ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 04

ದೇವರು ಯಾರು?

ದೇವರು ಯಾರು?

ಮನುಷ್ಯರು ಸಾವಿರಾರು ವರ್ಷಗಳಿಂದ ತುಂಬ ದೇವರುಗಳನ್ನ ಆರಾಧಿಸುತ್ತಿದ್ದಾರೆ. ಆದ್ರೆ ಬೈಬಲ್‌ ಒಬ್ಬ ದೇವರ ಬಗ್ಗೆ ಆತನು “ಬೇರೆಲ್ಲ ದೇವರುಗಳಿಗಿಂತ ಮಹೋನ್ನತನು” ಅಂತ ಹೇಳುತ್ತೆ. (2 ಪೂರ್ವಕಾಲವೃತ್ತಾಂತ 2:5) ಆ ದೇವರು ಯಾರು? ಆ ದೇವರು ಹೇಗೆ ಬೇರೆ ಎಲ್ಲಾ ದೇವರುಗಳಿಗಿಂತ ಶ್ರೇಷ್ಠನಾಗಿದ್ದಾನೆ? ಈ ಪಾಠದಲ್ಲಿ, ದೇವರು ಬೈಬಲಿನ ಮೂಲಕ ತನ್ನನ್ನ ಹೇಗೆ ಪರಿಚಯ ಮಾಡಿಕೊಂಡಿದ್ದಾನೆ ಅಂತ ನೋಡೋಣ.

1. ದೇವರ ಹೆಸರೇನು? ಅದನ್ನ ನಾವು ತಿಳಿದುಕೊಳ್ಳಬೇಕು ಅನ್ನೋದು ದೇವರ ಇಷ್ಟ ಅಂತ ನಮಗೆ ಹೇಗೆ ಗೊತ್ತು?

ಬೈಬಲಿನಲ್ಲಿ ದೇವರು ತನ್ನ ಬಗ್ಗೆ, “ನಾನು ಯೆಹೋವ. ಇದು ನನ್ನ ಹೆಸ್ರು” ಅಂತ ಪರಿಚಯ ಮಾಡಿಕೊಂಡಿದ್ದಾನೆ. (ಯೆಶಾಯ 42:5, 8 ಓದಿ.) “ಯೆಹೋವ” ಅನ್ನೋ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ.” ಇದು ಹೀಬ್ರು ಭಾಷೆಯಿಂದ ಬಂದಿರುವ ಹೆಸರು. ತನ್ನ ಹೆಸರನ್ನ ನಾವು ತಿಳಿದುಕೊಳ್ಳಬೇಕು ಅನ್ನೋದು ಯೆಹೋವ ದೇವರ ಇಷ್ಟ. (ವಿಮೋಚನಕಾಂಡ 3:15) ಅದು ನಮಗೆ ಹೇಗೆ ಗೊತ್ತು? ಬೈಬಲಿನಲ್ಲಿ ಯೆಹೋವ ಅನ್ನೋ ಹೆಸರು 7,000ಕ್ಕಿಂತ a ಹೆಚ್ಚು ಸಲ ಇದೆ. “ಆಕಾಶದಲ್ಲೂ ಭೂಮಿಯಲ್ಲೂ ಯೆಹೋವನೇ ಸತ್ಯ ದೇವರು” ಅಂತ ಬೈಬಲ್‌ ಹೇಳುತ್ತೆ.—ಧರ್ಮೋಪದೇಶಕಾಂಡ 4:39.

2. ಬೈಬಲ್‌ ಯೆಹೋವ ದೇವರ ಬಗ್ಗೆ ಏನು ಹೇಳುತ್ತೆ?

