ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 4

ತಪ್ಪು ಮಾಡಿದಾಗ ನಾನೇನು ಮಾಡಲಿ?

ತಪ್ಪು ಮಾಡಿದಾಗ ನಾನೇನು ಮಾಡಲಿ?

ಪ್ರಾಮುಖ್ಯವೇಕೆ?

ನೀವು ತಪ್ಪು ಒಪ್ಪಿಕೊಂಡರೆ ನಿಮಗೆ ಜವಾಬ್ದಾರಿ ಇದೆ, ನಿಮ್ಮನ್ನು ನಂಬಬಹುದು ಅಂತ ಜನರಿಗೆ ನಿಮ್ಮ ಬಗ್ಗೆ ಒಳ್ಳೇ ಅಭಿಪ್ರಾಯ ಬರುತ್ತೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಟಿಮ್‌ ತನ್ನ ಫ್ರೆಂಡ್ಸ್‌ ಜೊತೆ ಆಟ ಆಡುತ್ತಿದ್ದಾನೆ. ಅವನು ಬಾಲ್‌ ಎಸೆದಾಗ ಪಕ್ಕದ ಮನೆಯವರ ಕಾರಿಗೆ ಬಿದ್ದು ಗ್ಲಾಸ್‌ ಒಡೆದು ಹೋಗುತ್ತೆ!

ಟಿಮ್‌ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ನೀವೇನು ಮಾಡುತ್ತಿದ್ರಿ?

  1. ಓಡಿ ಹೋಗುತ್ತಿದ್ರಾ?

  2. ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಿದ್ರಾ?

  3. ನೀವೇ ಹೋಗಿ ತಪ್ಪು ಒಪ್ಪಿಕೊಂಡು ರಿಪೇರಿ ಮಾಡೋಕೆ ಹಣ ಕೊಡುತ್ತಿದ್ರಾ?

ಸಾಮಾನ್ಯವಾಗಿ ಈ ರೀತಿ ಏನಾದರೂ ತಪ್ಪಾದರೆ ಓಡಿಹೋಗುವುದೇ ಒಳ್ಳೇದು ಅಂತ ನಮಗೆ ಅನಿಸುತ್ತೆ. ಆದರೆ ನಾವು ಏನೇ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದು ಯಾವಾಗಲೂ ಒಳ್ಳೇದು.

ನಾವು ತಪ್ಪನ್ನು ಯಾಕೆ ಒಪ್ಪಿಕೊಳ್ಳಬೇಕು?

  1. ತಪ್ಪು ಒಪ್ಪಿಕೊಳ್ಳುವುದೇ ಸರಿ.

    ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು’ ಅಂತ ಬೈಬಲ್‌ ಹೇಳುತ್ತೆ.—ಇಬ್ರಿಯ 13:18.

  2. ತಪ್ಪು ಒಪ್ಪಿಕೊಂಡರೆ ಜನರು ಕ್ಷಮಿಸುತ್ತಾರೆ.

    “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 28:13.

  3. ಮುಖ್ಯವಾಗಿ ದೇವರಿಗೆ ಸಂತೋಷ ಆಗುತ್ತೆ.

    “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 3:32.

ಕರೀನಾ ಒಂದು ಸಲ ವೇಗವಾಗಿ ಗಾಡಿ ಓಡಿಸಿ ದಂಡ ಕಟ್ಟಿದ್ದಳು. ದಂಡ ಕಟ್ಟಿದ ಚೀಟಿ ಅಪ್ಪನಿಗೆ ಸಿಗಬಾರದು ಅಂತ ಬಚ್ಚಿಟ್ಟಿದ್ದಳು. “ಒಂದು ವರ್ಷ ಆದ ಮೇಲೆ ಆ ಚೀಟಿ ಹೇಗೋ ಅಪ್ಪನ ಕೈಗೆ ಸಿಕ್ಕಿತು. ಆಮೇಲೆ ದೊಡ್ಡ ಗಲಾಟೆ ಆಯಿತು” ಅಂತಾಳೆ ಕರೀನಾ.

