ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 07

ಯೆಹೋವ ನಿಜವಾಗಿಯೂ ಹೇಗಿದ್ದಾನೆ?

ಯೆಹೋವ ನಿಜವಾಗಿಯೂ ಹೇಗಿದ್ದಾನೆ?

ಯೆಹೋವ ದೇವರ ಬಗ್ಗೆ ಯೋಚನೆ ಮಾಡುವಾಗ ಮೊದ್ಲು ನಿಮ್ಮ ಮನಸ್ಸಿಗೆ ಏನು ಬರುತ್ತೆ? ಆತನು ಒಬ್ಬ ಮಹಾನ್‌ ವ್ಯಕ್ತಿ, ನಕ್ಷತ್ರಗಳ ತರ ತುಂಬ ದೂರ ಇದ್ದಾನೆ ಅಂತ ಅನಿಸುತ್ತಾ? ದೇವರು ಬಿರುಗಾಳಿ ತರ ಬರೀ ಒಂದು ಶಕ್ತಿ ಅಷ್ಟೇ, ಆತನಿಗೆ ಯಾವುದೇ ಭಾವನೆಗಳಿಲ್ಲ ಅಂತ ಅನಿಸುತ್ತಾ? ಯೆಹೋವ ದೇವರು ನಿಜವಾಗಲೂ ಹೇಗಿದ್ದಾನೆ? ದೇವರು ತನ್ನ ಗುಣಗಳ ಬಗ್ಗೆ, ಭಾವನೆಗಳ ಬಗ್ಗೆ ಬೈಬಲಿನಲ್ಲಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ನೀವು ಅಂದ್ರೆ ಆತನಿಗೆ ಎಷ್ಟು ಇಷ್ಟ ಅಂತಾನೂ ಹೇಳಿದ್ದಾನೆ.

1. ನಾವು ಯಾಕೆ ದೇವರನ್ನ ನೋಡಕ್ಕಾಗಲ್ಲ?

“ದೇವರು ಆತ್ಮಜೀವಿಯಾಗಿದ್ದಾನೆ.” (ಯೋಹಾನ 4:24, ಪಾದಟಿಪ್ಪಣಿ) ದೇವರ ಶರೀರ ನಮ್ಮ ತರ ಅಲ್ಲ. ಅದಕ್ಕೇ ಆತನು ನಮ್ಮ ಕಣ್ಣಿಗೆ ಕಾಣಿಸಲ್ಲ. ಅಷ್ಟೇ ಅಲ್ಲ ನಮ್ಮ ಕಣ್ಣಿಗೆ ಕಾಣಿಸದ ಸ್ವರ್ಗದಲ್ಲಿ ಆತನು ಇದ್ದಾನೆ.

2. ಯೆಹೋವನಲ್ಲಿರುವ ಕೆಲವು ಗುಣಗಳು ಯಾವುವು?

ಯೆಹೋವನನ್ನ ನಾವು ನೋಡೋಕೆ ಆಗಲ್ಲ, ಆದ್ರೂ ಆತನೊಬ್ಬ ನಿಜ ವ್ಯಕ್ತಿ. ಆತನಲ್ಲಿ ಒಳ್ಳೇ ಗುಣಗಳೇ ಇವೆ. “ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ, ಆತನು ತನ್ನ ನಿಷ್ಠಾವಂತರ ಕೈಬಿಡಲ್ಲ” ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 37:28) ಅಷ್ಟೇ ಅಲ್ಲ ಕಷ್ಟದಲ್ಲಿರುವ ಜನರಿಗೆ ದೇವರು “ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ.” (ಯಾಕೋಬ 5:11) “ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ, ನಿರುತ್ಸಾಹ ಆಗಿರೋರನ್ನ ಆತನು ಕಾದು ಕಾಪಾಡ್ತಾನೆ.” (ಕೀರ್ತನೆ 34:18, ಪಾದಟಿಪ್ಪಣಿ) ನಾವು ಮಾಡೋ ಕೆಲಸದಿಂದ ಯೆಹೋವನನ್ನ ಒಂದೋ ಖುಷಿಪಡಿಸಬಹುದು ಇಲ್ಲಾ ದುಃಖಪಡಿಸಬಹುದು. ಹೇಗೆ? ನಾವು ಕೆಟ್ಟ ಕೆಲ್ಸಗಳನ್ನ ಮಾಡಿದಾಗ ಆತನ ಮನಸ್ಸಿಗೆ ನೋವಾಗುತ್ತೆ. (ಕೀರ್ತನೆ 78:40, 41) ನಾವು ಒಳ್ಳೇ ಕೆಲ್ಸಗಳನ್ನು ಮಾಡಿದಾಗ ಆತನಿಗೆ ಸಂತೋಷವಾಗುತ್ತೆ.—ಜ್ಞಾನೋಕ್ತಿ 27:11 ಓದಿ.

