ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 4ಎ

“ಆ ಜೀವಿಗಳನ್ನ ನಾನು ನೋಡ್ತಾ ಇದ್ದಾಗ”

“ಆ ಜೀವಿಗಳನ್ನ ನಾನು ನೋಡ್ತಾ ಇದ್ದಾಗ”

ಮನುಷ್ಯನ ತಲೆ ಮತ್ತು ರೆಕ್ಕೆಗಳಿರೋ ಹೋರಿಗಳ ಇಲ್ಲವೆ ಸಿಂಹಗಳ ಪ್ರತಿಮೆಗಳನ್ನ ಅರಮನೆ ಮತ್ತು ದೇವಾಲಯಗಳ ಮುಂದೆ ಕಾವಲುಗಾರರ ಹಾಗೆ ನಿಲ್ಲಿಸಿರೋದನ್ನ ಯೆಹೆಜ್ಕೇಲ ನೋಡಿರುತ್ತಾನೆ. ಹಿಂದಿನ ಕಾಲದ ಅಶ್ಶೂರ ಮತ್ತು ಬಾಬೆಲಿನಲ್ಲಿ ಇಂಥ ಪ್ರತಿಮೆಗಳು ತುಂಬ ಇದ್ದವು. ಇವುಗಳಲ್ಲಿ ಕೆಲವು ಹತ್ತಿರತ್ತಿರ 20 ಅಡಿ ಇದ್ದವು. ಯೆಹೆಜ್ಕೇಲ ಮತ್ತು ದಾರಿಹೋಕರು ಆ ಭಯಂಕರ ಪ್ರತಿಮೆಗಳನ್ನ ಕಣ್ಣು-ಬಾಯಿ ಬಿಟ್ಟು ನೋಡಿರಬಹುದು. ಅವು ಎಷ್ಟೇ ಶಕ್ತಿಶಾಲಿಯಾಗಿ ಕಾಣಿಸಿದ್ರೂ ಅವುಗಳಿಗೆ ಜೀವ ಇರಲಿಲ್ಲ, ಅವುಗಳನ್ನ ಕಲ್ಲಿನಿಂದ ಕೆತ್ತಲಾಗಿತ್ತು.

ಆದರೆ ಯೆಹೆಜ್ಕೇಲ ದರ್ಶನದಲ್ಲಿ ನೋಡಿದ್ದು “ಜೀವಿಗಳನ್ನ.” ಅವು ಪ್ರತಿಮೆಗಳ ತರ ಇರಲಿಲ್ಲ, ಅವುಗಳಿಗೆ ಜೀವ ಇತ್ತು! ಯೆಹೆಜ್ಕೇಲ “ಜೀವಿ” ಅನ್ನೋ ಪದವನ್ನ ತನ್ನ ಭವಿಷ್ಯವಾಣಿಯ ಆರಂಭದಲ್ಲೇ 10ಕ್ಕೂ ಹೆಚ್ಚು ಸಾರಿ ಉಪಯೋಗಿಸಿದ್ದಾನೆ. (ಯೆಹೆ. 1:5-22) ಅವುಗಳನ್ನ ನೋಡಿದಾಗ ಯೆಹೆಜ್ಕೇಲನಿಗೆ ತುಂಬ ಆಶ್ಚರ್ಯ ಆಗಿರಬೇಕು ಅಂತ ಇದರಿಂದ ಗೊತ್ತಾಗುತ್ತೆ. ಯೆಹೋವನ ಸಿಂಹಾಸನದ ಕೆಳಗೆ ಈ ನಾಲ್ಕು ಜೀವಿಗಳು ಒಟ್ಟೊಟ್ಟಿಗೆ ಒಂದೇ ಕಡೆಗೆ ಸಾಗುತ್ತಿದ್ದವು. ಇದ್ರಿಂದ, ಯೆಹೋವನಿಗೆ ಎಲ್ಲಾ ಸೃಷ್ಟಿಯ ಮೇಲೆ ಸಂಪೂರ್ಣ ನಿಯಂತ್ರಣ ಇದೆ ಅಂತ ಯೆಹೆಜ್ಕೇಲನ ಮನಸ್ಸಲ್ಲಿ ನಾಟಿರಬೇಕು. ಇವತ್ತು, ನಾವು ಆ ದರ್ಶನದ ಬಗ್ಗೆ ಧ್ಯಾನಿಸುವಾಗ ಯೆಹೋವನು ಮಹಾನ್‌ ದೇವರು, ಸರ್ವಶಕ್ತ ಮತ್ತು ಇಡೀ ವಿಶ್ವದ ರಾಜ ಅನ್ನೋ ವಿಷ್ಯ ನಮ್ಮ ಮನಸ್ಸಲ್ಲೂ ನಾಟುತ್ತೆ.—1 ಪೂರ್ವ. 29:11.