ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 12-ಪರಿಚಯ

ಭಾಗ 12-ಪರಿಚಯ

ಯೇಸು ಜನರಿಗೆ ದೇವರ ರಾಜ್ಯದ ಬಗ್ಗೆ ಕಲಿಸಿದನು. ಅಷ್ಟೇ ಅಲ್ಲ, ದೇವರ ಹೆಸರು ಪವಿತ್ರೀಕರಿಸಲ್ಪಡಲಿಕ್ಕಾಗಿ, ಆತನ ರಾಜ್ಯಕ್ಕಾಗಿ, ಆತನ ಚಿತ್ತ ಭೂಮಿಯಲ್ಲಿ ನೇರವೇರಲಿಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನು. ಹೆತ್ತವರೇ, ಈ ಪ್ರಾರ್ಥನೆಯಿಂದ ನಮಗೇನು ಪ್ರಯೋಜನ ಎಂದು ಮಕ್ಕಳಿಗೆ ವಿವರಿಸಿ. ತನ್ನ ನಿಷ್ಠೆಯನ್ನು ಮುರಿಯಲು ಯೇಸು ಸೈತಾನನಿಗೆ ಅವಕಾಶ ಕೊಡಲಿಲ್ಲ. ಯೇಸು ತನ್ನ ಅಪೊಸ್ತಲರನ್ನು ಆರಿಸಿಕೊಂಡನು. ಇವರು ದೇವರ ರಾಜ್ಯದ ಮೊದಲ ಸದಸ್ಯರಾಗಿ ಪ್ರಾಮುಖ್ಯ ಪಾತ್ರ ವಹಿಸಲಿದ್ದರು. ಸತ್ಯಾರಾಧನೆಯ ಕಡೆಗೆ ಯೇಸುವಿಗಿದ್ದ ಹುರುಪನ್ನು ಗಮನಿಸಿ. ಬೇರೆಯವರಿಗೆ ಸಹಾಯ ಮಾಡಬೇಕೆಂದು ಯೇಸು ರೋಗಿಗಳನ್ನು ಗುಣಪಡಿಸಿದನು, ಹಸಿದವರಿಗೆ ಆಹಾರ ಕೊಟ್ಟನು, ಅಲ್ಲದೆ ಸತ್ತವರನ್ನು ಸಹ ಪುನರುತ್ಥಾನ ಮಾಡಿದನು. ದೇವರ ರಾಜ್ಯವು ಮಾನವರಿಗೆ ಏನೆಲ್ಲಾ ಮಾಡುವುದು ಎಂದು ಯೇಸು ಈ ಅದ್ಭುತಗಳ ಮೂಲಕ ತೋರಿಸಿದನು.

ಈ ಭಾಗದಲ್ಲಿ

ಪಾಠ 74

ಯೇಸು ಮೆಸ್ಸೀಯನಾದನು

ಯೋಹಾನನು ಯೇಸುವನ್ನು ದೇವರ ಕುರಿಮರಿ ಎಂದು ಏಕೆ ಹೇಳಿದನು?

ಪಾಠ 75

ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಪಿಶಾಚನು ಮೂರು ಬಾರಿ ಯೇಸುವನ್ನು ಪರೀಕ್ಷಿಸಿದನು. ಯೇಸುವಿಗೆ ಯಾವ ಮೂರು ಪರೀಕ್ಷೆಗಳು ಬಂದವು? ಯೇಸು ಪಿಶಾಚನಿಗೆ ಹೇಗೆ ಉತ್ತರ ಕೊಟ್ಟನು?

ಪಾಠ 76

ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ

ಯೇಸು ಹಗ್ಗಗಳಿಂದ ಕೊರಡೆ ಮಾಡಿ ಪ್ರಾಣಿಗಳನ್ನು ದೇವಾಲಯದಿಂದ ಹೊರಗೆ ಓಡಿಸಿ ಹಣ ವಿನಿಮಯಗಾರರ ಮೇಜುಗಳನ್ನು ಕೆಡವಿದ್ದು ಯಾಕೆ?