3. ಯೆಹೋವನು ನಮ್ಮನ್ನ ಪ್ರೀತಿಸುತ್ತಾನೆ ಅಂತ ನಮಗೆ ಹೇಗೆ ಗೊತ್ತು?

ಯೆಹೋವನಲ್ಲಿರೋ ಮುಖ್ಯ ಗುಣ ಪ್ರೀತಿ. ಯೆಹೋವ ದೇವರು ಪ್ರೀತಿ ತೋರಿಸೋದಷ್ಟೇ ಅಲ್ಲ ಆತನೇ “ಪ್ರೀತಿಯಾಗಿದ್ದಾನೆ” ಅಂತ ಬೈಬಲ್‌ ಹೇಳುತ್ತೆ. (1 ಯೋಹಾನ 4:8) ಯೆಹೋವನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಬೈಬಲಿನ ಮೂಲಕ ತಿಳಿಸಿದ್ದಾನೆ. ಅಷ್ಟೇ ಅಲ್ಲ ತಾನು ಸೃಷ್ಟಿ ಮಾಡಿರೋ ವಸ್ತುಗಳ ಮೂಲಕ ಸಹ ಪ್ರೀತಿಯನ್ನ ತೋರಿಸಿದ್ದಾನೆ. (ಅಪೊಸ್ತಲರ ಕಾರ್ಯ 14:17 ಓದಿ.) ಉದಾಹರಣೆಗೆ ಆತನು ನಮ್ಮನ್ನ ಎಷ್ಟು ಅದ್ಭುತವಾಗಿ ಸೃಷ್ಟಿಮಾಡಿದ್ದಾನೆ ಅಂತ ನೋಡಿ. ಸುಂದರವಾದ ಬಣ್ಣಗಳನ್ನ ನೋಡುವ, ಸುಮಧುರ ಸಂಗೀತವನ್ನ ಕೇಳಿಸಿಕೊಳ್ಳುವ, ರುಚಿರುಚಿಯಾದ ಆಹಾರವನ್ನ ಸವಿಯುವ ಸಾಮರ್ಥ್ಯವನ್ನ ನಮಗೆ ಕೊಟ್ಟಿದ್ದಾನೆ. ನಾವು ನಮ್ಮ ಜೀವನವನ್ನ ಆನಂದಿಸಬೇಕು ಅಂತನೇ ಇದನ್ನೆಲ್ಲಾ ಕೊಟ್ಟಿದ್ದಾನೆ.

ಹೆಚ್ಚನ್ನ ತಿಳಿಯೋಣ

ಅದ್ಭುತವಾದ, ಸುಂದರವಾದ ವಿಷಯಗಳನ್ನ ಮಾಡಲು ಯೆಹೋವ ಏನನ್ನ ಬಳಸಿದ್ದಾನೆ ಅಂತ ತಿಳಿಯಿರಿ. ತನ್ನ ಸುಂದರ ಗುಣಗಳನ್ನ ಹೇಗೆಲ್ಲಾ ತೋರಿಸುತ್ತಾನೆ ಅಂತಾನೂ ನೋಡಿ.

4. ಪವಿತ್ರಶಕ್ತಿ—ದೇವರು ಬಳಸುವ ಶಕ್ತಿ

ನಾವು ಕೆಲಸ ಮಾಡಲು ಕೈಗಳನ್ನ ಉಪಯೋಗಿಸುವ ಹಾಗೆ, ಯೆಹೋವ ದೇವರು ತನ್ನ ಕೆಲಸವನ್ನ ಮಾಡೋಕೆ ಪವಿತ್ರಶಕ್ತಿಯನ್ನ ಉಪಯೋಗಿಸುತ್ತಾನೆ. ಪವಿತ್ರಶಕ್ತಿ ಒಬ್ಬ ವ್ಯಕ್ತಿಯಲ್ಲ ಬದಲಿಗೆ ಒಂದು ಶಕ್ತಿ ಅಂತ ಬೈಬಲ್‌ ಹೇಳುತ್ತೆ. ಲೂಕ 11:13 ಮತ್ತು ಅಪೊಸ್ತಲರ ಕಾರ್ಯ 2:17 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ತನ್ನ ಹತ್ತಿರ ಪವಿತ್ರಶಕ್ತಿಗಾಗಿ ಬೇಡುವವರ ಮೇಲೆ ಅದನ್ನ “ಸುರಿಸ್ತೀನಿ” ಅಂತ ದೇವರು ಹೇಳಿದ್ದಾನೆ. ಹಾಗಾದರೆ ಪವಿತ್ರಶಕ್ತಿ ಒಬ್ಬ ವ್ಯಕ್ತಿನಾ? ಅಥವಾ ದೇವರು ಬಳಸುವ ಶಕ್ತಿನಾ? ನೀವು ಯಾಕೆ ಹಾಗೆ ಹೇಳ್ತೀರಾ?

