ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 8-ಪರಿಚಯ

ಭಾಗ 8-ಪರಿಚಯ

ಯೆಹೋವನು ಸೊಲೊಮೋನನಿಗೆ ದೇವಾಲಯವನ್ನು ಕಟ್ಟುವ ಸೌಭಾಗ್ಯ ಹಾಗೂ ಅಪಾರ ವಿವೇಕ ಕೊಟ್ಟು ಆಶೀರ್ವದಿಸಿದನು. ಆದರೆ ಸೊಲೊಮೋನ ಕ್ರಮೇಣ ಯೆಹೋವನಿಂದ ದೂರ ಹೋದ. ಸುಳ್ಳು ಆರಾಧಕರು ಸೊಲೊಮೋನನನ್ನು ಯೆಹೋವನಿಂದ ಹೇಗೆ ದೂರ ಮಾಡಿದರು ಎಂದು ಮಕ್ಕಳಿಗೆ ವಿವರಿಸಿ. ಇಸ್ರಾಯೇಲ್‌ ರಾಜ್ಯವು ಎರಡು ಭಾಗವಾಯಿತು. ಕೆಟ್ಟ ರಾಜರಿಂದ ಧರ್ಮಭ್ರಷ್ಟತೆ ಹಾಗೂ ವಿಗ್ರಹಾರಾಧನೆ ಜಾಸ್ತಿ ಆಯಿತು. ಈ ಸಮಯದಲ್ಲಿ ಯೆಹೋವನಿಗೆ ನಿಷ್ಠರಾಗಿದ್ದ ಅನೇಕ ಪ್ರವಾದಿಗಳನ್ನು ಹಿಂಸಿಸಿ ಕೊಲ್ಲಲಾಯಿತು. ಈಜೆಬೆಲ ರಾಣಿ ಉತ್ತರದ ರಾಜ್ಯಗಳು ಧರ್ಮಭ್ರಷ್ಟತೆಯಲ್ಲಿ ಮುಳುಗಿಹೋಗುವಂತೆ ಮಾಡಿದಳು. ಅದು ಇಸ್ರಾಯೇಲಿನ ಇತಿಹಾಸದಲ್ಲೇ ಅತಿ ಕರಾಳವಾದ ಸಮಯವಾಗಿತ್ತು. ಆದರೆ ಆಗಲೂ ರಾಜ ಯೆಹೋಷಾಫಾಟ ಹಾಗೂ ಪ್ರವಾದಿ ಎಲೀಯನಂಥ ಅನೇಕ ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿದ್ದರು.

ಈ ಭಾಗದಲ್ಲಿ

ಪಾಠ 44

ಯೆಹೋವನಿಗಾಗಿ ಒಂದು ಆಲಯ

ದೇವರು ರಾಜ ಸೊಲೊಮೋನನ ವಿನಂತಿಯನ್ನು ಕೇಳಿ ಅವನಿಗೆ ಅನೇಕ ಆಶೀರ್ವಾದಗಳನ್ನು ಕೊಟ್ಟನು.

ಪಾಠ 45

ರಾಜ್ಯ ಎರಡು ಭಾಗವಾಯಿತು

ಅನೇಕ ಇಸ್ರಾಯೇಲ್ಯರು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದರು.

ಪಾಠ 46

ಕರ್ಮೆಲ್‌ಬೆಟ್ಟದಲ್ಲಿ ಒಂದು ಪರೀಕ್ಷೆ

ಸತ್ಯ ದೇವರು ಯಾರು? ಯೆಹೋವನೋ ಅಥವಾ ಬಾಳನೋ?

ಪಾಠ 47

ಯೆಹೋವನು ಎಲೀಯನನ್ನು ಬಲಪಡಿಸಿದ

ದೇವರು ನಿಮ್ಮನ್ನು ಬಲಪಡಿಸುತ್ತಾನೆಂದು ನೆನಸುತ್ತೀರಾ?

ಪಾಠ 48

ವಿಧವೆಯ ಮಗ ಮತ್ತೆ ಬದುಕಿ ಬಂದ

ಒಂದೇ ಮನೆಯಲ್ಲಿ ಎರಡು ಅದ್ಭುತಗಳು!

ಪಾಠ 49

ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು

ಇಸ್ರಾಯೇಲ್ಯನಾದ ನಾಬೋತನ ದ್ರಾಕ್ಷಿ ತೋಟವನ್ನು ಕಿತ್ತುಕೊಳ್ಳಲಿಕ್ಕಾಗಿ ಈಜೆಬೆಲಳು ಅವನನ್ನು ಕೊಲ್ಲುವ ಯೋಜನೆ ಮಾಡುತ್ತಾಳೆ. ಅವಳ ಈ ಕೆಟ್ಟ ಕೆಲಸ ಮತ್ತು ಅನ್ಯಾಯವನ್ನು ಯೆಹೋವನು ನೋಡದೆ ಇರಲಿಲ್ಲ.

ಪಾಠ 50

ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು

ಯೆಹೂದಕ್ಕೆ ಶತ್ರು ರಾಜ್ಯಗಳಿಂದ ಬೆದರಿಕೆ ಬಂದಾಗ ಒಳ್ಳೆಯ ರಾಜನಾದ ಯೆಹೋಷಾಫಾಟನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದನು.