ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 21ಎ

‘ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಭಾಗ’

‘ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಭಾಗ’

ಯೆಹೆಜ್ಕೇಲ 48:8

ಯೆಹೋವನು ಪ್ರತ್ಯೇಕಿಸಿದ ಭಾಗವನ್ನ, ಯೆಹೆಜ್ಕೇಲನು ಹತ್ತಿರ ಹೋಗಿ ನೋಡುವಾಗ ನಾವು ಸಹ ಅವನ ಜೊತೆ ಹೋಗೋಣ. ಇದರಲ್ಲಿ 5 ಭಾಗಗಳಿವೆ. ಅವು ಯಾವುವು? ಅವು ಯಾವ ಉದ್ದೇಶಕ್ಕಾಗಿ ಇವೆ?

ಎ. “ಕಾಣಿಕೆ”

ಇದು ಸರಕಾರದ ಕೆಲಸಕ್ಕಾಗಿ ಅಂದ್ರೆ ‘ಆಡಳಿತಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ’ ಪ್ರತ್ಯೇಕಿಸಲಾದ ಜಮೀನು

ಯೆಹೆ. 48:8

ಬಿ. “ಕಾಣಿಕೆಯಾಗಿರೋ ಇಡೀ ಪ್ರದೇಶ”

ಇದನ್ನ ಪುರೋಹಿತರಿಗಾಗಿ, ಲೇವಿಯರಿಗಾಗಿ ಮತ್ತು ಪಟ್ಟಣಕ್ಕಾಗಿ ಪ್ರತ್ಯೇಕಿಸಲಾಗಿತ್ತು. ಅಷ್ಟೇ ಅಲ್ಲ, ಇಸ್ರಾಯೇಲ್ಯರ 12 ಕುಲದವರು ಸಹ ಯೆಹೋವನನ್ನ ಆರಾಧಿಸಲಿಕ್ಕೆ ಮತ್ತು ಆಡಳಿತದ ಏರ್ಪಾಡನ್ನ ಬೆಂಬಲಿಸಲಿಕ್ಕೆ ಇಲ್ಲೇ ಬರುತ್ತಿದ್ದರು.

ಯೆಹೆ. 48:20

ಸಿ. “ಪ್ರಧಾನನ ಪ್ರದೇಶ”

‘ಅದು ಇಸ್ರಾಯೇಲಿನಲ್ಲಿ ಪ್ರಧಾನನ ಆಸ್ತಿಯಾಗಿತ್ತು.’

‘ಆ ಪ್ರದೇಶ ಪ್ರಧಾನನಿಗಾಗಿ ಇತ್ತು.’

ಯೆಹೆ. 45:7, 8; 48:21, 22

ಡಿ. “ಪವಿತ್ರ ಕಾಣಿಕೆ”

ಈ ಸ್ಥಳವನ್ನ ‘ಪವಿತ್ರ ಭಾಗ’ ಅಂತನೂ ಕರೆಯಲಾಗಿದೆ. ಇದ್ರಲ್ಲಿ ಮೇಲಿನ ಭಾಗ “ಲೇವಿಯರಿಗಾಗಿ” ಇತ್ತು. ಮಧ್ಯದ ಭಾಗ ‘ಪುರೋಹಿತರಿಗಾಗಿ ಪವಿತ್ರ ಕಾಣಿಕೆಯಾಗಿ ಇತ್ತು.’ ಇಲ್ಲಿ ‘ಪುರೋಹಿತರ ಮನೆಗಳಿದ್ದವು ಮತ್ತು ಆರಾಧನಾ ಸ್ಥಳಕ್ಕಾಗಿ ಒಂದು ಪವಿತ್ರ ಸ್ಥಳ’ ಇತ್ತು.

ಯೆಹೆ. 45:1-5; 48:9-14

ಇ. “ಉಳಿದ ಪ್ರದೇಶ”

‘ಇದು ಎಲ್ಲ ಇಸ್ರಾಯೇಲ್ಯರಿಗೆ ಸ್ವಂತವಾಗಿತ್ತು’ ಮತ್ತು ‘ಪಟ್ಟಣದ ಸಾಮಾನ್ಯ ಉಪಯೋಗಕ್ಕಾಗಿತ್ತು. ಅಲ್ಲಿ ಮನೆಗಳು, ಹುಲ್ಲುಗಾವಲುಗಳು ಇದ್ವು.’

ಯೆಹೆ. 45:6; 48:15-19