ಅದ್ಭುತ ವಿಷಯಗಳನ್ನ ಮಾಡೋಕೆ ದೇವರು ಪವಿತ್ರಶಕ್ತಿಯನ್ನ ಉಪಯೋಗಿಸುತ್ತಾನೆ. ಕೀರ್ತನೆ 33:6 a ಮತ್ತು 2 ಪೇತ್ರ 1:20 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:

  • ದೇವರು ಏನೆಲ್ಲಾ ಮಾಡೋಕೆ ತನ್ನ ಪವಿತ್ರಶಕ್ತಿಯನ್ನ ಉಪಯೋಗಿಸಿದ್ದಾನೆ?

5. ಯೆಹೋವನಲ್ಲಿ ಎಷ್ಟೋ ಸುಂದರ ಗುಣಗಳಿವೆ

ಮೋಶೆ ತುಂಬ ವರ್ಷಗಳಿಂದ ದೇವರನ್ನ ನಿಷ್ಠೆಯಿಂದ ಆರಾಧಿಸ್ತಿದ್ದ. ಆದರೂ ಅವನು ತನ್ನನ್ನ ಸೃಷ್ಟಿ ಮಾಡಿದವನ ಬಗ್ಗೆ ಇನ್ನೂ ಹೆಚ್ಚನ್ನ ತಿಳಿದುಕೊಳ್ಳೋಕೆ ಇಷ್ಟಪಟ್ಟ. ಹಾಗಾಗಿ ಅವನು ದೇವರಿಗೆ, ‘ನೀನೇನು ಮಾಡ್ತೀಯ ಅಂತ ದಯವಿಟ್ಟು ನನಗೆ ಹೇಳು. ಆಗ ನಿನ್ನನ್ನ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ’ ಅಂದ. (ವಿಮೋಚನಕಾಂಡ 33:13) ಆಗ ಯೆಹೋವನು ತನ್ನ ಸುಂದರ ಗುಣಗಳ ಬಗ್ಗೆ ಹೇಳಿದನು. ವಿಮೋಚನಕಾಂಡ 34:4-6 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವನು ಮೋಶೆಗೆ ತನ್ನಲ್ಲಿರೋ ಯಾವ ಗುಣಗಳ ಬಗ್ಗೆ ಹೇಳಿದನು?

  • ಯೆಹೋವನ ಗುಣಗಳಲ್ಲಿ ಯಾವುದು ನಿಮಗೆ ತುಂಬ ಇಷ್ಟ?

6. ಯೆಹೋವನಿಗೆ ತನ್ನ ಜನರ ಬಗ್ಗೆ ಕಾಳಜಿಯಿದೆ

ದೇವಜನರಾದ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಗುಲಾಮರಾಗಿದ್ದರು. ಅವರ ಕಷ್ಟ ನೋಡಿದಾಗ ಯೆಹೋವನಿಗೆ ಹೇಗನಿಸಿತು? ಆಡಿಯೋ ಕೇಳಿಸಿಕೊಳ್ಳುತ್ತಾ ಆ ವಚನಗಳನ್ನ ಬೈಬಲಿನಲ್ಲಿ ನೋಡಿ ಅಥವಾ ವಿಮೋಚನಕಾಂಡ 3:1-10 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ಮನುಷ್ಯರ ಕಷ್ಟಗಳನ್ನ ನೋಡುವಾಗ ಯೆಹೋವನಿಗೆ ಹೇಗನಿಸುತ್ತೆ ಅಂತ ಇದರಿಂದ ತಿಳಿದುಕೊಂಡ್ರಿ?—ವಚನ 7 ಮತ್ತು 8 ನೋಡಿ.

  • ಮನುಷ್ಯರಿಗೆ ಸಹಾಯಮಾಡೋಕೆ ಯೆಹೋವ ದೇವರು ಇಷ್ಟಪಡುತ್ತಾನಾ? ಸಹಾಯ ಮಾಡೋ ಶಕ್ತಿ ಆತನಿಗೆ ಇದೆಯಾ? ನಿಮಗೆ ಯಾಕೆ ಹಾಗೆ ಅನಿಸುತ್ತೆ?

