ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 10

ಯೆಹೋವನ ಸಾಕ್ಷಿಗಳ ಕೂಟಗಳಿಗೆ ನಿಮಗೆ ಸ್ವಾಗತ!

ಯೆಹೋವನ ಸಾಕ್ಷಿಗಳ ಕೂಟಗಳಿಗೆ ನಿಮಗೆ ಸ್ವಾಗತ!

ಯೆಹೋವನ ಸಾಕ್ಷಿಗಳ ಮೀಟಿಂಗಿಗೆ ನಿಮ್ಮನ್ನ ಯಾರಾದ್ರು ಕರೆದಿದ್ದಾರಾ? ಒಂದುವೇಳೆ ನೀವು ಇಲ್ಲಿ ತನಕ ಹೋಗಿಲ್ಲ ಅಂದ್ರೆ ಮೊದಲ ಸಲ ಹೋಗೋಕೆ ಮುಜುಗರ ಅನಿಸಬಹುದು. ‘ಸಭೆಯಲ್ಲಿ ಏನು ನಡೆಯುತ್ತೆ? ಅದು ಯಾಕೆ ತುಂಬ ಪ್ರಾಮುಖ್ಯ? ನಾನು ಯಾಕೆ ಅಲ್ಲಿಗೆ ಹೋಗಬೇಕು?’ ಅಂತ ನಿಮಗೆ ಅನಿಸಬಹುದು. ಸಭೆಯಾಗಿ ಸೇರಿ ಬರೋದು ದೇವರ ಆಪ್ತ ಸ್ನೇಹಿತರಾಗೋಕೆ ಹೇಗೆ ಸಹಾಯ ಮಾಡುತ್ತೆ ಅಂತ ಈ ಪಾಠದಲ್ಲಿ ಕಲಿಯೋಣ. ಅಷ್ಟೇ ಅಲ್ಲ, ನಿಮಗೆ ಇದರಿಂದ ಏನು ಪ್ರಯೋಜನ ಇದೆ ಅನ್ನೋದರ ಬಗ್ಗೆ ಕೂಡ ಕಲಿಯೋಣ.

1. ನಾವು ಸಭೆಯಾಗಿ ಸೇರಿ ಬರೋಕೆ ಮುಖ್ಯ ಕಾರಣ ಏನು?

ಸಭೆಯಾಗಿ ಸೇರಿ ಬರೋದಕ್ಕೆ ಇರೋ ಮುಖ್ಯ ಕಾರಣದ ಬಗ್ಗೆ ಒಬ್ಬ ದೇವಭಕ್ತ ಹೀಗೆ ಹೇಳಿದನು: “ಮಹಾ ಸಭೆಯಲ್ಲಿ ನಾನು ಯೆಹೋವನನ್ನ ಹೊಗಳ್ತೀನಿ.” (ಕೀರ್ತನೆ 26:12) ಅದೇ ತರ ಯೆಹೋವನ ಸಾಕ್ಷಿಗಳು ಪ್ರತಿ ವಾರ ಸಭೆಯಾಗಿ ಸೇರಿ ಬರುತ್ತಾರೆ. ಅವರು ಭೂಮಿಯ ಎಲ್ಲಾ ಕಡೆ ಯೆಹೋವನನ್ನು ಹೊಗಳೋಕೆ, ಹಾಡೋಕೆ ಮತ್ತು ಪ್ರಾರ್ಥಿಸೋಕೆ ಖುಷಿಖುಷಿಯಾಗಿ ಸೇರಿ ಬರುತ್ತಾರೆ. ವರ್ಷದಲ್ಲಿ ಕೆಲವು ಸಲ ದೊಡ್ಡದೊಡ್ಡ ಗುಂಪಾಗಿಯೂ ಅವರು ದೇವರನ್ನ ಆರಾಧಿಸೋಕೆ ಸೇರಿ ಬರುತ್ತಾರೆ.

2. ಸಭೆಗೆ ಬಂದ್ರೆ ಏನೆಲ್ಲಾ ಕಲಿಯಬಹುದು?

