ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 05

ಬೈಬಲ್‌: ದೇವರು ನಮಗೆ ಕೊಟ್ಟಿರೋ ಉಡುಗೊರೆ

ಬೈಬಲ್‌: ದೇವರು ನಮಗೆ ಕೊಟ್ಟಿರೋ ಉಡುಗೊರೆ

ಯೆಹೋವ ದೇವರು ನಮಗೊಂದು ಅಮೂಲ್ಯ ಉಡುಗೊರೆಯನ್ನ ಕೊಟ್ಟಿದ್ದಾನೆ, ಅದೇ ಬೈಬಲ್‌. ಅದರಲ್ಲಿ 66 ಬೇರೆಬೇರೆ ಪುಸ್ತಕಗಳಿವೆ. ಆದರೆ ಬೈಬಲ್‌ ನಮಗೆ ಹೇಗೆ ಸಿಕ್ತು? ಅದನ್ನ ಬರೆಸಿದವನು ಯಾರು? ಈ ಪಾಠದಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರವನ್ನ ತಿಳಿದುಕೊಳ್ಳೋಣ.

1. ಬೈಬಲನ್ನ ಮನುಷ್ಯರು ಬರೆದಿರೋದಾದ್ರೆ, ಅದು ದೇವರಿಂದ ಬಂದಿರೋದು ಅಂತ ಹೇಗೆ ಹೇಳಬಹುದು?

ಬೈಬಲನ್ನ ಸುಮಾರು 40 ಜನ ಬರೆದರು, ಅದಕ್ಕೆ ಸುಮಾರು 1,600 ವರ್ಷ a ಹಿಡಿಯಿತು. ಅದನ್ನ ಬರೆದವರಲ್ಲಿ ಕೆಲವರು ಶ್ರೀಮಂತರು, ವಿದ್ಯಾವಂತರಾಗಿದ್ದರು. ಇನ್ನೂ ಕೆಲವರು ಬಡವರು, ಸಾಧಾರಣ ಜನರಾಗಿದ್ದರು. ಇವರೆಲ್ಲರೂ ಬೇರೆಬೇರೆ ಸಮಯದಲ್ಲಿ ಬದುಕಿದ್ದರೂ ಅದರಲ್ಲಿರೋ ಎಲ್ಲಾ ವಿಷಯಗಳು ಒಂದಕ್ಕೊಂದು ಸಂಬಂಧಪಟ್ಟಿದೆ. ಯಾಕಂದ್ರೆ ಬೈಬಲನ್ನ ಬರೆಸಿರೋದು ದೇವರು. (1 ಥೆಸಲೊನೀಕ 2:13 ಓದಿ.) ಅದನ್ನ ಬರೆದವರು ತಮ್ಮ ಸ್ವಂತ ಯೋಚನೆಯನ್ನ ಬರೆಯಲಿಲ್ಲ. ಬದಲಿಗೆ “ದೇವರು ಹೇಳಿದ್ದನ್ನೇ ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು. b (2 ಪೇತ್ರ 1:21) ದೇವರು ಪವಿತ್ರಶಕ್ತಿಯನ್ನ ಉಪಯೋಗಿಸಿ ತನ್ನ ಯೋಚನೆಯನ್ನ ಮನುಷ್ಯರು ಬರೆಯೋ ತರ ಮಾಡಿದನು.—2 ತಿಮೊತಿ 3:16.

2. ಬೈಬಲನ್ನ ಯಾರೆಲ್ಲಾ ಓದಬಹುದು?

‘ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರು’ ಬೈಬಲನ್ನ ಓದಿ ಅದ್ರಿಂದ ಪ್ರಯೋಜನ ಪಡೀಬಹುದು. ಅದರಲ್ಲಿ ಎಲ್ಲರಿಗೂ ಒಂದು ಸಿಹಿಸುದ್ದಿ ಇದೆ. (ಪ್ರಕಟನೆ 14:6 ಓದಿ.) ದೇವರು ಬೈಬಲನ್ನ ತುಂಬ ಭಾಷೆಗಳಲ್ಲಿ ಸಿಗೋ ಹಾಗೆ ಮಾಡಿದ್ದಾನೆ. ಹಾಗಾಗಿ ಜನ ಎಲ್ಲೇ ಇರಲಿ, ಯಾವುದೇ ಭಾಷೆ ಮಾತಾಡಲಿ ಎಲ್ಲರಿಗೂ ಬೈಬಲ್‌ ಸುಲಭವಾಗಿ ಸಿಗುತ್ತೆ. ಬೇರೆ ಯಾವ ಪುಸ್ತಕನೂ ಇಷ್ಟು ಭಾಷೆಗಳಲ್ಲಿಲ್ಲ.