7. ಸೃಷ್ಟಿಯಿಂದ ಯೆಹೋವನ ಸುಂದರ ಗುಣಗಳ ಬಗ್ಗೆ ಗೊತ್ತಾಗುತ್ತೆ

ಯೆಹೋವನು ಸೃಷ್ಟಿ ಮಾಡಿರೋ ವಿಷಯಗಳಿಂದ ಆತನ ಸುಂದರ ಗುಣಗಳ ಬಗ್ಗೆ ಕಲಿಯಬಹುದು. ವಿಡಿಯೋ ನೋಡಿ ಮತ್ತು ರೋಮನ್ನರಿಗೆ 1:20 ಓದಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.

  • ಯೆಹೋವನ ಸೃಷ್ಟಿಯಲ್ಲಿ ನೀವು ಆತನ ಯಾವೆಲ್ಲಾ ಗುಣಗಳನ್ನ ನೋಡಿದ್ದೀರಿ?

ಕೆಲವರು ಹೀಗಂತಾರೆ: “ದೇವರಿಗೆ ನಮ್ಮ ಬಗ್ಗೆ ಚಿಂತೆ ಇಲ್ಲ.”

  • ನಿಮಗೇನು ಅನಿಸುತ್ತೆ?

  • ನಿಮಗೆ ಯಾಕೆ ಹಾಗೆ ಅನಿಸುತ್ತೆ?

ನಾವೇನು ಕಲಿತ್ವಿ

ಯೆಹೋವನನ್ನು ನೋಡೋಕೆ ಆಗಲ್ಲ, ಆತನಲ್ಲಿ ಒಳ್ಳೇ ಗುಣಗಳಿವೆ. ಅದರಲ್ಲಿ ಶ್ರೇಷ್ಠವಾದದ್ದು ಪ್ರೀತಿ.

ನೆನಪಿದೆಯಾ

  • ನಾವು ಯಾಕೆ ಯೆಹೋವನನ್ನು ನೋಡೋಕೆ ಆಗಲ್ಲ?

  • ಪವಿತ್ರಶಕ್ತಿ ಅಂದ್ರೇನು?

  • ಯೆಹೋವನಲ್ಲಿ ಯಾವೆಲ್ಲಾ ಗುಣಗಳಿವೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೆಹೋವನ ಮುಖ್ಯವಾದ ನಾಲ್ಕು ಗುಣಗಳ ಬಗ್ಗೆ ಕಲಿಯೋ ಮೂಲಕ ಆತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ.

“ದೇವರು ಎಂಥವನು?” (ಕಾವಲಿನಬುರುಜು ನಂ. 1 2019)

ದೇವರು ಎಲ್ಲಾ ಕಡೆ ಇದ್ದಾನೆ ಅಂತ ಜನರು ಹೇಳುತ್ತಾರೆ, ಆದರೆ ಅದು ನಿಜನಾ?

“ದೇವರು ಎಲ್ಲಾ ಕಡೆ, ಎಲ್ಲಾ ವಸ್ತುಗಳಲ್ಲಿಯೂ ಇದ್ದಾನಾ?” (jw.org ಲೇಖನ)

ಪವಿತ್ರಶಕ್ತಿಯನ್ನ (ಪವಿತ್ರಾತ್ಮ) ಬೈಬಲ್‌ ಯಾಕೆ ದೇವರ ಕೈಗೆ ಹೋಲಿಸುತ್ತೆ ಅಂತ ನೋಡಿ.

“ಪವಿತ್ರಾತ್ಮ ಅಂದ್ರೇನು?” (jw.org ಲೇಖನ)

ಒಬ್ಬ ಕಣ್ಣು ಕಾಣದ ವ್ಯಕ್ತಿಗೆ ದೇವರು ತನ್ನ ಬಗ್ಗೆ ಕಾಳಜಿವಹಿಸುತ್ತಾನೆ ಅಂತ ನಂಬಕ್ಕೆ ಕಷ್ಟ ಆಗುತ್ತಿತ್ತು. ಆಮೇಲೆ ಅವನ ಮನೋಭಾವ ಹೇಗೆ ಬದಲಾಯಿತು?

“ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!” (ಕಾವಲಿನಬುರುಜು, ನಂ. 1 2016)

a ಕೀರ್ತನೆ 33:6ರಲ್ಲಿರುವ “ಉಸಿರು” ಅನ್ನೋ ಪದಕ್ಕೆ ಹೀಬ್ರು ಭಾಷೆಯಲ್ಲಿ “ಪವಿತ್ರಶಕ್ತಿ” ಅನ್ನೋ ಅರ್ಥನೂ ಇದೆ.