ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 12

ಬೈಬಲ್‌ ಕಲಿಯೋದನ್ನ ಮುಂದುವರಿಸಿ!

ಬೈಬಲ್‌ ಕಲಿಯೋದನ್ನ ಮುಂದುವರಿಸಿ!

ಬೈಬಲ್‌ ಕಲಿಯೋದನ್ನ ಒಂದು ಸುಂದರ ಪ್ರಯಾಣಕ್ಕೆ ಹೋಲಿಸಬಹುದು. ಈ ಪ್ರಯಾಣದಲ್ಲಿ ಕೆಲವು ಅಡೆತಡೆಗಳು ಬರಬಹುದು. ಹಾಗಿದ್ರೂ ಬೈಬಲ್‌ ಕಲಿಯೋದನ್ನ ತಪ್ಪದೇ ಮುಂದುವರಿಸಲು ಯಾವುದು ಸಹಾಯ ಮಾಡುತ್ತೆ? ಹೀಗೆ ಮಾಡೋದ್ರಿಂದ ಏನು ಪ್ರಯೋಜನ ಇದೆ? ಇದರ ಬಗ್ಗೆ ನೋಡೋಣ.

1. ಬೈಬಲ್‌ ಕಲಿಯೋದ್ರಿಂದ ಏನು ಪ್ರಯೋಜನ ಇದೆ?

“ಪವಿತ್ರ ಗ್ರಂಥಕ್ಕೆ ಜೀವ ಇದೆ, ತುಂಬಾ ಶಕ್ತಿ ಇದೆ.” (ಇಬ್ರಿಯ 4:12) ದೇವರು ನಿಮ್ಮನ್ನ ಎಷ್ಟು ಪ್ರೀತಿಸುತ್ತಾನೆ ಅಂತ ಬೈಬಲಿನಿಂದ ಕಲಿಯಬಹುದು. ಅಷ್ಟೇ ಅಲ್ಲ ದೇವರಿಗೆ ಏನಿಷ್ಟ, ಏನಿಷ್ಟ ಇಲ್ಲ ಅನ್ನೋದರ ಬಗ್ಗೆನೂ ಕಲಿಯಬಹುದು. ಬೈಬಲಿನಿಂದ ವಿವೇಕವನ್ನ ಪಡೆದುಕೊಳ್ಳಬಹುದು ಮತ್ತು ನಿರೀಕ್ಷೆಯ ಬಗ್ಗೆನೂ ತಿಳಿದುಕೊಳ್ಳಬಹುದು. ಇದ್ರಿಂದ ಕಷ್ಟ ಸಮಸ್ಯೆಗಳನ್ನ ಎದುರಿಸೋಕಾಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ದೇವರ ಗೆಳೆಯರಾಗಲು ಬೈಬಲ್‌ ಸಹಾಯ ಮಾಡುತ್ತೆ. ಜೀವನದಲ್ಲಿ ಯಾವಾಗಲೂ ಖುಷಿಖುಷಿಯಾಗಿ ಇರಲು ಕೂಡ ಸಹಾಯ ಮಾಡುತ್ತೆ. ಹಾಗಾಗಿ ಬೈಬಲ್‌ ಕಲಿಯೋದನ್ನ ಮುಂದುವರಿಸೋಣ.

2. ಬೈಬಲಲ್ಲಿ ಇರೋ ಸತ್ಯ ತುಂಬ ಮುಖ್ಯ ಅಂತ ನಾವು ಯಾಕೆ ತಿಳಿದುಕೊಳ್ಳಬೇಕು?