3. ಯೆಹೋವನು ಬೈಬಲನ್ನ ಹೇಗೆ ಜೋಪಾನವಾಗಿ ಕಾಪಾಡಿದ್ದಾನೆ?

ಬೈಬಲನ್ನ ಲೆದರಿನ (ಪ್ರಾಣಿಗಳ ಚರ್ಮ) ಮೇಲೆ ಅಥವಾ ಪಪೈರಸ್‌ ಹಾಳೆ ಮೇಲೆ ಬರೆಯಲಾಗಿತ್ತು. ಅವು ತುಂಬ ವರ್ಷ ಬಾಳಿಕೆ ಬರುತ್ತಿರಲಿಲ್ಲ. ಹಾಗಾದ್ರೆ ಬೈಬಲ್‌ ಹೇಗೆ ನಾಶವಾಗದೇ ಉಳಿಯಿತು? ಬೈಬಲನ್ನ ತುಂಬ ಇಷ್ಟಪಡುತ್ತಿದ್ದ ಕೆಲವು ಜನರು ಅದನ್ನ ತಮ್ಮ ಕೈಯಿಂದ ಬರೆದು ಪುನಃಪುನಃ ನಕಲು (ಕಾಪಿ) ಮಾಡಿದ್ರು. ಹೀಗೆ ಬೈಬಲನ್ನ ಉಳಿಸೋಕಾಯ್ತು. ಅಧಿಕಾರದಲ್ಲಿ ಇದ್ದ ಶಕ್ತಿಶಾಲಿ ಜನರು ಸಹ ಬೈಬಲನ್ನ ನಾಶ ಮಾಡೋಕೆ ಪ್ರಯತ್ನಿಸಿದರು. ಆದ್ರೆ ಇನ್ನೂ ಕೆಲವರು ಅದನ್ನ ಕಾಪಾಡಲು ತಮ್ಮ ಜೀವ ಕೊಡಕ್ಕೂ ರೆಡಿ ಇದ್ರು. ಬೈಬಲ್‌ ನಾಶ ಮಾಡೋಕೆ ಯಾರು ಏನೇ ಮಾಡಿದ್ರೂ ಯೆಹೋವನು ಅದು ನಮ್ಮ ಕೈಸೇರುವಂತೆ ಮಾಡಿದನು. ಬೈಬಲ್‌ ಹೀಗೆ ಹೇಳುತ್ತೆ: “ನಮ್ಮ ದೇವರ ಮಾತು ಸದಾಕಾಲ ಉಳಿಯುತ್ತೆ.”ಯೆಶಾಯ 40:8.

ಹೆಚ್ಚನ್ನ ತಿಳಿಯೋಣ

ದೇವರು ಬೈಬಲನ್ನ ಮನುಷ್ಯರ ಕೈಯಲ್ಲಿ ಹೇಗೆ ಬರೆಸಿದನು, ಅದನ್ನ ಹೇಗೆ ಕಾಪಾಡಿದನು ಮತ್ತು ಅದು ಎಲ್ಲರ ಕೈಗೆ ಸಿಗೋ ತರ ಹೇಗೆ ಮಾಡಿದನು ಅನ್ನೋದ್ರ ಬಗ್ಗೆ ಹೆಚ್ಚನ್ನ ತಿಳಿಯಿರಿ.

4. ಬೈಬಲನ್ನ ಬರೆಸಿದವನು

ವಿಡಿಯೋ ನೋಡಿ ನಂತರ 2 ತಿಮೊತಿ 3:16 ಓದಿ, ಈ ಪ್ರಶ್ನೆಗಳನ್ನ ಚರ್ಚಿಸಿ.

  • ಬೈಬಲನ್ನ ಮನುಷ್ಯರು ಬರೆದರು ಅಂದಮೇಲೆ ಅದನ್ನ ದೇವರ ವಾಕ್ಯ ಅಂತ ಯಾಕೆ ಕರೆಯುತ್ತಾರೆ?

  • ದೇವರು ತನ್ನ ಯೋಚನೆಯನ್ನ ಮನುಷ್ಯರ ಕೈಯಲ್ಲಿ ಬರೆಸಲು ಸಾಧ್ಯಾನಾ? ಹೇಗೆ?

