರಿಗೆ ಆಪ್ತರಾಗಿರುತ್ತಾರೆ. ಬದುಕಿನಲ್ಲಿ ಸಂತೋಷ ನೆಮ್ಮದಿ ಕಾಣುತ್ತಾರೆ.—ಅಪೊಸ್ತಲರ ಕಾರ್ಯಗಳು 20:35.

  • ಪಯನೀಯರ್‌ ಸೇವೆ ಅಂದರೇನು? ವಿವರಿಸಿ.

  • ಪಯನೀಯರರು ತಮ್ಮನ್ನು ಪೂರ್ತಿಯಾಗಿ ದೇವರ ಸೇವೆಗೆ ಅರ್ಪಿಸಿಕೊಳ್ಳಲು ಕಾರಣವೇನು?