ಇದರಿಂದ ನಾವು ಏನು ಕಲಿಯಬಹುದು? ಕರೀನಾ ಹೇಳುತ್ತಾಳೆ: “ತಪ್ಪನ್ನು ಮುಚ್ಚಿಡುವುದರಿಂದ ಒಳ್ಳೇದಕ್ಕಿಂತ ಕೆಟ್ಟದಾಗೋದೇ ಜಾಸ್ತಿ. ಆ ಕ್ಷಣಕ್ಕೆ ನಾವು ತಪ್ಪಿಸಿಕೊಳ್ಳಬಹುದು, ಆದರೆ ಇವತ್ತಲ್ಲ ನಾಳೆ ಸಿಕ್ಕಿಹಾಕಿಕೊಳ್ತೀವಿ.”

ನಾವು ತಪ್ಪುಗಳಿಂದ ಏನು ಕಲಿಯುತ್ತೇವೆ?

ಬೈಬಲ್‌ ಹೇಳುತ್ತೆ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” (ಯಾಕೋಬ 3:2, ಸತ್ಯವೇದವು) ಆ ತಕ್ಷಣನೇ ನೀವು ತಪ್ಪು ಒಪ್ಪಿಕೊಳ್ಳುವುದು ನಿಮ್ಮಲ್ಲಿರುವ ದೀನತೆ ಮತ್ತು ಪ್ರೌಢತೆಯನ್ನು ತೋರಿಸುತ್ತೆ.

ತಪ್ಪುಗಳಿಂದ ನಾವು ಪಾಠ ಕಲಿಯುತ್ತೇವೆ. ವೇರಾ ಅನ್ನೋ ಹುಡುಗಿ ಹೇಳುವುದು “ಸೋಲೇ ಗೆಲುವಿನ ಮೆಟ್ಟಿಲು ಅನ್ನೋ ಹಾಗೆ ತಪ್ಪಾದಾಗ ತಪ್ಪಿನಿಂದ ಪಾಠ ಕಲಿತು ಮುಂದೆ ಹೋಗ್ತೀನಿ. ಮತ್ತೆ ಅಂಥ ಪರಿಸ್ಥಿತಿ ಬಂದಾಗ ಹುಷಾರಾಗಿ ಇರುತ್ತೀನಿ.” ಮುಂದಿನ ಸನ್ನಿವೇಶಗಳಲ್ಲಿ ನೀವೇನು ಮಾಡುತ್ತೀರಾ ಅಂತ ನೋಡೋಣ.

ಅಪ್ಪನ ಬೈಕ್‌ ಓಡಿಸಿದಾಗ ಸ್ವಲ್ಪ ಡ್ಯಾಮೇಜ್‌ ಆಗುತ್ತೆ. ಈಗೇನು ಮಾಡುತ್ತೀರಾ?

  • ಅಪ್ಪನಿಗೆ ಗೊತ್ತಾಗಲ್ಲ ಅಂತ ಏನೂ ಹೇಳದೆ ಸುಮ್ಮನೆ ಇರುತ್ತೀರಾ?

  • ಏನಾಯಿತು ಅಂತ ನಿಜ ಹೇಳುತ್ತೀರಾ?

  • ತಪ್ಪನ್ನು ಬೇರೆಯವರ ಮೇಲೆ ಹಾಕುತ್ತೀರಾ?

ಚೆನ್ನಾಗಿ ಓದದೇ ಇದ್ದದರಿಂದ ಪರೀಕ್ಷೆಯಲ್ಲಿ ಫೇಲಾಗಿದ್ದೀರ. ಈಗೇನು ಮಾಡುತ್ತೀರಾ?

  • ಪರೀಕ್ಷೆ ಕಷ್ಟವಾಗಿತ್ತು ಅಂತ ಸುಳ್ಳು ಹೇಳುತ್ತೀರಾ?