ಮ್ಯಾನೇಜರ್‌ ಹೇಳಿದ ಹಾಗೆ ಸೆಕ್ರೆಟರಿ ಒಂದು ಪತ್ರ ಬರೆಯುತ್ತಾನೆ. ಆ ಪತ್ರ ಮ್ಯಾನೇಜರ್‌ದೇ ಹೊರತು ಸೆಕ್ರೆಟರಿಯದ್ದಲ್ಲ. ಅದೇ ತರ, ದೇವರು ಹೇಳಿದ್ದನ್ನೇ ಮನುಷ್ಯರು ಬರೆದರು. ಹಾಗಾಗಿ ಬೈಬಲ್‌ ದೇವರಿಂದ ಬಂದ ಪುಸ್ತಕನೇ ಹೊರತು ಮನುಷ್ಯರದ್ದಲ್ಲ

5. ಬೈಬಲನ್ನ ಯಾರಿಂದಲೂ ನಾಶಮಾಡೋಕೆ ಆಗಿಲ್ಲ

ಬೈಬಲ್‌ ದೇವರಿಂದ ಬಂದಿರೋ ಪುಸ್ತಕ ಅಂದಮೇಲೆ ಅದನ್ನ ದೇವರೇ ಕಾಪಾಡಬೇಕಲ್ವಾ? ದೇವರು ಹಾಗೇ ಮಾಡಿದನು. ಹಿಂದಿನ ಕಾಲದಿಂದನೂ ಅಧಿಕಾರದಲ್ಲಿರೋ ಜನರು ಬೈಬಲನ್ನ ನಾಶ ಮಾಡೋಕೆ ಪ್ರಯತ್ನಿಸಿದ್ರು. ಅದು ಜನರ ಕೈಗೆ ಸಿಗಬಾರದು ಅಂತ ಏನೇನೋ ಮಾಡಿದರು. ಇಷ್ಟೆಲ್ಲಾ ಹಿಂಸೆ, ಜೀವ ಬೆದರಿಕೆ ಇದ್ದರೂ ತುಂಬ ಜನ ಬೈಬಲನ್ನ ಕಾಪಾಡೋಕೆ ತಮ್ಮ ಜೀವ ಕೊಡಕ್ಕೂ ರೆಡಿ ಇದ್ರು. ಈ ರೀತಿ ಮಾಡಿದ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ಈ ವಿಡಿಯೋ ನೋಡಿದ ಮೇಲೆ ಬೈಬಲನ್ನ ಓದಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?

ಕೀರ್ತನೆ 119:97 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಬೈಬಲನ್ನ ಭಾಷಾಂತರಿಸಿ ಅದನ್ನ ಜನರಿಗೆ ತಲುಪಿಸಲು ಕೆಲವರು ಯಾಕೆ ಸಾಯೋಕೂ ರೆಡಿ ಇದ್ದರು?

6. ಎಲ್ಲಾ ಜನರಿಗಾಗಿ ಒಂದು ಪುಸ್ತಕ

ಬೈಬಲಿನಷ್ಟು ಹೆಚ್ಚು ಭಾಷೆಯಲ್ಲಿ ಭಾಷಾಂತರವಾಗಿ ವಿತರಿಸಲಾದ ಪುಸ್ತಕ ಮತ್ತೊಂದಿಲ್ಲ. ಅಪೊಸ್ತಲರ ಕಾರ್ಯ 10:34, 35 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಬೈಬಲ್‌ ತುಂಬ ಭಾಷೆಗೆ ಭಾಷಾಂತರ ಆಗಬೇಕು, ಎಲ್ಲಾ ಜನರಿಗೆ ಸಿಗಬೇಕು ಅಂತ ದೇವರು ಯಾಕೆ ಇಷ್ಟಪಟ್ಟನು?

  • ಕೆಳಗೆ ಕೊಟ್ಟಿರೋ ಮಾಹಿತಿಯನ್ನ ನೋಡಿ, ಬೈಬಲ್‌ ಬಗ್ಗೆ ಏನಿಷ್ಟ ಆಯ್ತು ಹೇಳಿ.

ಲೋಕದಲ್ಲಿರೋ ಸುಮಾರು

100%

ಜನರಿಗೆ

ತಮಗೆ ಅರ್ಥವಾಗೋ ಭಾಷೆಯಲ್ಲಿ ಬೈಬಲ್‌ ಸಿಗ್ತಿದೆ

ಪೂರ್ತಿ ಬೈಬಲ್‌ ಅಥವಾ ಅದರ ಒಂದು ಭಾಗ

3,000ಕ್ಕೂ

ಹೆಚ್ಚು ಭಾಷೆಗಳಲ್ಲಿ

ಲಭ್ಯವಿದೆ

500,00,00,000

ಬೈಬಲ್‌ ಪ್ರತಿಗಳನ್ನ ಮುದ್ರಿಸಲಾಗಿದೆ ಅಂತ ಅಂದಾಜುಮಾಡಲಾಗಿದೆ

ಬೇರೆ ಯಾವ ಪುಸ್ತಕವನ್ನೂ ಇಷ್ಟೊಂದು ಸಂಖ್ಯೆಯಲ್ಲಿ ಮುದ್ರಿಸಲಾಗಿಲ್ಲ

ಕೆಲವರು ಹೀಗಂತಾರೆ: “ಬೈಬಲ್‌ ಹಳೇ ಪುಸ್ತಕ, ಅದನ್ನ ಮನುಷ್ಯರೇ ಬರೆದಿದ್ದು.”

