ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 19

ಹೃದಯ ಮುಟ್ಟಲು ಪ್ರಯತ್ನ

ಹೃದಯ ಮುಟ್ಟಲು ಪ್ರಯತ್ನ

ಜ್ಞಾನೋಕ್ತಿ 3:1

ಏನು ಮಾಡಬೇಕು: ಕೇಳುಗರು ಕಲಿತ ವಿಷಯಗಳನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳಲು ಸಹಾಯ ಮಾಡಿ.

ಹೇಗೆ ಮಾಡಬೇಕು:

  • ಸ್ವಪರೀಕ್ಷೆ ಮಾಡಿಕೊಳ್ಳಲು ಸಹಾಯ ಮಾಡಿ. ಜನರು ತಮ್ಮ ಹೃದಯದಲ್ಲಿ ಏನಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುವಂಥ ಪ್ರಶ್ನೆಗಳನ್ನು ಕೇಳಿ.

  • ಒಳ್ಳೇತನವನ್ನು ಬಡಿದೆಬ್ಬಿಸಿ. ಕೇಳುಗರು ಒಳ್ಳೇ ವಿಷಯಗಳನ್ನು ಯಾಕೆ ಮಾಡುತ್ತಾರೆ ಎಂದು ಯೋಚಿಸುವಂತೆ ಮಾಡಿ. ಒಳ್ಳೇ ಗುರಿಗಳನ್ನು ಇಟ್ಟುಕೊಳ್ಳಲು ಸಹಾಯ ಮಾಡಿ. ಅಂದರೆ ಯೆಹೋವನ ಮೇಲೆ, ಜನರ ಮೇಲೆ ಮತ್ತು ಬೈಬಲ್‌ ಬೋಧನೆಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡಿ. ಭಾಷಣ ಬಿಗಿಯಲು ಹೋಗಬೇಡಿ, ತರ್ಕಬದ್ಧವಾಗಿ ಮಾತಾಡಲು ಪ್ರಯತ್ನಿಸಿ. ಮುಜುಗರ ಅಥವಾ ದೋಷಿಭಾವನೆ ಹುಟ್ಟಿಸಬೇಡಿ. ನಿಮ್ಮ ಭಾಷಣದಿಂದ ಅವರಿಗೆ ಪ್ರೋತ್ಸಾಹ ಸಿಕ್ಕಿದಂತೆ ಆಗಬೇಕು.

  • ಯೆಹೋವನ ಕಡೆ ಗಮನ ಹೋಗುವಂತೆ ಮಾಡಿ. ಬೈಬಲಿನ ಬೋಧನೆಗಳು, ತತ್ವಗಳು ಮತ್ತು ಆಜ್ಞೆಗಳು ದೇವರ ಗುಣಗಳನ್ನು ಮತ್ತು ಆತನಿಗೆ ನಮ್ಮ ಮೇಲಿರುವ ಪ್ರೀತಿಯನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂದು ತೋರಿಸಿ. ಯೆಹೋವನ ಭಾವನೆಗಳಿಗೆ ಬೆಲೆ ಕೊಡುವಂತೆ ಮತ್ತು ಆತನನ್ನು ಮೆಚ್ಚಿಸಲು ಪ್ರಯತ್ನಿಸುವಂತೆ ಕೇಳುಗರಿಗೆ ಪ್ರೋತ್ಸಾಹಿಸಿ.