ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 10-ಪರಿಚಯ

ಭಾಗ 10-ಪರಿಚಯ

ಯೆಹೋವನು ಇಡೀ ವಿಶ್ವದ ರಾಜ. ಈ ಮುಂಚೆ ಎಲ್ಲವೂ ಆತನ ನಿಯಂತ್ರಣದಲ್ಲಿತ್ತು, ಮುಂದೆಯೂ ಎಲ್ಲವೂ ಆತನ ನಿಯಂತ್ರಣದಲ್ಲೇ ಇರುತ್ತದೆ. ಉದಾಹರಣೆಗೆ, ಯೆಹೋವನು ಯೆರೆಮೀಯನನ್ನು ಸಾವಿನ ದವಡೆಯಿಂದ ಕಾಪಾಡಿದನು. ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಧಗಧಗನೆ ಉರಿಯುವ ಬೆಂಕಿಯಿಂದ ಕಾಪಾಡಿದನು. ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು. ಯೆಹೋವನು ಎಸ್ತೇರಳನ್ನು ಸಂರಕ್ಷಿಸಿದ. ಇದರಿಂದ ಅವಳು ಇಡೀ ಇಸ್ರಾಯೇಲ್‌ ಜನಾಂಗವನ್ನು ಕಾಪಾಡಲು ಸಾಧ್ಯವಾಯಿತು. ಕೆಟ್ಟ ವಿಷಯಗಳು ಮುಂದುವರೆಯುವಂತೆ ಯೆಹೋವನು ಬಿಡುವುದಿಲ್ಲ. ದೊಡ್ಡ ಪ್ರತಿಮೆ ಮತ್ತು ಮರದ ಪ್ರವಾದನೆಗಳು ಯೆಹೋವನ ರಾಜ್ಯ ಬೇಗನೇ ಎಲ್ಲಾ ದುಷ್ಟತನವನ್ನು ತೆಗೆದುಹಾಕಿ ಭೂಮಿಯನ್ನು ಸದಾಕಾಲ ಆಳುವುದೆಂಬ ಖಾತ್ರಿಯನ್ನು ಕೊಡುತ್ತವೆ.

ಈ ಭಾಗದಲ್ಲಿ

ಪಾಠ 57

ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ

ಯೆರೆಮೀಯನ ಸಂದೇಶವನ್ನು ಕೇಳಿ ಯೆಹೂದದ ಹಿರಿಯರು ಕೋಪಗೊಂಡರು.

ಪಾಠ 58

ಯೆರೂಸಲೇಮ್‌ನಾಶವಾಯಿತು

ಯೆಹೂದದ ಜನರು ಬಿಡದೆ ಸುಳ್ಳುದೇವರುಗಳನ್ನು ಆರಾಧಿಸಿದರು. ಆದ್ದರಿಂದ ಯೆಹೋವನು ಅವರ ಕೈಬಿಟ್ಟನು.

ಪಾಠ 59

ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು

ಯುವ ಯೆಹೂದ್ಯರು ಬಾಬೆಲಿನ ನೆಬೂಕದ್ನೆಚ್ಚರನ ಆಸ್ಥಾನದಲ್ಲಿದ್ದರೂ ಯೆಹೋವನಿಗೆ ನಿಷ್ಠರಾಗಿ ಉಳಿಯಬೇಕೆಂದು ದೃಢತೀರ್ಮಾನ ಮಾಡಿದ್ದರು.

ಪಾಠ 60

ಸದಾಕಾಲ ಇರುವ ಸರಕಾರ

ನೆಬೂಕದ್ನೆಚ್ಚರನು ಕಂಡ ವಿಚಿತ್ರ ಕನಸಿನ ಅರ್ಥವನ್ನು ದಾನಿಯೇಲನು ತಿಳಿಸುತ್ತಾನೆ.

ಪಾಠ 61

ಅವರು ಅಡ್ಡಬೀಳಲಿಲ್ಲ

ಶದ್ರಕ್‌, ಮೇಶಕ್‌, ಅಬೇದ್‌ನೆಗೋ ನೆಬೂಕದ್ನೆಚ್ಚರನು ನಿಲ್ಲಿಸಿದ ದೊಡ್ಡ ಬಂಗಾರದ ಮೂರ್ತಿಗೆ ಅಡ್ಡಬೀಳಲಿಲ್ಲ.

ಪಾಠ 62

ದೊಡ್ಡ ಮರದಂತಿರುವ ರಾಜ್ಯ

ನೆಬೂಕದ್ನೆಚ್ಚರ ಕಂಡ ಕನಸು ಅವನ ಭವಿಷ್ಯವನ್ನೇ ತಿಳಿಸಿತು.

ಪಾಠ 63

ಗೋಡೆಯ ಮೇಲೆ ಕೈಬರಹ

ಈ ಗೋಡೆಯ ಮೇಲಿನ ರಹಸ್ಯ ಪದಗಳು ಯಾವಾಗ ಬರೆಯಲ್ಪಟ್ಟವು ಮತ್ತು ಅದರ ಅರ್ಥವೇನಾಗಿತ್ತು?

ಪಾಠ 64

ಸಿಂಹಗಳ ಗವಿಯಲ್ಲಿ ದಾನಿಯೇಲ

ದಾನಿಯೇಲನಂತೆ ದಿನಾಲೂ ಯೆಹೋವನಿಗೆ ಪ್ರಾರ್ಥಿಸಿ!

ಪಾಠ 65

ತನ್ನ ಜನರನ್ನು ಕಾಪಾಡಿದ ಎಸ್ತೇರ್‌

ಅನಾಥಳು ಮತ್ತು ಪರದೇಶದವಳಾಗಿದ್ದರೂ ಅವಳು ರಾಣಿಯಾದಳು.

ಪಾಠ 66

ಎಜ್ರನು ಧರ್ಮಶಾಸ್ತ್ರವನ್ನು ಕಲಿಸಿದ

ಏಜ್ರನ ಮಾತನ್ನು ಕೇಳಿದ ನಂತರ ಇಸ್ರಾಯೇಲ್ಯರು ದೇವರಿಗೆ ಒಂದು ಮಾತನ್ನು ಕೊಟ್ಟರು.

ಪಾಠ 67

ಯೆರೂಸಲೇಮಿನ ಗೋಡೆಗಳು

ವೈರಿಗಳು ದಾಳಿ ಮಾಡಬೇಕೆಂದು ಯೋಜಿಸಿದ್ದಾರೆಂದು ನೆಹೆಮೀಯನಿಗೆ ಗೊತ್ತಾಯಿತು. ಆಗ ಅವನೇಕೆ ಭಯಪಡಲಿಲ್ಲ?