ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3-ಪರಿಚಯ

ಭಾಗ 3-ಪರಿಚಯ

ಜಲಪ್ರಳಯದ ನಂತರ ಬದುಕಿದವರಲ್ಲಿ ಕೆಲವರು ಮಾತ್ರ ಯೆಹೋವನನ್ನು ಆರಾಧಿಸಿದರು. ಅವರಲ್ಲಿ ಒಬ್ಬ ಅಬ್ರಹಾಮ. ಇವನು ಯೆಹೋವನ ಸ್ನೇಹಿತ ಎಂದೇ ಹೆಸರುವಾಸಿ. ಅಬ್ರಹಾಮನನ್ನು ಯಾಕೆ ಹೀಗೆ ಕರೆಯಲಾಗಿದೆ? ಯಾಕೆಂದರೆ ಯೆಹೋವನಿಗೆ ಅಬ್ರಹಾಮನ ಮೇಲೆ ಪ್ರೀತಿ ಇತ್ತು ಮತ್ತು ಅವನಿಗೆ ಸಹಾಯಮಾಡಲು ಇಷ್ಟಪಟ್ಟನು. ಈ ನಿಜಾಂಶವನ್ನು ನಿಮ್ಮ ಮಗು ಅರ್ಥಮಾಡಿಕೊಳ್ಳಲು ಸಹಾಯಮಾಡಿ. ಅಬ್ರಹಾಮ, ಲೋಟ, ಯಾಕೋಬ ಮತ್ತು ಇತರ ನಂಬಿಗಸ್ತ ಜನರ ಹಾಗೆ ನಿಮ್ಮ ಮಗು ಸಹ ಯೆಹೋವನ ಸಹಾಯ ಪಡೆಯಬಹುದು. ಆದ್ದರಿಂದ ಯೆಹೋವನು ಏನೇ ಮಾತು ಕೊಟ್ಟರೂ ಖಂಡಿತ ಅದನ್ನು ಉಳಿಸಿಕೊಳ್ಳುತ್ತಾನೆ ಎಂದು ಭರವಸೆ ಇಡಲು ಕಲಿಸಿ.

ಈ ಭಾಗದಲ್ಲಿ

ಪಾಠ 7

ಬಾಬೆಲಿನ ಬುರುಜು

ಜನರು ಆಕಾಶವನ್ನು ಮುಟ್ಟುವಷ್ಟು ದೊಡ್ಡ ಪಟ್ಟಣ ಹಾಗೂ ಬುರುಜನ್ನು ಕಟ್ಟಲು ಕೈಹಾಕಿದರು. ದೇವರು ಇದ್ದಕ್ಕಿದ್ದಂತೆ ಅವರ ಭಾಷೆಯನ್ನು ಬದಲಾಯಿಸಿದ್ದೇಕೆ?

ಪಾಠ 8

ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು

ಅಬ್ರಹಾಮ ಮತ್ತು ಸಾರ ತಮ್ಮ ಆರಾಮವಾದ ಜೀವನವನ್ನು ಬಿಟ್ಟು ಅಲೆಮಾರಿಗಳಂತೆ ಜೀವಿಸಲು ಕಾನಾನಿಗೆ ಯಾಕೆ ಹೋದರು?

ಪಾಠ 9

ಕೊನೆಗೂ ಮಗನನ್ನು ಹೆತ್ತಳು!

ದೇವರು ಅಬ್ರಾಹಾಮನಿಗೆ ಕೊಟ್ಟ ಮಾತನ್ನು ಹೇಗೆ ನೆರವೇರಿಸಿದನು? ಈ ವಾಗ್ದಾನದಲ್ಲಿ ಅಬ್ರಹಾಮನ ಮಕ್ಕಳಲ್ಲಿ ಯಾರು ಒಳಗೂಡಿದ್ದಾರೆ? ಇಸಾಕನೋ ಅಥವಾ ಇಷ್ಮಾಯೇಲನೋ?

ಪಾಠ 10

ಲೋಟನ ಹೆಂಡತಿಯಿಂದ ಪಾಠ

ದೇವರು ಸೊದೋಮ್‌ ಮತ್ತು ಗೊಮೋರ ಪಟ್ಟಣಗಳನ್ನು ಬೆಂಕಿ ಮಳೆಯಿಂದ ನಾಶ ಮಾಡಿದನು. ಯಾಕೆ? ಲೋಟನ ಹೆಂಡತಿಯಿಂದ ನಾವೇನು ಕಲಿಯಬಹುದು?

ಪಾಠ 11

ನಂಬಿಕೆಯ ಪರೀಕ್ಷೆ

ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನು ಮೊರೀಯ ಬೆಟ್ಟದಲ್ಲಿ ಯಜ್ಞವಾಗಿ ನನಗೆ ಕೊಡು’ ಅಂದನು. ಈ ನಂಬಿಕೆಯ ಪರೀಕ್ಷೆಯನ್ನು ಅಬ್ರಹಾಮನು ಹೇಗೆ ಜಯಿಸಿದನು?

ಪಾಠ 12

ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಇಸಾಕ ಮತ್ತು ರೆಬೆಕ್ಕರಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಏಸಾವ ಮೊದಲನೇ ಮಗನಾಗಿದ್ದರಿಂದ ಅವನಿಗೆ ಬಾಧ್ಯತೆ ಸಿಗಲಿತ್ತು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಯಾಕೆ ಕೊಟ್ಟುಬಿಟ್ಟ?

ಪಾಠ 13

ಯಾಕೋಬ ಮತ್ತು ಏಸಾವ ಒಂದಾದರು

ಯಾಕೋಬ ದೇವದೂತನಿಂದ ಆಶೀರ್ವಾದ ಪಡೆದಿದ್ದು ಯಾಕೆ? ಯಾಕೋಬ ಏಸಾವನೊಂದಿಗೆ ಹೇಗೆ ಸಮಾಧಾನ ಮಾಡಿಕೊಂಡ?