ಮನುಷ್ಯರು ತುಂಬ ದೇವರುಗಳನ್ನ ಆರಾಧಿಸ್ತಿದ್ದಾರೆ. ಆದರೆ ಯೆಹೋವನೊಬ್ಬನೇ ಸತ್ಯ ದೇವರು ಅಂತ ಬೈಬಲ್‌ ಹೇಳುತ್ತೆ. ಅದಕ್ಕಿರುವ ಮುಖ್ಯ ಕಾರಣಗಳನ್ನ ನೋಡೋಣ. ಯೆಹೋವನೊಬ್ಬನೇ “ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು.” ಯಾಕಂದ್ರೆ ಆತನೊಬ್ಬನಿಗೇ ಸಂಪೂರ್ಣ ಅಧಿಕಾರ ಇರೋದು. (ಕೀರ್ತನೆ 83:18 ಓದಿ.) ಯೆಹೋವನೊಬ್ಬನೇ “ಸರ್ವಶಕ್ತ” ದೇವರು. ತಾನು ಏನು ಮಾಡಬೇಕಂತ ಅಂದುಕೊಳ್ಳುತ್ತಾನೋ ಅದೆಲ್ಲಾ ಮಾಡೋ ಶಕ್ತಿ ಆತನಿಗಿದೆ. ಯೆಹೋವನೇ ‘ಎಲ್ಲವನ್ನೂ ಸೃಷ್ಟಿ ಮಾಡಿದ್ದು’. ಇಡೀ ವಿಶ್ವದ ಮತ್ತು ಅದರಲ್ಲಿರುವ ಎಲ್ಲದರ ಸೃಷ್ಟಿಕರ್ತ ಆತನೇ. (ಪ್ರಕಟನೆ 4:8, 11) ಯೆಹೋವ ಬೇರೆ ದೇವರುಗಳ ತರ ಅಲ್ಲ. ಆತನಿಗೆ ಆರಂಭನೂ ಇಲ್ಲ, ಅಂತ್ಯನೂ ಇಲ್ಲ.—ಕೀರ್ತನೆ 90:2.

ಹೆಚ್ಚನ್ನ ತಿಳಿಯೋಣ

ದೇವರ ಹೆಸರಿಗೂ ಆತನ ಬಿರುದುಗಳಿಗೂ ಯಾವ ವ್ಯತ್ಯಾಸ ಇದೆ ಅಂತ ನೋಡಿ. ದೇವರು ತನ್ನ ಹೆಸರಿನ ಬಗ್ಗೆ ಯಾಕೆ ಮತ್ತು ಹೇಗೆ ತಿಳಿಸಿದ್ದಾನೆ ಅನ್ನೋದನ್ನ ಕಲಿಯಿರಿ.

3. ದೇವರಿಗೆ ತುಂಬ ಬಿರುದುಗಳಿವೆ ಆದರೆ ಹೆಸರು ಒಂದೇ

ಒಬ್ಬ ವ್ಯಕ್ತಿಯ ಹೆಸರಿಗೂ ಆತನ ಬಿರುದಿಗೂ ಇರೋ ವ್ಯತ್ಯಾಸವನ್ನ ತಿಳಿಯಲು ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:

  • ಒಬ್ಬ ವ್ಯಕ್ತಿಯ ಹೆಸರಿಗೂ ಆತನ ಬಿರುದಿಗೂ ಇರೋ ವ್ಯತ್ಯಾಸ ಏನು?

ಜನರು ತುಂಬ ದೇವರುಗಳನ್ನ ಆರಾಧಿಸ್ತಾರೆ ಅಂತ ಬೈಬಲ್‌ ಹೇಳುತ್ತೆ. ಕೀರ್ತನೆ 136:1-3 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ‘ಎಲ್ಲ ದೇವರಿಗಿಂತ ಅತ್ಯುನ್ನತ ದೇವರು’ ಯಾರು?

4. ಯೆಹೋವ ಅನ್ನೋ ತನ್ನ ಹೆಸರನ್ನ ನಾವು ತಿಳಿಯಬೇಕು, ಅದನ್ನ ಬಳಸಬೇಕು ಅನ್ನೋದು ದೇವರ ಆಸೆ

ನಾವು ಯೆಹೋವ ಅನ್ನೋ ಹೆಸರನ್ನ ತಿಳಿಯಬೇಕು ಅನ್ನೋ ಆಸೆ ಆತನಿಗಿದೆ ಅಂತ ನಮಗೆ ಹೇಗೆ ಗೊತ್ತು? ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.