  • ನಿಮಗೇನು ಅನಿಸುತ್ತೆ?

  • ಬೈಬಲ್‌ ದೇವರ ವಾಕ್ಯ ಅಂತ ಹೇಗೆ ಹೇಳಬಹುದು?

ನಾವೇನು ಕಲಿತ್ವಿ

ಬೈಬಲ್‌ ದೇವರ ವಾಕ್ಯ. ಅದು ಎಲ್ಲಾ ಜನರಿಗೆ ಸಿಗೋ ತರ ದೇವರು ಮಾಡಿದ್ದಾನೆ.

ನೆನಪಿದೆಯಾ

  • ಬೈಬಲನ್ನ ದೇವರು ಮನುಷ್ಯರ ಕೈಯಲ್ಲಿ ಹೇಗೆ ಬರೆಸಿದನು?

  • ಈ ಪಾಠದಲ್ಲಿ ಬೈಬಲಿನ ಬಗ್ಗೆ ಕೆಲವು ವಿಷಯಗಳನ್ನ ಕಲಿತೆವು. ಅದ್ರಲ್ಲಿ ಯಾವೆಲ್ಲಾ ವಿಷಯಗಳು ನಿಮಗೆ ಇಷ್ಟವಾಯ್ತು?

  • ಬೈಬಲನ್ನ ನಿಮಗೆ ತಲುಪಿಸೋಕೆ ದೇವರು ಇಷ್ಟೆಲ್ಲಾ ಪ್ರಯತ್ನ ಮಾಡಿದ್ದನ್ನ ನೋಡುವಾಗ ನಿಮಗೆ ಹೇಗೆ ಅನಿಸುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಹಳೆಯ ಹಸ್ತ ಪ್ರತಿಗಳಿಂದ ಹಿಡಿದು ನಮ್ಮ ಕಾಲದವರೆಗಿನ ಬೈಬಲ್‌ ಭಾಷಾಂತರದ ಇತಿಹಾಸದ ಬಗ್ಗೆ ಓದಿ.

“ಸೋಲಿಲ್ಲದೆ ಸಾಗುತಿರುವ ಬೈಬಲ್‌” (ಎಚ್ಚರ! ಲೇಖನ)

ಬೈಬಲನ್ನ ನಾಶಮಾಡಲು ಹಾಕಿದ ಮೂರು ಪ್ರಯತ್ನಗಳು ಹೇಗೆ ವಿಫಲ ಆಯಿತು ಅನ್ನೋದನ್ನ ತಿಳಿಯಿರಿ.

“ಅಳಿಯದೇ ಉಳಿದ ಬೈಬಲ್‌” (ಕಾವಲಿನಬುರುಜು ಲೇಖನ)

ಬೈಬಲನ್ನ ಭಾಷಾಂತರಿಸಲು ಜನರು ಎಷ್ಟೆಲ್ಲಾ ಕಷ್ಟಪಟ್ಟರು ಅಂತ ನೋಡಿ.

ಬೈಬಲನ್ನು ನಿಧಿಯಂತೆ ಕಾಪಾಡಿದರು (14:26)

ಬೈಬಲನ್ನ ತುಂಬ ಸಲ ನಕಲು ಮಾಡಲಾಗಿದೆ ಮತ್ತು ಭಾಷಾಂತರಿಸಲಾಗಿದೆ. ಹಾಗಿದ್ರೂ ಅದರಲ್ಲಿರುವ ಮಾಹಿತಿ ಬದಲಾಗಿಲ್ಲ ಅಂತ ಹೇಗೆ ಹೇಳಬಹುದು?

“ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?” (jw.org ಲೇಖನ)

a ಕ್ರಿ.ಪೂ. 1513ರಿಂದ ಕ್ರಿ.ಶ. 98.

b ಪವಿತ್ರಶಕ್ತಿ ಅಂದ್ರೆ ದೇವರು ಬಳಸುವ ಶಕ್ತಿ. ಇದರ ಬಗ್ಗೆ ಹೆಚ್ಚಿನ ವಿವರಣೆ ಪಾಠ 07ರಲ್ಲಿ ಇದೆ.