ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 126

ಜಾಗ್ರತೆಯಿಂದಿರಿ, ಧೈರ್ಯವಾಗಿರಿ

ಜಾಗ್ರತೆಯಿಂದಿರಿ, ಧೈರ್ಯವಾಗಿರಿ

(1 ಕೊರಿಂಥ 16:13)

  1. 1. ಧೈರ್ಯದಿಂದ ಹೆಜ್ಜೆ ಹಾಕಿ

    ಭೀತಿಯ ಮೆಟ್ಟಿ ನಿಲ್ಲಿ

    ಬಂದರೂ ಯಾವ ಪರೀಕ್ಷೆ

    ನಿಷ್ಠೆಯ ತೋರಿ ಸಾಗಿ

    ಗೆದ್ದಿದಾನೆ ಯೇಸು ಲೋಕವ

    ಆತನಂತೆ ಹೆಜ್ಜೆ ಹಾಕುವ

    (ಪಲ್ಲವಿ)

    ಧೀರರಾಗಿ ಜಾಗ್ರತೆಯಿಂದ

    ಬೀಳದಂತೆ ಸಾಗೋಣ

  2. 2. ನಂಬಿಗಸ್ತ ಆಳು ನೀಡೋ

    ಕ್ರಿಸ್ತನ ಆಜ್ಞೆ ಕೇಳಿ

    ಪ್ರೀತಿಯಿಂದ ಮುಂದೆ ಬಂದು

    ಬೆಂಬಲ ನೀಡಿ ಎಂದೂ

    ಮುಂದೆ ನಿಂತು ಪ್ರಾಣ ಕಾಯುವ

    ಧೀರರ ಮಾತನ್ನ ಕೇಳುವ

    (ಪಲ್ಲವಿ)

    ಧೀರರಾಗಿ ಜಾಗ್ರತೆಯಿಂದ

    ಬೀಳದಂತೆ ಸಾಗೋಣ

  3. 3. ಐಕ್ಯವಾಗಿ ಮುಂದೆ ಸಾಗಿ

    ರಾಜ್ಯದ ವಾರ್ತೆ ಸಾರಿ

    ವೈರಿಯ ಎಲ್ಲಾ ಸಂಚನ್ನು

    ಭೇದಿಸಿ ಮುಂದೆ ಸಾಗಿ

    ಕ್ರಿಸ್ತನಂತೆ ಎಂದೂ ತಾಳಿರಿ

    ಜೀವದೋಟ ನೀವು ಗೆಲ್ಲಿರಿ

    (ಪಲ್ಲವಿ)

    ಧೀರರಾಗಿ ಜಾಗ್ರತೆಯಿಂದ

    ಬೀಳದಂತೆ ಸಾಗೋಣ