ಸಭೆಯಲ್ಲಿ ಮುಖ್ಯವಾಗಿ ದೇವರ ವಾಕ್ಯವಾದ ಬೈಬಲನ್ನ ‘ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾರೆ.’ (ನೆಹೆಮೀಯ 8:8 ಓದಿ.) ನೀವು ಸಭೆಗೆ ಬಂದ್ರೆ ಯೆಹೋವನ ಬಗ್ಗೆ ಮತ್ತು ಆತನಲ್ಲಿ ಇರೋ ಸುಂದರ ಗುಣಗಳ ಬಗ್ಗೆ ಕಲಿಯಬಹುದು. ಯೆಹೋವನಿಗೆ ನಿಮ್ಮ ಮೇಲೆ ಇರೋ ಪ್ರೀತಿಯ ಬಗ್ಗೆ ಹೆಚ್ಚು ತಿಳಿದುಕೊಳ್ತಾ ಹೋದಂತೆ ಆತನಿಗೆ ಇನ್ನೂ ಹತ್ತಿರ ಆಗ್ತೀರ. ಅಷ್ಟೇ ಅಲ್ಲ, ಜೀವನದಲ್ಲಿ ಖುಷಿಖುಷಿಯಾಗಿ ಇರೋಕೆ ಯೆಹೋವನು ನಿಮಗೆ ಹೇಗೆ ಸಹಾಯ ಮಾಡ್ತಾನೆ ಅನ್ನೋದರ ಬಗ್ಗೆನೂ ಕಲಿಯುತ್ತೀರ.—ಯೆಶಾಯ 48:17, 18.

3. ಸಭೆಗೆ ಬಂದಾಗ ಬೇರೆಯವರ ಜೊತೆ ಮಾತಾಡೋದ್ರಿಂದ ನಿಮಗೇನು ಪ್ರಯೋಜನ?

“ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ” ಅಂತ ಯೆಹೋವನು ಬೈಬಲಿನ ಮೂಲಕ ತಿಳಿಸಿದ್ದಾನೆ. (ಇಬ್ರಿಯ 10:24, 25) ನಿಜವಾದ ಪ್ರೀತಿ ತೋರಿಸುವವರು ಮತ್ತು ನಿಮ್ಮ ತರನೇ ದೇವರ ಬಗ್ಗೆ ಜಾಸ್ತಿ ಕಲಿಯೋಕೆ ಇಷ್ಟಪಡುವವರು ಸಭೆಯಲ್ಲಿ ಸಿಗುತ್ತಾರೆ. ಅವರ ಮಾತುಗಳಿಂದ ನಮಗೆ ಪ್ರೋತ್ಸಾಹ ಸಿಗುತ್ತೆ, ಬೈಬಲ್‌ ಮೇಲೆ ನಮಗಿರೋ ನಂಬಿಕೆನೂ ಬಲವಾಗುತ್ತೆ. (ರೋಮನ್ನರಿಗೆ 1:11, 12 ಓದಿ.) ಕಷ್ಟಗಳ ಮಧ್ಯೆನೂ ಸಂತೋಷದಿಂದ ಜೀವನ ಮಾಡ್ತಾ ಇರೋರು ಸಭೆಯಲ್ಲಿ ಇರುತ್ತಾರೆ. ನಿಮಗೆ ಬರೋ ಸಮಸ್ಯೆಗಳನ್ನ ನಿಭಾಯಿಸಿಕೊಂಡು ಹೋಗೋಕೆ ಅವರ ಹತ್ತಿರ ಮಾತಾಡೋದ್ರಿಂದ ಸಲಹೆಗಳು ಸಿಗುತ್ತೆ. ಈ ಎಲ್ಲಾ ಕಾರಣಗಳಿಗಾಗಿ ನಾವು ತಪ್ಪದೇ ಸಭೆಗೆ ಹೋಗಬೇಕು ಅಂತ ಯೆಹೋವನು ಇಷ್ಟಪಡ್ತಾನೆ!

