ಗೀತೆ 29
ಬಾಳುವೆವು ನಮ್ಮ ನಾಮದಂತೆ
-
1. ದೇವಾ ಯೆಹೋವ ಅಪಾರ ಬಲಾಡ್ಯ
ನಿನ್ನ ವಿವೇಕ ಅಪೂರ್ವ ನಿಧಿ.
ನಿನ್ನಲ್ಲಿ ಇಲ್ಲ ಅನ್ಯಾಯ ಅನೀತಿ
ನ್ಯಾಯ ಸದಾಕಾಲ ಸಾಗೋ ನದಿ.
ವಾತ್ಸಲ್ಯ, ಪ್ರೀತಿ ಅನಂತ ನಿನ್ನಲ್ಲಿ
ನಿನ್ನವರೇ ನಾವೆಂದೂ ಬಾಳಲ್ಲಿ.
(ಪಲ್ಲವಿ)
ಸಾಕ್ಷಿಗಳಾಗೋ ಸುಯೋಗ ಅಮೋಘ
ಬಾಳುವೆವು ನಾಮದಂತೆ ಸದಾ!
-
2. ದೇವಾ ಯೆಹೋವ ನಿನ್ನ ಪ್ರೀತಿಯಿಂದ
ಶಾಂತಿ ಸಮಾಧಾನ ನಮ್ಮಲ್ಲಿದೆ.
ಈ ಜೀವಮಾನ ಸಾರೋದೇ ಪ್ರಧಾನ
ಸೇವೇಲಿ ಸಂತೋಷ ಎಲ್ಲಾ ದಿನಾ.
ಎಲ್ಲೆಲ್ಲೂ ಸಾರುತ್ತೇವೆ ನಿನ್ನ ನಾಮ
ಸಲ್ಲಲಿ ಎಂದೆಂದೂ ನಿಂಗೆ ಘನ.
(ಪಲ್ಲವಿ)
ಸಾಕ್ಷಿಗಳಾಗೋ ಸುಯೋಗ ಅಮೋಘ
ಬಾಳುವೆವು ನಾಮದಂತೆ ಸದಾ!
(ಧರ್ಮೋ. 32:4; ಕೀರ್ತ. 43:3; ದಾನಿ. 2:20, 21 ಸಹ ನೋಡಿ.)