ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 135

ಯೆಹೋವನ ಸ್ನೇಹಪರ ಮನವಿ:“ನನ್ನ ಮಗನೇ, ವಿವೇಕಿಯಾಗಿರು”

ಯೆಹೋವನ ಸ್ನೇಹಪರ ಮನವಿ:“ನನ್ನ ಮಗನೇ, ವಿವೇಕಿಯಾಗಿರು”

(ಜ್ಞಾನೋಕ್ತಿ 27:11)

  1. 1. ನನ್ನ ಯುವ ತಾರೆಗಳೇ ಕಿವಿಗೊಡಿ,

    ನಿಮ್ಮ ಹೃದಯ ಗೂಡಲ್ಲಿ ನನ್ನಿರಿಸಿ.

    ಸಂಪೂರ್ಣ ಭಕ್ತಿಯ ಎಂದೆಂದೂ ನೀಡಿರಿ,

    ವೈರಿಯ ಆರೋಪ ಸುಳ್ಳೆಂದು ತೋರಿಸಿ.

    (ಪಲ್ಲವಿ)

    ಓ ಮಗನೇ, ಮಗಳೇ ಕೇಳು,

    ನನ್ನ ಮನವಿಯ ನೀನು.

    ಸಂತೋಷಪಡಿಸು ನನ್ನನ್ನು!

    ಮನಸಾರೆ ಆರಾಧಿಸು.

  2. 2. ಸರ್ವಸ್ವವ ನೀಡಿ ಆನಂದ ಖಾತರಿ!

    ನಾನೆತ್ತುವೆ ಬಿದ್ದರೂ ನೀವು ಎಡವಿ.

    ಯಾರೇನೇ ಮಾಡಲಿ ಯಾರೇ ಕೈಬಿಡಲಿ,

    ನನ್ನ ಕಣ್ಮಣಿಯಂತೆ ನೀನು ಇರುವಿ!

    (ಪಲ್ಲವಿ)

    ಓ ಮಗನೇ, ಮಗಳೇ ಕೇಳು,

    ನನ್ನ ಮನವಿಯ ನೀನು.

    ಸಂತೋಷಪಡಿಸು ನನ್ನನ್ನು!

    ಮನಸಾರೆ ಆರಾಧಿಸು.