ಗೀತೆ 97
ವಾಕ್ಯವೇ ಜೀವಕ್ಕೆ ಆಧಾರ
-
1. ದೇವ ವಾಕ್ಯ ನಮ್ಮ ಸ್ವತ್ತು
ಬಾಳಿಗೆ ಬೆಳಕು.
ನೀರು ಆಹಾರ ಸಾಲದು
ಎಂದೆಂದೂ ಬಾಳಲು;
ದೇವ ವಾಕ್ಯ ಬೇಕು ಎಂದೂ
ಜೀವನ ಸಾಗಲು.
(ಪಲ್ಲವಿ)
ದೇವ ಪ್ರೇರಿತ ವಾಕ್ಯವೇ
ಜೀವಕ್ಕೆ ಆಧಾರ.
ಪ್ರೀತಿ ತುಂಬಿರೋ ಆ ಸ್ವರ
ಜೀವಕ್ಕೆ ಆಧಾರ.
-
2. ದೇವ ಮಿತ್ರರ ಮಾದರಿ
ಓದೋಣ ವಾಕ್ಯದಿ
ಸಾಗಿದರು ಆ ಧೀರರು
ಜೀವದ ಮಾರ್ಗದಿ;
ದೇವ ಮಿತ್ರರಂತೆ ನಾವೂ
ಸಾಗೋಣ ಧೈರ್ಯದಿ
(ಪಲ್ಲವಿ)
ದೇವ ಪ್ರೇರಿತ ವಾಕ್ಯವೇ
ಜೀವಕ್ಕೆ ಆಧಾರ.
ಪ್ರೀತಿ ತುಂಬಿರೋ ಆ ಸ್ವರ
ಜೀವಕ್ಕೆ ಆಧಾರ.
-
3. ಓದಿ, ಧ್ಯಾನಿಸಿ, ಪಾಲಿಸಿ
ವಾಕ್ಯ ಪ್ರತಿ ದಿನ;
ನೋವು ಸಂಕಟ ತಾಳಲು
ನೀಡುತ್ತೆ ಚೇತನ.
ಓದಿದ್ದನ್ನು ಎಂದೆಂದಿಗೂ
ಪ್ರೀತಿಸಿ ಬಾಳೋಣ.
(ಪಲ್ಲವಿ)
ದೇವ ಪ್ರೇರಿತ ವಾಕ್ಯವೇ
ಜೀವಕ್ಕೆ ಆಧಾರ.
ಪ್ರೀತಿ ತುಂಬಿರೋ ಆ ಸ್ವರ
ಜೀವಕ್ಕೆ ಆಧಾರ.
(ಯೆಹೋ. 1:8; ರೋಮ. 15:4 ಸಹ ನೋಡಿ)