ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 10

ಬೈಬಲ್ ನನಗೆ ಹೇಗೆ ಸಹಾಯಮಾಡುತ್ತದೆ?

ಬೈಬಲ್ ನನಗೆ ಹೇಗೆ ಸಹಾಯಮಾಡುತ್ತದೆ?

ಪ್ರಾಮುಖ್ಯವೇಕೆ?

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ” ಎಂದು ಬೈಬಲ್‌ ಹೇಳುತ್ತದೆ. (2 ತಿಮೊಥೆಯ 3:16) ಬೈಬಲ್ ದೇವರಿಂದಾನೇ ಬಂದಿರುವುದರಿಂದ ನಿಮಗೆ ಬೇಕಾದ ಸಲಹೆ, ಮಾರ್ಗದರ್ಶನ ಖಂಡಿತ ಅದರಲ್ಲಿದೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಡೇವಿಡ್ ತನಗೆ ಗೊತ್ತಿಲ್ಲದೆ ಇರುವ ಒಂದು ಜಾಗಕ್ಕೆ ಹೋಗಿದ್ದಾನೆ. ಅಲ್ಲಿದ್ದ ಬೋರ್ಡ್‌ಗಳನ್ನು ನೋಡಿದಾಗ ‘ದಾರಿ ತಪ್ಪಿದ್ದೀನಿ’ ಅಂತ ಅವನಿಗೆ ಗೊತ್ತಾಗುತ್ತೆ. ದಾರಿಯಲ್ಲಿ ಬರುವಾಗ ಎಲ್ಲೋ ತಪ್ಪಾದ ಕಡೆ ತಿರುಗಿಕೊಂಡಿರಬಹುದು.

ಡೇವಿಡ್ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ನಿಮ್ಮ ಮುಂದೆ ಕೆಲವು ಆಯ್ಕೆಗಳಿವೆ:

  1. ಹೇಗೆ ಹೋಗಬೇಕು ಅಂತ ಯಾರನ್ನಾದರೂ ಕೇಳಬಹುದು.

  2. ನಕ್ಷೆ ಅಥವಾ ಜಿ.ಪಿ.ಎಸ್‌. ಬಳಸಬಹುದು.

  3. ದಾರಿ ಸಿಕ್ಕೋ ತನಕ ಹೋಗುತ್ತಾ ಇರಬಹುದು.

ಈ ಮೂರನೇ ಆಯ್ಕೆನಾ ಸಾಮಾನ್ಯವಾಗಿ ಯಾರೂ ಮಾಡಲ್ಲ.

ಎರಡನೇ ಆಯ್ಕೆ ಮೊದಲನೇದಕ್ಕಿಂತ ಒಳ್ಳೇದು. ಯಾಕೆಂದರೆ ನಕ್ಷೆ ಅಥವಾ ಜಿ.ಪಿ.ಎಸ್‌. ನಿಮ್ಮ ಕೈಯಲ್ಲೇ ಇರುತ್ತೆ ಮತ್ತು ಯಾವ ದಾರಿಯಲ್ಲಿ ಹೋಗಬೇಕು ಅಂತ ಸರಿಯಾಗಿ ತಿಳಿಸುತ್ತೆ.

ಬೈಬಲ್ ನಿಮಗೆ ಇದೇ ರೀತಿ ಸಹಾಯ ಮಾಡುತ್ತೆ!

ತುಂಬ ಬೇಡಿಕೆ ಇರುವ ಈ ಪುಸ್ತಕ:

  • ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಮಾಡುತ್ತೆ

  • ನೀವು ನಿಮ್ಮನ್ನು ಅರ್ಥಮಾಡಿಕೊಳ್ಳಲು ಮತ್ತು ಒಳ್ಳೇ ವ್ಯಕ್ತಿಯಾಗಲು ಸಹಾಯಮಾಡುತ್ತೆ

  • ಅತ್ಯುತ್ತಮ ಜೀವನ ನಡೆಸುವುದು ಹೇಗೆಂದು ತಿಳಿಸುತ್ತೆ

ಜೀವನದ ಅತಿ ದೊಡ್ಡ ಪ್ರಶ್ನೆಗಳಿಗೆ ಉತ್ತರ

ನಾವು ಮಾತು ಕಲಿತ ಕೂಡಲೇ ಪ್ರಶ್ನೆಗಳನ್ನು ಕೇಳಲು ಶುರುಮಾಡುತ್ತೇವೆ.