ಹೆಚ್ಚನ್ನ ತಿಳಿಯೋಣ

ಯೆಹೋವನ ಸಾಕ್ಷಿಗಳ ಕೂಟಗಳು ಹೇಗಿರುತ್ತೆ ಅಂತ ನೋಡಿ. ಕೂಟಗಳಿಗೆ ಹೋಗೋಕೆ ಮಾಡುವ ಪ್ರಯತ್ನಗಳಿಂದ ಯಾವ ಆಶೀರ್ವಾದಗಳು ಸಿಗುತ್ತೆ ಅಂತ ತಿಳಿಯಿರಿ.

4. ಯೆಹೋವನ ಸಾಕ್ಷಿಗಳ ಕೂಟಗಳು

ಒಂದನೇ ಶತಮಾನದಲ್ಲಿ ಕ್ರೈಸ್ತರು ಯೆಹೋವ ದೇವರನ್ನ ಆರಾಧಿಸಲು ತಪ್ಪದೇ ಸೇರಿ ಬರುತ್ತಿದ್ರು. (ರೋಮನ್ನರಿಗೆ 16:3-5) ಕೊಲೊಸ್ಸೆ 3:16 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:

  • ಒಂದನೇ ಶತಮಾನದ ಕ್ರೈಸ್ತರು ಯೆಹೋವನನ್ನು ಹೇಗೆ ಆರಾಧಿಸ್ತಿದ್ದರು?

ಇಂದು ಯೆಹೋವನ ಸಾಕ್ಷಿಗಳು ಸಹ ತಮ್ಮ ರಾಜ್ಯ ಸಭಾಗೃಹಕ್ಕೆ ತಪ್ಪದೇ ಸೇರಿ ಬರುತ್ತಾರೆ. ಕೂಟಗಳು ಹೇಗಿರುತ್ತೆ ಅಂತ ತಿಳಿಯೋಕೆ ವಿಡಿಯೋ ನೋಡಿ. ನಂತರ ಕೊಡಲಾದ ಚಿತ್ರವನ್ನ ನೋಡಿ, ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ರಾಜ್ಯ ಸಭಾಗೃಹದಲ್ಲಿ ನಡೆಯೋ ವಿಷಯಗಳಿಗೂ ಕೊಲೊಸ್ಸೆ 3:16ರಲ್ಲಿ ಓದಿದ್ದಕ್ಕೂ ಯಾವ ಹೋಲಿಕೆಗಳನ್ನ ನೀವು ಗಮನಿಸಿದ್ರಿ?

  • ವಿಡಿಯೋ ಅಥವಾ ಚಿತ್ರದಲ್ಲಿರುವ ಯಾವೆಲ್ಲಾ ವಿಷಯಗಳು ನಿಮಗೆ ಇಷ್ಟ ಆಯ್ತು?

2 ಕೊರಿಂಥ 9:7 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗೋಕೆ ಹಣ ಕೊಡಬೇಕಾಗಿಲ್ಲ ಯಾಕೆ?

ಈ ವಾರದ ಕೂಟಗಳಲ್ಲಿ ಯಾವ್ಯಾವ ವಿಷಯಗಳಿರುತ್ತೆ ಅಂತ ನಿಮ್ಮ ಬೈಬಲ್‌ ಟೀಚರ್‌ ಹತ್ತಿರ ಕೇಳಿ ತಿಳಿದುಕೊಳ್ಳಿ.

  • ಇದರಲ್ಲಿ ಯಾವ ಭಾಗವನ್ನ ನೋಡಲಿಕ್ಕಾಗಿ ನೀವು ಕಾಯುತ್ತಿದ್ದೀರಾ?

ನಿಮಗೆ ಗೊತ್ತಿತ್ತಾ?

ಇಡೀ ಭೂಮಿಯಲ್ಲಿ ಯಾವಾಗ ಮತ್ತು ಎಲ್ಲೆಲ್ಲಿ ಕೂಟಗಳು ನಡೆಯುತ್ತೆ ಅಂತ ನೀವು jw.org ವೆಬ್‌ಸೈಟಲ್ಲಿ ನೋಡಿ ತಿಳಿದುಕೊಳ್ಳಬಹುದು.