ಪಾಠ 77

ಬಾವಿಗೆ ಬಂದ ಸ್ತ್ರೀ

ಯೇಸು ಸಮಾರ್ಯ ಸ್ತ್ರೀಯ ಜೊತೆ ಮಾತಾಡಿದಾಗ ಅವಳಿಗೆ ಆಶ್ಚರ್ಯ ಆಯಿತು. ಏಕೆ? ಯಾರಿಗೂ ಹೇಳದ ಯಾವ ವಿಷಯವನ್ನು ಯೇಸು ಅವಳಿಗೆ ಹೇಳಿದನು?

ಪಾಠ 78

ಯೇಸು ದೇವರ ರಾಜ್ಯದ ಸುವಾರ್ತೆ ಸಾರಿದ

ಯೇಸು ಕೆಲವರನ್ನು ‘ಮನುಷ್ಯರನ್ನು ಹಿಡಿಯುವ ಮೀನುಗಾರರಾಗಲು’ ಆಮಂತ್ರಿಸಿದನು. ನಂತರ ಸುವಾರ್ತೆ ಸಾರಲು 70 ಮಂದಿಗೆ ತರಬೇತಿ ನೀಡಿದನು.

ಪಾಠ 79

ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ

ಕಾಯಿಲೆಬಿದ್ದ ಜನರು ಯೇಸು ಹೋದಲ್ಲೆಲ್ಲಾ ಬರುತ್ತಿದ್ದರು ಮತ್ತು ಯೇಸು ಅವರನ್ನು ಗುಣಮಾಡುತ್ತಿದ್ದನು. ಅವನು ತೀರಿಕೊಂಡ ಒಬ್ಬ ಹುಡುಗಿಯನ್ನೂ ಬದುಕಿಸಿದನು.

ಪಾಠ 80

ಯೇಸು ಹನ್ನೆರಡು ಅಪೊಸ್ತಲರನ್ನು ಆರಿಸಿದನು

ಅವನು ಅವರನ್ನು ಯಾಕೆ ಆರಿಸಿಕೊಂಡನು? ನಿನಗೆ ಅವರ ಹೆಸರುಗಳು ನೆನಪಿದೆಯಾ?

ಪಾಠ 81

ಪರ್ವತ ಪ್ರಸಂಗ

ಯೇಸು ಕೂಡಿ ಬಂದ ಜನರ ಗುಂಪಿಗೆ ಅಮೂಲ್ಯ ಪಾಠಗಳನ್ನು ಕಲಿಸುತ್ತಾನೆ.

ಪಾಠ 82

ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ

ಯಾವೆಲ್ಲಾ ವಿಷಯಗಳಿಗಾಗಿ ಬೇಡಿಕೊಳ್ಳುತ್ತಾ ಇರಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?

ಪಾಠ 83

ಯೇಸು ಸಾವಿರಾರು ಜನರಿಗೆ ಊಟ ಕೊಟ್ಟನು

ಈ ಅದ್ಭುತದಿಂದ ಯೇಸು ಮತ್ತು ಯೆಹೋವನ ಬಗ್ಗೆ ನಮಗೆ ಏನು ಗೊತ್ತಾಗುತ್ತದೆ?

ಪಾಠ 84

ಯೇಸು ನೀರಿನ ಮೇಲೆ ನಡೆಯುತ್ತಾನೆ

ಈ ಅದ್ಭುತವನ್ನು ನೋಡಿದಾಗ ಅಪೊಸ್ತಲರಿಗೆ ಹೇಗನಿಸಿತು ಗೊತ್ತಾ?

ಪಾಠ 85

ಯೇಸು ಸಬ್ಬತ್‌ದಿನದಂದು ವಾಸಿ ಮಾಡಿದನು

ಯೇಸು ಮಾಡಿದ್ದು ಕೆಲವರಿಗೆ ಇಷ್ಟ ಆಗಲಿಲ್ಲ ಏಕೆ?

ಪಾಠ 86

ಲಾಜರನ ಪುನರುತ್ಥಾನ

ಮರಿಯಳು ಅಳುವುದನ್ನು ನೋಡಿ ಯೇಸು ಸಹ ಅತ್ತನು. ಆದರೆ ಸ್ವಲ್ಪದರಲ್ಲೇ ಅವರು ಅಳುವುದನ್ನು ನಿಲ್ಲಿಸಿ ಸಂತೋಷಪಟ್ಟರು.