  • ‘ಯೆಹೋವ’ ಅನ್ನೋ ತನ್ನ ಹೆಸರನ್ನ ನಾವು ತಿಳಿದುಕೊಳ್ಳಬೇಕು ಅಂತ ದೇವರು ಇಷ್ಟಪಡುತ್ತಾನಾ? ಯಾಕೆ?

ಜನರು ತನ್ನ ಹೆಸರನ್ನ ಕರೆಯಬೇಕು ಅನ್ನೋದು ಯೆಹೋವನ ಆಸೆ. ರೋಮನ್ನರಿಗೆ 10:13 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವ ದೇವರ ಹೆಸರನ್ನ ಕರೆಯೋದು ಯಾಕಷ್ಟು ಪ್ರಾಮುಖ್ಯ?

  • ಯಾರಾದ್ರೂ ನಿಮ್ಮ ಹೆಸರನ್ನ ನೆನಪಿನಲ್ಲಿಟ್ಟು ಕರೆದಾಗ ನಿಮಗೆ ಹೇಗನಿಸುತ್ತೆ?

  • ಅದೇ ತರ ನೀವು ಯೆಹೋವನ ಹೆಸರನ್ನ ನೆನಪಿನಲ್ಲಿಟ್ಟು ಕರೆದಾಗ ಆತನಿಗೆ ಹೇಗನಿಸುತ್ತೆ?

5. ನೀವು ಆತನ ಫ್ರೆಂಡ್‌ ಆಗಬೇಕು ಅಂತ ಯೆಹೋವನ ಇಷ್ಟ

ದೇವರ ಬಗ್ಗೆ ತಿಳಿದುಕೊಂಡಾಗ, “ನಂಗೆ ತುಂಬ ನೆಮ್ಮದಿ ಅನಿಸ್ತು” ಅಂತ ಒಬ್ಬ ಸ್ತ್ರೀ ಹೇಳ್ತಾಳೆ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.

  • ದೇವರ ಹೆಸರಿನ ಬಗ್ಗೆ ತಿಳಿದುಕೊಂಡಾಗ ಸೋಟೆನ್‌ನ ಜೀವನ ಹೇಗೆ ಬದಲಾಯ್ತು?

ನೀವು ಒಬ್ಬರ ಫ್ರೆಂಡ್‌ ಆಗೋ ಮುಂಚೆ ಅವರ ಹೆಸರನ್ನ ತಿಳಿದುಕೊಳ್ಳುತ್ತೀರ ಅಲ್ವಾ? ಯಾಕೋಬ 4:8ಎ ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನೀವೇನು ಮಾಡಬೇಕು ಅಂತ ಯೆಹೋವ ಇಷ್ಟಪಡುತ್ತಾನೆ?

  • ಯೆಹೋವ ದೇವರ ಹೆಸರನ್ನ ತಿಳಿಯೋದ್ರಿಂದ ಮತ್ತು ಬಳಸೋದ್ರಿಂದ ನೀವು ಹೇಗೆ ಆತನ ಫ್ರೆಂಡ್‌ ಆಗಬಹುದು?

ಕೆಲವರು ಹೀಗಂತಾರೆ: “ದೇವರು ಒಬ್ಬನೇ ಅಲ್ವಾ, ಯಾವ ಹೆಸರಲ್ಲಿ ಕರೆದರೇನು?”

  • ದೇವರ ಹೆಸರು ಯೆಹೋವ ಅಂತ ನೀವು ನಂಬುತ್ತೀರಾ?

  • ನಾವು ಆತನ ಹೆಸರನ್ನ ಕರೆಯಬೇಕು ಅನ್ನೋದು ಯೆಹೋವನ ಇಷ್ಟ. ಇದನ್ನ ನೀವು ಬೇರೆಯವ್ರಿಗೆ ಹೇಗೆ ವಿವರಿಸ್ತೀರಾ?

