ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 1ಬಿ

ಯೆಹೆಜ್ಕೇಲ ಪುಸ್ತಕದ ಕಿರುನೋಟ

ಯೆಹೆಜ್ಕೇಲ ಪುಸ್ತಕದ ಕಿರುನೋಟ

ಯೆಹೆಜ್ಕೇಲ ಪುಸ್ತಕದಲ್ಲಿ ಏನಿದೆ?

ಅಧ್ಯಾಯ 1-3

ಕ್ರಿ.ಪೂ. 613 ರಲ್ಲಿ ಯೆಹೂದ್ಯರು ಬಾಬೆಲಿನ ಬಂಧಿವಾಸದಲ್ಲಿ ಇದ್ದಾಗ ಯೆಹೋವನು ಯೆಹೆಜ್ಕೇಲನಿಗೆ ದರ್ಶನ ತೋರಿಸಿದನು ಮತ್ತು ಕೆಬಾರ್‌ ನದಿಯ ಹತ್ರ ಇದ್ದ ಯೆಹೂದ್ಯರಿಗೆ ಭವಿಷ್ಯವಾಣಿ ತಿಳಿಸುವಂತೆ ಆಜ್ಞೆ ಕೊಟ್ಟನು.

ಅಧ್ಯಾಯ 4-24

ಕ್ರಿ.ಪೂ. 613 ರಿಂದ 609 ರವರೆಗೆ ಯೆಹೆಜ್ಕೇಲನು, ಯೆರೂಸಲೇಮ್‌ ಮತ್ತು ಅಲ್ಲಿನ ದುಷ್ಟ ವಿಗ್ರಹಾರಾಧಕ ಜನರ ವಿರುದ್ಧ ನ್ಯಾಯತೀರ್ಪನ್ನು ತಿಳಿಸಿದ್ದನು.

ಅಧ್ಯಾಯ 25-32

ಕ್ರಿ.ಪೂ. 609 ರಲ್ಲಿ ಯೆರೂಸಲೇಮಿನ ಮೇಲೆ ಬಾಬೆಲಿನವರ ಕೊನೇ ದಾಳಿ ಆರಂಭವಾಯ್ತು. ಅಲ್ಲಿವರೆಗೆ ಯೆರೂಸಲೇಮಿನ ಮೇಲೆ ನ್ಯಾಯತೀರ್ಪನ್ನ ಸಾರುತ್ತಿದ್ದ ಯೆಹೆಜ್ಕೇಲ ನಂತ್ರ, ಅದ್ರ ಸುತ್ತ ಮುತ್ತ ಇದ್ದ ವೈರಿಗಳಾದ ಅಮ್ಮೋನ್‌, ಎದೋಮ್‌, ಈಜಿಪ್ಟ್‌, ಮೋವಾಬ್‌, ಫಿಲಿಷ್ಟಿಯ, ಸೀದೋನ್‌, ತೂರ್‌ ವಿರುದ್ಧ ನ್ಯಾಯತೀರ್ಪನ್ನು ಸಾರಿದನು.

ಅಧ್ಯಾಯ 33-48

ಕ್ರಿ.ಪೂ. 606 ರಿಂದ ಯೆರೂಸಲೇಮ್‌ ಮತ್ತು ದೇವಾಲಯ ಹಾಳು ಬಿದ್ದಿತ್ತು. ಯೆರೂಸಲೇಮ್‌ನಿಂದ ನೂರಾರು ಕಿ.ಮೀ. ದೂರದಲ್ಲಿರೋ ಯೆಹೆಜ್ಕೇಲ ಯೆಹೋವ ದೇವರ ಶುದ್ಧ ಆರಾಧನೆ ಪುನಃಸ್ಥಾಪನೆ ಆಗುತ್ತೆ ಅನ್ನೋ ಸಿಹಿಸುದ್ದಿ ತಿಳಿಸಿದನು.

ಯೆಹೆಜ್ಕೇಲ ಪುಸ್ತಕದಲ್ಲಿ ಘಟನೆಗಳನ್ನ ಅವು ನಡೆದ ಕಾಲಾನುಸಾರ ಮತ್ತು ವಿಷಯಗಳಿಗನುಸಾರ ಬರೆಯಲಾಗಿದೆ. ಮೊದಲು ಯೆರೂಸಲೇಮಿನ ಮತ್ತು ದೇವಾಲಯದ ನಾಶನದ ಬಗ್ಗೆ ಭವಿಷ್ಯವಾಣಿ ತಿಳಿಸಲಾಗಿದೆ. ನಂತ್ರ ಶುದ್ಧ ಆರಾಧನೆ ಪುನಃಸ್ಥಾಪಿಸೋದ್ರ ಬಗ್ಗೆ ಅನೇಕ ಭವಿಷ್ಯವಾಣಿಗಳನ್ನ ನುಡಿಯಲಾಗಿದೆ. ಈ ಕ್ರಮ ಸರಿಯಾಗಿದೆ. ಯಾಕಂದ್ರೆ ದೇವಾಲಯ ನಾಶವಾಗಿ ಆರಾಧನೆ ನಡೀತಿಲ್ಲ ಅಂದ್ರೆನೇ ಪುನಃಸ್ಥಾಪನೆಯ ಅಗತ್ಯವಿರೋದು.

ಯೆರೂಸಲೇಮಿನ ನ್ಯಾಯತೀರ್ಪಿನ ಭವಿಷ್ಯವಾಣಿಯನ್ನು ನುಡಿದ ಮೇಲೆ ಯೆರೂಸಲೇಮಿನ ಸುತ್ತಲಿರೋ ಶತ್ರು ದೇಶಗಳ (ಅಧ್ಯಾಯ 25-32) ಬಗ್ಗೆ ಭವಿಷ್ಯವಾಣಿ ತಿಳಿಸಲಾಗಿದೆ. ಆಮೇಲೆ ಸತ್ಯಾರಾಧನೆಯ ಪುನಃಸ್ಥಾಪನೆಯ ಬಗ್ಗೆ ಭವಿಷ್ಯವಾಣಿ ತಿಳಿಸಲಾಗಿದೆ. ಯೆಹೆಜ್ಕೇಲನು ವಿರೋಧಿಗಳ ಬಗ್ಗೆ ಭವಿಷ್ಯವಾಣಿ ಹೇಳಿರೋದ್ರ ಬಗ್ಗೆ ಒಬ್ಬ ವಿದ್ವಾಂಸ ಹೀಗೆ ಹೇಳಿದ: “ವಿರೋಧಿಗಳ ಮೇಲೆ ದೇವರ ಕೋಪದ ಸಂದೇಶ ಸಾರಿದ ಮೇಲೆ ತನ್ನ ಜನರಿಗೆ ಕರುಣೆ ತೋರಿಸೋದ್ರ ಬಗ್ಗೆ ಹೇಳಿದ್ದು ಸೂಕ್ತವಾಗಿದೆ. ಯಾಕಂದ್ರೆ ದೇವರು ತನ್ನ ಜನರನ್ನು ಬಿಡಿಸಬೇಕಂದ್ರೆ ಶತ್ರುಗಳು ನಾಶ ಆಗಲೇಬೇಕಿತ್ತು.”

ಅಧ್ಯಾಯ 1, ಪ್ಯಾರ 18ಕ್ಕೆ ವಾಪಸ್‌ ಹೋಗಿ