  1. ನಮ್ಮ ಕೂಟಗಳಲ್ಲಿ ಭಾಷಣಗಳು, ಅಭಿನಯಗಳು ಮತ್ತು ವಿಡಿಯೋಗಳು ಇರುತ್ತೆ. ಕೂಟಗಳ ಆರಂಭದಲ್ಲಿ ಮತ್ತು ಕೊನೆಯಲ್ಲಿ ಗೀತೆ ಹಾಡಿ ಪ್ರಾರ್ಥಿಸಲಾಗುತ್ತೆ

  2. ಕೂಟದ ಕೆಲವು ಭಾಗಗಳಲ್ಲಿ ಸಭಿಕರು ಉತ್ತರ ಕೊಡಬಹುದು

  3. ವಯಸ್ಸಾದವರು, ಮಕ್ಕಳು, ಯುವಕರು, ಯಾರು ಬೇಕಾದ್ರೂ ಬರಬಹುದು

  4. ಯೆಹೋವನ ಸಾಕ್ಷಿಗಳ ಕೂಟಗಳು ಉಚಿತ. ಕೂಟಗಳಿಗಾಗಿ ನಿಮ್ಮ ಹತ್ತಿರ ಯಾರೂ ಹಣ ಕೇಳಲ್ಲ

5. ಕೂಟಗಳಿಗೆ ಹೋಗೋಕೆ ಪ್ರಯತ್ನ ಹಾಕಬೇಕು

ಯೇಸುವಿನ ಕುಟುಂಬದ ಉದಾಹರಣೆಯನ್ನ ನೋಡಿ. ಅವರು ಪ್ರತಿವರ್ಷ ಹಬ್ಬಕ್ಕೆ ಹೋಗಬೇಕಂದ್ರೆ, ನಜರೇತಿನಿಂದ ಯೆರೂಸಲೇಮಿನವರೆಗೆ ಸುಮಾರು 100 ಕಿ.ಮೀ. ನಡೆಯಬೇಕಿತ್ತು. ಅದು ಗುಡ್ಡಗಾಡು ಪ್ರದೇಶವಾಗಿತ್ತು. ಲೂಕ 2:39-42 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಅವರು ಯೆರೂಸಲೇಮಿಗೆ ಹೋಗೋಕೆ ಯಾವೆಲ್ಲಾ ಪ್ರಯತ್ನಗಳನ್ನ ಮಾಡಬೇಕಿತ್ತು?

  • ಕೂಟಗಳಿಗೆ ಹೋಗೋಕೆ ನಿಮಗೆ ಯಾವುದಾದ್ರೂ ಸಮಸ್ಯೆಗಳಿವೆಯಾ? ಅದನ್ನ ಹೇಗೆ ಜಯಿಸುತ್ತೀರಾ?

  • ಕಷ್ಟ ಇದ್ರೂ ಕೂಟಗಳಿಗೆ ಹೋಗಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?

ಯೆಹೋವನನ್ನು ಆರಾಧಿಸೋಕೆ ಸಭೆಯಾಗಿ ಕೂಡಿ ಬರೋದು ತುಂಬ ಪ್ರಾಮುಖ್ಯ ಅಂತ ಬೈಬಲ್‌ ಹೇಳುತ್ತೆ. ಇಬ್ರಿಯ 10:24, 25 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಕೂಟಗಳಿಗೆ ಯಾಕೆ ತಪ್ಪದೇ ಹೋಗಬೇಕು?

ಕೆಲವರು ಹೀಗಂತಾರೆ: “ಬೈಬಲನ್ನ ನಾವು ಮನೆಯಲ್ಲೇ ಕಲಿಯಬಹುದಲ್ವಾ, ಸಭೆಗೆ ಯಾಕೆ ಹೋಗಬೇಕು?”