ನಾವೇನು ಕಲಿತ್ವಿ

ಸತ್ಯ ದೇವರು ಒಬ್ಬನೇ. ಆತನ ಹೆಸರು ಯೆಹೋವ. ನಾವು ಆತನ ಹೆಸರನ್ನ ತಿಳಿದುಕೊಳ್ಳಬೇಕು, ಕರೆಯಬೇಕು ಮತ್ತು ಆತನ ಫ್ರೆಂಡ್‌ ಆಗಬೇಕು ಅಂತ ಯೆಹೋವ ಇಷ್ಟಪಡುತ್ತಾನೆ.

ನೆನಪಿದೆಯಾ

  • ಯೆಹೋವ ದೇವರಿಗೂ ಬೇರೆ ದೇವರುಗಳಿಗೂ ಏನು ವ್ಯತ್ಯಾಸ?

  • ಯೆಹೋವ ದೇವರ ಹೆಸರನ್ನ ಕರೆಯೋದು ಯಾಕಷ್ಟು ಪ್ರಾಮುಖ್ಯ?

  • ನಾವು ಯೆಹೋವನ ಫ್ರೆಂಡ್‌ ಆಗಬೇಕು ಅನ್ನೋದು ಆತನ ಆಸೆ ಅಂತ ನಮಗೆ ಹೇಗೆ ಗೊತ್ತು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ದೇವರು ಇದ್ದಾನೆ ಅನ್ನೋದಕ್ಕೆ 5 ಕಾರಣಗಳನ್ನ ನೋಡಿ.

ದೇವರು ಇದ್ದಾನಾ?” (jw.org ಲೇಖನ)

ಯೆಹೋವ ದೇವರನ್ನ ಯಾರೂ ಸೃಷ್ಟಿಸಲಿಲ್ಲ ಅಂತ ಹೇಗೆ ಹೇಳಬಹುದು ಅನ್ನೋದನ್ನ ನೋಡಿ.

“ದೇವರನ್ನು ಯಾರು ಸೃಷ್ಟಿ ಮಾಡಿದರು?” (ಕಾವಲಿನಬುರುಜು, ಅಕ್ಟೋಬರ್‌ 1, 2014)

ದೇವರ ಹೆಸರನ್ನ ಸರಿಯಾಗಿ ಹೇಳೋದು (ಉಚ್ಚಾರಣೆ) ಹೇಗೆ ಅಂತ ನಮಗೆ ಗೊತ್ತಿಲ್ಲದಿದ್ರೂ ನಾವು ಯಾಕೆ ಆತನ ಹೆಸರನ್ನ ಕರೆಯಬೇಕು?

“ಯೆಹೋವ ಯಾರು?” (jw.org ಲೇಖನ)

ದೇವರ ಹೆಸರು ಹೇಳಿ ಕರೆಯೋದು ಅಷ್ಟೊಂದು ಮುಖ್ಯನಾ? ದೇವರಿಗೆ ಒಂದೇ ಒಂದು ಹೆಸರಿದೆ ಅಂತ ನಾವು ಹೇಗೆ ಹೇಳಬಹುದು?

“ದೇವರಿಗೆ ಎಷ್ಟು ಹೆಸರಿದೆ?” (jw.org ಲೇಖನ)

a ದೇವರ ಹೆಸರಿನ ಅರ್ಥ ಏನು ಮತ್ತು ಕೆಲವು ಬೈಬಲ್‌ ಭಾಷಾಂತರಗಳಿಂದ ಆ ಹೆಸರನ್ನ ಯಾಕೆ ತೆಗೆದು ಹಾಕಲಾಗಿದೆ ಅಂತ ತಿಳಿಯಲು ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರಪರಿಶಿಷ್ಟ ಎ4 ನೋಡಿ.