ಗೀತೆ 61
ಮುಂದೆ ಸಾಗಿರಿ
-
1. ಲೋಕವು ಅಂತ್ಯಕ್ಕೆ ಕಾಲಿಟ್ಟಾಗಿದೆ
ವಿರೋಧಿಯ ರೋಷವು ನೆತ್ತಿಗೇರಿದೆ
ಸ್ಥಿರ ನಿಲ್ಲಿ ದೇವ ಶಕ್ತೀಲಿ
ಅಂಜದೆ ಸಿಹಿ ಸುದ್ದಿಯನ್ನು ಸಾರಿ
(ಪಲ್ಲವಿ)
ಓ ಸೋದರವರ್ಗವೇ ಮುಂದೆ ಸಾಗಿರಿ
ಯೆಹೋವನ ಸೇವೇಲಿ ಎಂದೂ ಹರ್ಷಿಸಿ
ಆ ದೇವರ ರಾಜ್ಯವು ಸನಿಹವಿದೆ
ಎಂದು ಭೂಮಿಗೆಲ್ಲ ಸಾರಿ ಹೇಳಿ
-
2. ಹಾಯಾದ ಲೋಕದ ಆಸೆ ಏತಕೆ
ಈ ಲೋಕದ ಮೆಚ್ಚುಗೆ ಯಾಕೆ ಬೇಕಿದೆ
ದೇವ ಪ್ರೀತಿ ಒಂದೇ ಸಾಕಲ್ವಾ
ಎಂದಿಗೂ ಸರಿ ದಾರೀಲಿ ಸಾಗೋಕೆ
(ಪಲ್ಲವಿ)
ಓ ಸೋದರವರ್ಗವೇ ಮುಂದೆ ಸಾಗಿರಿ
ಯೆಹೋವನ ಸೇವೇಲಿ ಎಂದೂ ಹರ್ಷಿಸಿ
ಆ ದೇವರ ರಾಜ್ಯವು ಸನಿಹವಿದೆ
ಎಂದು ಭೂಮಿಗೆಲ್ಲ ಸಾರಿ ಹೇಳಿ
-
3. ದೇವರ ನಾಮಕೆ ಮಸಿ ಬಳಿದ
ಪಿಶಾಚನ ನಾಶವು ಹತ್ತಿರವಿದೆ
ಸಾರೋಣ ಇದನ್ನ ಎಲ್ಲೆಲ್ಲೂ
ಸಲ್ಲಿಸಿ ಯೆಹೋವಗೆ ಸ್ತುತಿ ಎಂದೂ
(ಪಲ್ಲವಿ)
ಓ ಸೋದರವರ್ಗವೇ ಮುಂದೆ ಸಾಗಿರಿ
ಯೆಹೋವನ ಸೇವೇಲಿ ಎಂದೂ ಹರ್ಷಿಸಿ
ಆ ದೇವರ ರಾಜ್ಯವು ಸನಿಹವಿದೆ
ಎಂದು ಭೂಮಿಗೆಲ್ಲ ಸಾರಿ ಹೇಳಿ
(ವಿಮೋ. 9:16; ಫಿಲಿ. 1:7; 2 ತಿಮೊ. 2:3, 4; ಯಾಕೋ. 1:27 ಸಹ ನೋಡಿ.)