  • ಇದರ ಬಗ್ಗೆ ಯೆಹೋವನ ಇಷ್ಟ ಏನು, ನಿಮಗೆ ಯಾವ ವಚನ ಅಥವಾ ಬೈಬಲ್‌ ಉದಾಹರಣೆ ನೆನಪಾಗುತ್ತೆ?

ನಾವೇನು ಕಲಿತ್ವಿ

ಕೂಟಗಳಿಗೆ ಹೋಗೋದ್ರಿಂದ ಯೆಹೋವ ದೇವರ ಬಗ್ಗೆ ಹೆಚ್ಚು ಕಲಿಯಬಹುದು, ಆತನ ಆಪ್ತ ಸ್ನೇಹಿತರಾಗಬಹುದು ಮತ್ತು ಯೆಹೋವನ ಜನರ ಜೊತೆ ಸೇರಿ ಆತನನ್ನ ಆರಾಧಿಸಬಹುದು.

ನೆನಪಿದೆಯಾ

  • ಕೂಟಗಳಿಗೆ ಸೇರಿ ಬರಬೇಕು ಅಂತ ಯೆಹೋವ ದೇವರು ಯಾಕೆ ಹೇಳ್ತಾನೆ?

  • ಯೆಹೋವನ ಸಾಕ್ಷಿಗಳ ಕೂಟದಲ್ಲಿ ನೀವು ಯಾವೆಲ್ಲಾ ವಿಷಯಗಳ ಬಗ್ಗೆ ಕಲಿಯಬಹುದು?

  • ಕೂಟಗಳಿಗೆ ಹೋಗೋದ್ರಿಂದ ಇನ್ಯಾವ ಪ್ರಯೋಜನಗಳಿವೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಕೂಟಗಳಿಗೆ ಹೋಗೋಕೆ ನಿಮಗೆ ಮುಜುಗರ ಆಗ್ತಿದ್ಯಾ? ಹಾಗಿದ್ರೆ ನಿಮ್ಮ ತರಾನೇ ಮುಜುಗರ ಇದ್ದ ಒಬ್ಬ ವ್ಯಕ್ತಿ ಕೂಟಗಳನ್ನ ಇಷ್ಟಪಡೋಕೆ ಹೇಗೆ ಶುರುಮಾಡಿದ ಅಂತ ನೋಡಿ.

ಅವರು ಮಾತಾಡಿಸಿದ್ದನ್ನ ನಾವೆಂದೂ ಮರೆಯುವುದಿಲ್ಲ (4:16)

ಒಬ್ಬ ಯುವಕನಿಗೆ ಕೂಟಗಳು ಯಾಕೆ ಇಷ್ಟ ಆಯ್ತು? ತಪ್ಪದೇ ಕೂಟಗಳಿಗೆ ಹೋಗೋಕೆ ಅವನು ಏನು ಮಾಡಿದ ಅಂತ ನೋಡಿ.

ನನಗೆ ಪ್ರಿಯವಾದ ಕೂಟಗಳು! (4:33)

ಮೀಟಿಂಗಿಗೆ ಹೋಗೋದರ ಬಗ್ಗೆ ಕೆಲವರಿಗೆ ಹೇಗನಿಸುತ್ತೆ ಅಂತ ನೋಡಿ.

“ರಾಜ್ಯ ಸಭಾಗೃಹದಲ್ಲಿ ನಡಿಯೋ ಮೀಟಿಂಗ್‌ಗೆ ಯಾಕೆ ಹೋಗಬೇಕು?” (jw.org ಲೇಖನ)

ಯೆಹೋವನ ಸಾಕ್ಷಿಗಳ ಮೀಟಿಂಗಿಗೆ ಹೋಗಿದ್ರಿಂದ ಒಬ್ಬ ರೌಡಿಯ ಜೀವನ ಹೇಗೆ ಬದಲಾಯ್ತು ಅಂತ ನೋಡಿ.

“ಪಿಸ್ತೂಲ್‌ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ” (ಕಾವಲಿನಬುರುಜು, ಅಕ್ಟೋಬರ್‌ 1, 2014)