ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 6

ವಚನಗಳ ಅನ್ವಯ

ವಚನಗಳ ಅನ್ವಯ

ಯೋಹಾನ 10:33-36

ಏನು ಮಾಡಬೇಕು: ಬರೀ ವಚನವನ್ನು ಓದಿ ಮುಂದಕ್ಕೆ ಹೋಗಬೇಡಿ. ನೀವು ಓದಿದ ವಚನಕ್ಕೂ ನೀವು ಹೇಳುತ್ತಿರುವ ವಿಷಯಕ್ಕೂ ಏನು ಸಂಬಂಧ ಎಂದು ಸ್ಪಷ್ಟಪಡಿಸಿ.

ಹೇಗೆ ಮಾಡಬೇಕು:

  • ಮುಖ್ಯ ಪದಗಳಿಗೆ ಒತ್ತು ಕೊಡಿ. ಒಂದು ವಚನವನ್ನು ಓದಿದ ಮೇಲೆ ನೀವು ಮಾತಾಡುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಪದಗಳಿಗೆ ಗಮನ ಕೊಡಲು ಸಹಾಯ ಮಾಡಿ. ಇದನ್ನು ಮಾಡಲು ನೀವು ಆ ಪದಗಳನ್ನು ಪುನಃ ಹೇಳಬಹುದು ಅಥವಾ ಆ ಪದಗಳನ್ನು ಕಂಡುಹಿಡಿಯಲು ಸಹಾಯ ಮಾಡುವ ಪ್ರಶ್ನೆ ಕೇಳಬಹುದು.

  • ಮುಖ್ಯಾಂಶಕ್ಕೆ ಒತ್ತು ನೀಡಿ. ನೀವು ಒಂದು ವಚನವನ್ನು ಓದುತ್ತಿರುವುದಕ್ಕೆ ಒಂದು ಕಾರಣವನ್ನು ಕೊಟ್ಟಿರುವುದಾದರೆ, ವಚನದಲ್ಲಿರುವ ಮುಖ್ಯ ಪದಗಳಿಗೂ ಆ ಕಾರಣಕ್ಕೂ ಏನು ಸಂಬಂಧ ಎಂದು ವಿವರಿಸಿ.

  • ಅನ್ವಯ ಸರಳವಾಗಿರಲಿ. ಮುಖ್ಯ ವಿಷಯಕ್ಕೆ ಸಂಬಂಧಪಡದ ಅಂಶಗಳ ಬಗ್ಗೆ ಮಾತಾಡಬೇಡಿ. ನೀವು ಹೇಳುತ್ತಿರುವ ವಿಷಯದ ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ಎಂದು ನೋಡಿ. ಅದರ ಮೇಲೆ ಹೊಂದಿಕೊಂಡು ಎಷ್ಟು ಮಾಹಿತಿ ಕೊಟ್ಟರೆ ಅನ್ವಯ ಸ್ಪಷ್ಟವಾಗುತ್ತದೆ ಎಂದು ಯೋಚಿಸಿ.