ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 5

ಸರಿಯಾದ ಓದುವಿಕೆ

ಸರಿಯಾದ ಓದುವಿಕೆ

1 ತಿಮೊಥೆಯ 4:13

ಏನು ಮಾಡಬೇಕು: ಪುಟದಲ್ಲಿ ಹೇಗಿದೆಯೋ ಅದನ್ನು ಹಾಗೆಯೇ ಗಟ್ಟಿಯಾಗಿ ಓದಿ.

ಹೇಗೆ ಮಾಡಬೇಕು:

  • ಚೆನ್ನಾಗಿ ತಯಾರಿ ಮಾಡಿ. ನೀವು ಓದಲಿರುವ ಭಾಗವನ್ನು ಯಾಕೆ ಬರೆಯಲಾಯಿತೆಂದು ಯೋಚಿಸಿ. ವಾಕ್ಯದಲ್ಲಿರುವ ಒಂದೊಂದೇ ಪದವನ್ನು ಓದಬೇಡಿ, ಕೆಲವು ಪದಗಳನ್ನು ಒಟ್ಟಿಗೆ ಸೇರಿಸಿ ಓದಲು ಕಲಿಯಿರಿ. ಇಲ್ಲದ ಪದಗಳನ್ನು ಸೇರಿಸಬೇಡಿ, ಪದಗಳನ್ನು ಬಿಟ್ಟು ಓದಬೇಡಿ, ಬದಲಿ ಪದಗಳನ್ನು ಹಾಕಿ ಓದಬೇಡಿ. ಅಲ್ಪವಿರಾಮ, ಪೂರ್ಣವಿರಾಮದಂಥ ಚಿಹ್ನೆಗಳಿಗೆ ಗಮನ ಕೊಡಿ.

  • ಪ್ರತಿ ಪದವನ್ನು ಸರಿಯಾಗಿ ಉಚ್ಚರಿಸಿ. ನಿಮಗೆ ಒಂದು ಪದವನ್ನು ಸರಿಯಾಗಿ ಉಚ್ಚರಿಸಲು ಗೊತ್ತಿಲ್ಲದಿದ್ದರೆ ಆ ಪ್ರಕಾಶನದ ಆಡಿಯೋ ಕೇಳಿಸಿಕೊಳ್ಳಿ ಅಥವಾ ಚೆನ್ನಾಗಿ ಓದುವವರ ಸಹಾಯ ಕೇಳಿ.

  • ಸ್ಪಷ್ಟವಾಗಿ ಮಾತಾಡಿ. ತಲೆಯನ್ನು ಎತ್ತಿ ಬಾಯನ್ನು ಸಾಕಷ್ಟು ತೆರೆದು ಸ್ಪಷ್ಟವಾಗಿ ಮಾತಾಡಿ. ಪದಗಳನ್ನು ಅಥವಾ ಅಕ್ಷರಗಳನ್ನು ನುಂಗಬೇಡಿ.