ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 6-ಪರಿಚಯ

ಭಾಗ 6-ಪರಿಚಯ

ಕೊನೆಗೆ ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಬಂದಾಗ ದೇವಗುಡಾರ ಸತ್ಯಾರಾಧನೆಯ ಕೇಂದ್ರವಾಗಿತ್ತು. ಯಾಜಕರು ಧರ್ಮಶಾಸ್ತ್ರವನ್ನು ಬೋಧಿಸಿದರು, ನ್ಯಾಯಸ್ಥಾಪಕರು ಇಸ್ರಾಯೇಲ್‌ ಜನಾಂಗವನ್ನು ಮಾರ್ಗದರ್ಶಿಸಿದರು. ಒಬ್ಬ ವ್ಯಕ್ತಿ ಮಾಡಿದ ನಿರ್ಣಯಗಳು ಮತ್ತು ಕ್ರಿಯೆಗಳು ಇತರರ ಮೇಲೆ ಎಂಥ ಪ್ರಭಾವ ಬೀರುತ್ತದೆಂದು ಈ ಭಾಗದಲ್ಲಿ ತಿಳಿಯಬಹುದು. ಪ್ರತಿಯೊಬ್ಬ ಇಸ್ರಾಯೇಲ್ಯನು ಯೆಹೋವನಿಗೆ, ಜೊತೆ ಮಾನವರಿಗೆ ನಿಷ್ಠೆ ತೋರಿಸಬೇಕಿತ್ತು. ದೆಬೋರ, ನೊವೊಮಿ, ಯೆಹೋಶುವ, ಹನ್ನ, ಯೆಪ್ತಾಹನ ಮಗಳು ಮತ್ತು ಸಮುವೇಲ ಇವರು ತಮ್ಮ ಜನರ ಮೇಲೆ ಯಾವ ಪ್ರಭಾವ ಬೀರಿದರೆಂದು ಎಂಬುದನ್ನು ಒತ್ತಿ ಹೇಳಿ. ಅಲ್ಲದೇ, ಇಸ್ರಾಯೇಲ್ಯರಲ್ಲದ ರಾಹಾಬ, ರೂತ್‌, ಯಾಯೇಲ ಮತ್ತು ಗಿಬ್ಯೋನ್ಯರು ಇಸ್ರಾಯೇಲ್ಯರ ಪಕ್ಷವನ್ನು ಸೇರಿದ್ದರ ಬಗ್ಗೆ ಕೂಡ ತಿಳಿಸಿ.

ಈ ಭಾಗದಲ್ಲಿ

ಪಾಠ 29

ಯೆಹೋವನು ಯೆಹೋಶುವನನ್ನು ಆರಿಸಿದನು

ಯೆಹೋವನು ಯೆಹೋಶುವನಿಗೆ ಕೊಟ್ಟ ನಿರ್ದೇಶನಗಳಿಂದ ಇಂದು ನಮಗೂ ಪ್ರಯೋಜನವಿದೆ.

ಪಾಠ 30

ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು

ಯೆರಿಕೋವಿನ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು. ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ.

ಪಾಠ 31

ಯೆಹೋಶುವ ಮತ್ತು ಗಿಬ್ಯೋನ್ಯರು

ಯೆಹೋಶುವನು ದೇವರಿಗೆ, ‘ಸೂರ್ಯನೇ ಸ್ತಬ್ಧನಾಗಿ ನಿಲ್ಲು’ ಎಂದು ಪ್ರಾರ್ಥಿಸುತ್ತಾನೆ. ಆಗ ದೇವರು ಉತ್ತರಿಸಿದನಾ?

ಪಾಠ 32

ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಮಹಿಳೆಯರು

ಯೆಹೋಶುವ ಸತ್ತ ನಂತರ ಇಸ್ರಾಯೇಲ್ಯರು ವಿಗ್ರಹಗಳನ್ನು ಪೂಜಿಸಲು ಆರಂಭಿಸಿದರು. ಅವರು ಕಷ್ಟಗಳನ್ನು ಅನುಭವಿಸಿದರು. ಆದರೆ ನ್ಯಾಯಸ್ಥಾಪಕ ಬಾರೂಕ ಮತ್ತು ಪ್ರವಾದಿನಿ ದೆಬೋರ ಮತ್ತು ಯಾಯೇಲಳ ಮೂಲಕ ಸಹಾಯ ಸಿಕ್ಕಿತು.