  • ಓದಿಲ್ಲ ಅದಕ್ಕೇ ಫೇಲ್‌ ಆದೆ ಅಂತ ಒಪ್ಪಿಕೊಳ್ಳುತ್ತೀರಾ?

  • ಟೀಚರೇ ನನ್ನ ಫೇಲ್‌ ಮಾಡಿಬಿಟ್ಟರು ಅಂತ ಟೀಚರ್‌ ಮೇಲೆ ತಪ್ಪು ಹೊರಿಸುತ್ತೀರಾ?

ಈಗ ಒಂದು ನಿಮಿಷ ನೀವು ಅಪ್ಪನ ಸ್ಥಾನದಲ್ಲಿ ಮತ್ತು ಟೀಚರ್‌ ಸ್ಥಾನದಲ್ಲಿ ನಿಂತು ಯೋಚಿಸಿ. ತಪ್ಪನ್ನು ಒಪ್ಪಿಕೊಂಡಾಗ ಹೇಗನಿಸುತ್ತೆ?

ಆದ ತಪ್ಪಿನ ಬಗ್ಗೆನೇ ಯೋಚನೆ ಮಾಡುವುದು ಬರೀ ಕನ್ನಡಿನೇ ನೋಡಿಕೊಂಡು ಕಾರ್‌ ಓಡಿಸಿದಂತೆ

ತಪ್ಪನ್ನು ಮುಚ್ಚಿಟ್ಟರೆ ಹೇಗನಿಸುತ್ತೆ?

ನೀವು ಹೋದ ವರ್ಷ ಮಾಡಿದ ಯಾವುದಾದರೂ ಒಂದು ತಪ್ಪನ್ನು ನೆನಪಿಸಿಕೊಳ್ಳಿ. ಮುಂದಿನ ಪ್ರಶ್ನೆಗಳಿಗೆ ಉತ್ತರ ಕೊಡಿ.

ಏನು ತಪ್ಪು ಮಾಡಿದ್ರಿ? ಆಮೇಲೆ ಏನು ಮಾಡಿದ್ರಿ?

  • ಯಾರಿಗೂ ಹೇಳಲಿಲ್ಲ.

  • ಬೇರೆಯವರ ಮೇಲೆ ಹಾಕಿಬಿಟ್ಟೆ.

  • ತಪ್ಪು ಒಪ್ಪಿಕೊಂಡೆ.

ಒಂದುವೇಳೆ ತಪ್ಪನ್ನು ಮುಚ್ಚಿಹಾಕಿದರೆ ಆಮೇಲೆ ಹೇಗೆ ಅನಿಸಿತು?

  • ಅಬ್ಬಾ! ತಪ್ಪಿಸಿಕೊಂಡೆ ಅಂತ ಖುಶಿ ಆಯ್ತು.

  • ನಿಜ ಹೇಳಬೇಕಿತ್ತು ಅಂತ ಮನಸ್ಸು ಚುಚ್ಚುತ್ತಿತ್ತು.

ಬೇರೆ ಇನ್ನೇನು ಮಾಡಬಹುದಿತ್ತು?

ತಪ್ಪಿನಿಂದ ಯಾವ ಪಾಠ ಕಲಿತಿರಿ?

ನೀವೇನು ಹೇಳುತ್ತೀರಾ?

ಕೆಲವರು ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಯಾಕೆ?

ನೀವು ಯಾವಾಗಲೂ ತಪ್ಪನ್ನು ಮುಚ್ಚಿಹಾಕುತ್ತಾ ಇದ್ದರೆ ಬೇರೆಯವರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ? ನೀವು ತಪ್ಪನ್ನು ಒಪ್ಪಿಕೊಂಡರೆ ನಿಮ್ಮ ಬಗ್ಗೆ ಅವರಿಗೆ ಯಾವ ಅಭಿಪ್ರಾಯ ಬರುತ್ತೆ?—ಲೂಕ 16:10.