ಗೀತೆ 89
ಆಲಿಸಿ, ಪಾಲಿಸಿ, ಖುಷಿಯಾಗಿರಿ!
-
1. ಕ್ರಿಸ್ತನ ಬೋಧನೆ ಕೇಳಲು ಚೆನ್ನ
ಆ ನೀತಿ ಪಾಠಗಳೆಲ್ಲ ಚಿನ್ನ
ಪಡೆದರೆ ದೇವ ಮಾರ್ಗದ ಜ್ಞಾನ
ಸುಮಧುರ ಆಗ ಈ ಜೀವನ
(ಪಲ್ಲವಿ)
ಆಲಿಸಿ ಪಾಲಿಸಿರಿ,
ದೇವರ ನೀತಿಯನ್ನು
ದೇವ ಆಶೀರ್ವಾದ ಹೊಂದುವಿರಿ
ಆಲಿಸಿ ಪಾಲಿಸಿರಿ.
-
2. ಬಂಡೆ ಮೇಲೆ ಕಟ್ಟಿದಂತ ಮನೆಯ
ಅಡಿಪಾಯ ದೃಢವಾಗಿರುತ್ತೆ
ಕ್ರಿಸ್ತನಂತೆ ಇಡುವಾಗ ಹೆಜ್ಜೆಯ;
ನಮ್ಮ ಬಾಳು ಸ್ಥಿರವಾಗಿರುತ್ತೆ.
(ಪಲ್ಲವಿ)
ಆಲಿಸಿ ಪಾಲಿಸಿರಿ,
ದೇವರ ನೀತಿಯನ್ನು
ದೇವ ಆಶೀರ್ವಾದ ಹೊಂದುವಿರಿ
ಆಲಿಸಿ ಪಾಲಿಸಿರಿ.
-
3. ನೀರಿನ ಕಾಲುವೆಯ ಬಳಿಯಿರೋ
ಸುಫಲವಾದ ಮರದಂತೆಯೇ,
ದೇವರ ಮಾತನ್ನು ಪಾಲಿಸುವಾಗ,
ಸುಫಲವು ನಮ್ಮ ಜೀವನವು!
(ಪಲ್ಲವಿ)
ಆಲಿಸಿ ಪಾಲಿಸಿರಿ,
ದೇವರ ನೀತಿಯನ್ನು
ದೇವ ಆಶೀರ್ವಾದ ಹೊಂದುವಿರಿ
ಆಲಿಸಿ ಪಾಲಿಸಿರಿ.