ಗೀತೆ 79
ಸ್ಥಿರವಾಗಿ ನಿಲ್ಲಲು ಕಲಿಸೋಣ
-
1. ಪ್ರೀತಿಯ ಕೂಗನ್ನು ಕೇಳುತ್ತಾ
ಮುಂದಾದ ಮಂದೆಯನ್ನು,
ಯೆಹೋವ ಪೋಷಿಸೋ ರೀತಿಯ
ಕಾಣೋದೇ ನಮ್ಮಾನಂದ.
(ಪಲ್ಲವಿ)
ಕೇಳು ಯೆಹೋವ ದೇವರೇ,
ಮಂದೆಗೆ ಆಗು ಆಸರೆ.
ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,
ನಿಲ್ಲೋಕೆ ಸಾಮರ್ಥ್ಯ ನೀಡು.
-
2. ನೋವಲ್ಲಿ ಬೇಸತ್ತು ಹೋದಾಗ,
ಧೈರ್ಯದಿ ಸಾಗೋ ಹಾಗೆ,
ಸಂತೈಸಿ, ಪ್ರಾರ್ಥಿಸಿ, ಬೋಧಿಸಿ;
ಬೆಂಬಲ ನೀಡಿದೆವು.
(ಪಲ್ಲವಿ)
ಕೇಳು ಯೆಹೋವ ದೇವರೇ,
ಮಂದೆಗೆ ಆಗು ಆಸರೆ.
ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,
ನಿಲ್ಲೋಕೆ ಸಾಮರ್ಥ್ಯ ನೀಡು.
-
3. ನಿನ್ನಲ್ಲೇ ವಿಶ್ವಾಸ ತೋರಲಿ
ನೂರೆಂಟು ಕಷ್ಟದಲ್ಲೂ.
ಓಡುತ್ತಾ ಕ್ರಿಸ್ತನ ದಾರೀಲಿ,
ಗೆಲ್ಲಲಿ ಆಶೀರ್ವಾದ.
(ಪಲ್ಲವಿ)
ಕೇಳು ಯೆಹೋವ ದೇವರೇ,
ಮಂದೆಗೆ ಆಗು ಆಸರೆ.
ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,
ನಿಲ್ಲೋಕೆ ಸಾಮರ್ಥ್ಯ ನೀಡು.
(ಲೂಕ 6:48; ಅ. ಕಾ. 5:42; ಫಿಲಿ. 4:1 ಸಹ ನೋಡಿ)