  • ಆಕಾಶ ಯಾಕೆ ನೀಲಿಯಾಗಿದೆ?

  • ನಕ್ಷತ್ರ ಯಾಕೆ ಮಿಂಚುತ್ತೆ?

ದೊಡ್ಡವರಾದ ಮೇಲೆ ನಮ್ಮ ಸುತ್ತಮುತ್ತ ನಡೆಯುವ ವಿಷಯದ ಬಗ್ಗೆ ಪ್ರಶ್ನೆ ಕೇಳುತ್ತೇವೆ.

ಈ ಎಲ್ಲಾ ಪ್ರಶ್ನೆಗಳಿಗೆ ಬೈಬಲ್‍ನಲ್ಲಿ ಉತ್ತರ ಇದ್ದರೆ?

ಬೈಬಲ್‍ನಲ್ಲಿ ಇರುವುದೆಲ್ಲಾ ಬರೀ ಕಟ್ಟು ಕಥೆ, ಅದೊಂದು ಹಳೇ ಕಾಲದ ಪುಸ್ತಕ, ಅದನ್ನು ಓದಿದರೂ ಅದು ಅರ್ಥ ಆಗಲ್ಲ ಅಂತ ಅನೇಕರು ಹೇಳುತ್ತಾರೆ. ಅವರು ಅಂದುಕೊಂಡಿರುವುದು ಸುಳ್ಳಾ? ಅಥವಾ ನಿಜನಾ?

ಉದಾಹರಣೆಗೆ, ಈ ಲೋಕ ದೇವರ ಕೈಯಲ್ಲಿದೆಯೆಂದು ಬೈಬಲ್‌ ಹೇಳುತ್ತೆ ಅಂತ ಜನ ನೆನಸುತ್ತಾರೆ. ಆದರೆ ಅದು ಹೇಗೆ ತಾನೇ ಸಾಧ್ಯ? ಈ ಲೋಕ ತೀರಾ ಹದಗೆಟ್ಟಿದೆ! ಎಲ್ಲಿ ನೋಡಿದರೂ ಸಾವು-ನೋವು, ಬಡತನ-ವಿಪತ್ತುಗಳೇ ತುಂಬಿವೆ. ನಮ್ಮನ್ನು ಪ್ರೀತಿಸುವ ದೇವರ ಕೈಯಲ್ಲಿ ಲೋಕ ಇದ್ದಿದ್ರೆ ಇದೆಲ್ಲಾ ಆಗುತ್ತಿತ್ತಾ?

ಹಾಗಾದರೆ ಲೋಕ ಯಾರ ಕೈಯಲ್ಲಿದೆ? ಇದನ್ನು ತಿಳಿಯಲು ಇಷ್ಟ ಇದೆಯಾ? ಈ ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರ ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತೆ!

ಈ ಕಿರುಹೊತ್ತಗೆಯಲ್ಲಿರುವ ಸಲಹೆಗಳನ್ನೆಲ್ಲಾ ಬೈಬಲ್‍ನಿಂದ ತೆಗೆದಿರುವುದನ್ನು ನೀವು ಗಮನಿಸಿರಬಹುದು. ನಮ್ಮೆಲ್ಲರಿಗೆ ಬೇಕಾದ ಸಲಹೆ, ಮಾರ್ಗದರ್ಶನ ಬೈಬಲ್‌ ಮಾತ್ರನೇ ಕೊಡುತ್ತೆ ಅನ್ನುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಸಂದೇಹನೇ ಇಲ್ಲ. ಯಾಕೆಂದರೆ ಅದು “ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16, 17) ಹಳೆಯದಾದರೂ ಜನರಿಗೆ ಇವತ್ತಿಗೂ ಸಹಾಯ ಮಾಡುತ್ತಿರುವ ಈ ಪುಸ್ತಕವನ್ನು ನೀವು ಓದಿ ನೋಡಲೇಬೇಕು!