ಗೀತೆ 144
ಹೊಸಲೋಕವ ನೋಡು ಮನದಿ
-
1. ಮರುಭೂಮಿಯಲ್ಲೂ ಹೂಗಳು,
ಅದ ನೋಡುತ್ತಾರೆ ಅಂಧರು!
ಮನತುಂಬೊ ಹಾಡು ಎಲ್ಲೆಡೆ,
ಎಲ್ಲಾ ಕಡೆ ಸಂತೋಷವೇ!
ಅಲ್ಲಿ ಸಾವೇ ಸೋತು ಹೋಗಿದೆ,
ಮರೆಯಾದ ಜೀವ ಬಂದಿದೆ!
(ಪಲ್ಲವಿ)
ಹೊಸ ಲೋಕಕ್ಕಾಗಿ ಕಾಯುನೀ,
ನೋಡು ಅದನು ಮನದಿ.
-
2. ಕುರಿ ಆಗ ತೋಳದೊಂದಿಗೆ,
ಹಸು ತಿನ್ನೋ ಮೇವು ಸಿಂಹಕೆ,
ಇದನೆಲ್ಲ ಕಾಯೋ ಬಾಲಕ,
ಆ ನೋಟವು ರೋಮಾಂಚಕ!
ಮರೆತೋಯ್ತು ನೋವಿನ ದನಿ,
ಇನ್ನು ಇಲ್ಲ ಕಣ್ಣ ಕಂಬನಿ!
(ಪಲ್ಲವಿ)
ಹೊಸ ಲೋಕಕ್ಕಾಗಿ ಕಾಯುನೀ,
ನೋಡು ಅದನು ಮನದಿ.
(ಯೆಶಾ 11:6-9; 35:5-7; ಯೋಹಾ 11:24 ಸಹ ನೋಡಿ.)