ಗೀತೆ 113
ಶಾಂತಿಯ ಸಂಪತ್ತು
-
1. ಸರ್ವಶ್ರೇಷ್ಠ ದೇವರು
ನಮ್ಮ ಯೆಹೋವ.
ಕ್ರಿಸ್ತ ಯೇಸು ಮೂಲಕ
ಶಾಂತಿ ನೀಡುವ.
ಯುದ್ಧ ಭೂಮಿ ಆಗುತೆ
ಶಾಂತಿ ಸಾಮ್ರಾಜ್ಯ;
ಭೂಮಿಯಲ್ಲಿ ನೆಮ್ಮದಿ
ಬಾಳೋದು ನಿಜ.
-
2. ನಾವು ಕೋಪ ದ್ವೇಷದ
ಮಾತೇ ಆಡಲ್ಲ.
ಹಾನಿ ಮಾಡೋ ಆಯುಧ
ನಮ್ಮಲ್ಲಿ ಇಲ್ಲ.
ಎಲ್ಲರನ್ನು ಮನ್ನಿಸಿ
ಪ್ರೀತಿ ತೋರುತ್ತಾ;
ಯೇಸು ಮಾರ್ಗ ಪಾಲಿಸಿ
ಬಾಳೋಣ ಸದಾ.
-
3. ನಮ್ಮ ಪ್ರೀತಿ ಏಕತೆ
ಸಾಕ್ಷಿ ಹೇಳಿದೆ
ದೇವ ನೀಡೊ ಶಾಂತಿಯು
ನಮ್ಮ ಮೇಲಿದೆ
ನಾವು ಎಂದೂ ದೇವರ
ಆಜ್ಞೆ ಪಾಲಿಸಿ;
ಕಾಪಾಡೋಣ ಶಾಂತಿಯ
ಪ್ರೀತಿ ತೋರಿಸಿ.
(ಕೀರ್ತ 46:9; ಯೆಶಾ 2:4; ಯಾಕೋ 3:17, 18 ಸಹ ನೋಡಿ.)