ಗೀತೆ 138
ಸುಂದರ ಕಿರೀಟ - ಬೆಳ್ಳಿ ಕೂದಲು
-
1. ಬಾಳಿನ ಪ್ರಯಾಣದಿ
ಯೌವನ ಮರೆ;
ಸಾವಿರಾರು ಬಾಧೆಯ
ತಾಳಿದ ಪಡೆ!
ನೋವಿನಲ್ಲೂ ಸಂತಸ,
ತಾಳ್ಮೆ ತೋರಿದ
ವೀರರ ವಿಶ್ವಾಸವ
ಎಂದೂ ವರ್ಧಿಸು.
(ಪಲ್ಲವಿ)
ದೇವಾ ನೀನೇ ನೋಡು
ಎಂಥ ನಂಬಿಕೆ!
ನೀಡು ನೀ ಹಾರೈಕೆ,
ನಮ್ಮ ಕೋರಿಕೆ.
-
2. ಸುಂದರ ಕಿರೀಟವು
ಬೆಳ್ಳಿ ಕೂದಲು!
ದೇವ ಸೇವೆಗಾಗಿಯೇ
ಜೀವ ಮೀಸಲು!
ಪ್ರೀತಿಯಿಂದ ಮಾದರಿ
ತೋರೋ ದೀನರು
ದೇವರ ಕಣ್ಣೋಟದಿ
ಎಂದೂ ಶ್ರೇಷ್ಠರು!
(ಪಲ್ಲವಿ)
ದೇವಾ ನೀನೇ ನೋಡು
ಎಂಥ ನಂಬಿಕೆ!
ನೀಡು ನೀ ಹಾರೈಕೆ,
ನಮ್ಮ ಕೋರಿಕೆ.
(ಕೀರ್ತ. 71:9, 18; ಜ್ಞಾನೋ. 20:29; ಮತ್ತಾ. 25:21, 23; ಲೂಕ 22:28; 1 ತಿಮೊ. 5:1 ಸಹ ನೋಡಿ.)