ಪಾಠ 33

ರೂತ್‌ ಮತ್ತು ನೊಮೊಮಿ

ತಮ್ಮ ಗಂಡಂದಿರನ್ನು ಕಳೆದುಕೊಂಡ ಇಬ್ಬರು ಇಸ್ರಾಯೇಲಿಗೆ ಹಿಂತಿರುಗಿದರು. ರೂತಳು ಕೆಲಸಕ್ಕಾಗಿ ಹೋದಾಗ ಬೋವಜನನ್ನು ಕಂಡಳು.

ಪಾಠ 34

ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು

ಮಿದ್ಯಾನ್ಯರು ಇಸ್ರಾಯೇಲ್ಯರ ಜೀವನವನ್ನೇ ಕಷ್ಟಕರವನ್ನಾಗಿ ಮಾಡಿದಾಗ, ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಿಗೆ ಬೇಡಿದರು. ಗಿದ್ಯೋನನ ಚಿಕ್ಕ ಸೈನ್ಯ 1,35,000 ವೈರಿ ಸೈನಿಕರನ್ನು ಹೇಗೆ ಸೋಲಿಸಿತು?

ಪಾಠ 35

ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ

ಎಲ್ಕಾನ ಹನ್ನ, ಪೆನಿನ್ನ ಮತ್ತು ಮಕ್ಕಳನ್ನು ಆರಾಧನೆಗಾಗಿ ಶೀಲೋವಿನಲ್ಲಿದ್ದ ದೇವಗುಡಾರಕ್ಕೆ ಹೋಗುತ್ತಿದ್ದ. ಅಲ್ಲಿ ಒಬ್ಬ ಮಗನಿಗಾಗಿ ಹನ್ನಳು ಪ್ರಾರ್ಥಸಿದಳು. ಒಂದು ವರ್ಷದ ನಂತರ ಸಮುವೇಲ ಜನಿಸಿದನು!

ಪಾಠ 36

ಯೆಪ್ತಾಹ ಕೊಟ್ಟ ಮಾತು

ಯೆಪ್ತಾಹ ಏನೆಂದು ಮಾತು ಕೊಟ್ಟ ಮತ್ತು ಏಕೆ? ಈ ಮಾತಿಗೆ ಯೆಪ್ತಾಹನ ಮಗಳು ಹೇಗೆ ಪ್ರತಿಕ್ರಿಯಿಸಿದಳು?

ಪಾಠ 37

ಯೆಹೋವನು ಸಮುವೇಲನೊಂದಿಗೆ ಮಾತಾಡಿದ

ಮಹಾಯಾಜಕ ಏಲಿಯ ಇಬ್ಬರು ಗಂಡುಮಕ್ಕಳು ದೇವಗುಡಾರದಲ್ಲಿ ಯಾಜಕರಾಗಿ ಸೇವೆ ಮಾಡುತ್ತಿದ್ದರು. ಆದರೆ ದೇವರ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಆದರೆ ಹುಡುಗ ಸಮುವೇಲ ಭಿನ್ನನಾಗಿದ್ದ. ಯೆಹೋವನು ಸಮುವೇಲನೊಂದಿಗೆ ಮಾತಾಡಿದನು.

ಪಾಠ 38

ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಸಂಸೋನನಿಗೆ ಶಕ್ತಿ ಕೊಟ್ಟನು ಆದರೆ ಸಂಸೋನ ತಪ್ಪಾದ ನಿರ್ಧಾರ ಮಾಡಿದ್ದರಿಂದ ಫಿಲಿಷ್ಟಿಯರು ಅವನನ್ನು ಸೆರೆಮನೆಗೆ ಹಾಕಿದರು.