ಬೈಬಲಲ್ಲಿ ಇರೋ ಸತ್ಯಗಳು ಅಮೂಲ್ಯವಾದ ನಿಧಿಗಳಂತಿವೆ. ಅದಕ್ಕೆ ಬೈಬಲ್‌, “ಅದನ್ನ ಯಾವತ್ತೂ ಮಾರಿಬಿಡಬೇಡ” ಅಂತ ಹೇಳುತ್ತೆ. (ಜ್ಞಾನೋಕ್ತಿ 23:23) ಬೈಬಲಲ್ಲಿ ಇರೋ ಸತ್ಯ ಎಷ್ಟು ಅಮೂಲ್ಯ ಅನ್ನೋದನ್ನ ಮನಸ್ಸಲ್ಲಿ ಇಟ್ರೆ ಅದನ್ನ ಕಲಿಯೋಕೆ ನಮ್ಮ ಕೈಯಲ್ಲಿ ಆಗೋದನ್ನೆಲ್ಲಾ ಮಾಡ್ತೇವೆ. ಎಷ್ಟೇ ಕಷ್ಟ ಆದ್ರೂ ನಾವದನ್ನ ಕಲಿಯೋದನ್ನ ನಿಲ್ಲಿಸಲ್ಲ.—ಜ್ಞಾನೋಕ್ತಿ 2:4, 5 ಓದಿ.

3. ಬೈಬಲ್‌ ಕಲಿಯೋದನ್ನ ಮುಂದುವರಿಸಲು ಯೆಹೋವನು ನಿಮಗೆ ಹೇಗೆ ಸಹಾಯ ಮಾಡ್ತಾನೆ?

ಯೆಹೋವನು ಸರ್ವಶಕ್ತ, ಸೃಷ್ಟಿಕರ್ತ ಮತ್ತು ನಮ್ಮ ಸ್ನೇಹಿತ. ತನ್ನ ಬಗ್ಗೆ ಕಲಿಯೋಕೆ ಆತನು ನಿಮಗೆ ಸಹಾಯ ಮಾಡಕ್ಕೆ ಇಷ್ಟಪಡ್ತಾನೆ. “ದೇವರಿಗೆ ಇಷ್ಟ ಆಗೋ ಕೆಲಸಗಳನ್ನ ಮಾಡೋಕೆ ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ದೇವರೇ ಕೊಡ್ತಾನೆ.” (ಫಿಲಿಪ್ಪಿ 2:13 ಓದಿ.) ಬೈಬಲನ್ನ ಕಲಿಯೋಕೆ ಮತ್ತು ಅದರ ಪ್ರಕಾರ ನಡೆಯೋಕೆ ಕಷ್ಟ ಅನಿಸಿದ್ರೆ ಯೆಹೋವನು ನಿಮಗೆ ಸಹಾಯ ಮಾಡ್ತಾನೆ. ಯಾವುದೇ ಅಡೆತಡೆಗಳು ಬಂದರೂ ಅದನ್ನ ಜಯಿಸೋಕೆ ಬೇಕಾದ ಬಲ, ಧೈರ್ಯ ಕೊಡ್ತಾನೆ. ಹಾಗಾಗಿ ಬೈಬಲ್‌ ಸ್ಟಡಿಯನ್ನ ನಿಲ್ಲಿಸದೇ ಇರೋಕೆ ಸಹಾಯ ಮಾಡುವಂತೆ ಯೆಹೋವನಿಗೆ ಪ್ರತಿದಿನ ಪ್ರಾರ್ಥಿಸಿ.—1 ಥೆಸಲೊನೀಕ 5:17.

ಹೆಚ್ಚನ್ನ ತಿಳಿಯೋಣ

ನಿಮಗೆ ಎಷ್ಟೇ ಕೆಲಸಗಳು ಇದ್ದರೂ ಅಥವಾ ಯಾರೇ ವಿರೋಧ ಮಾಡಿದ್ರೂ ತಪ್ಪದೇ ಬೈಬಲ್‌ ಕಲಿಯೋದನ್ನ ಹೇಗೆ ಮುಂದುವರಿಸಬಹುದು ಅಂತ ತಿಳಿಯಿರಿ. ಇದನ್ನ ಮಾಡೋಕೆ ಯೆಹೋವನು ಹೇಗೆ ಸಹಾಯ ಮಾಡ್ತಾನೆ ಅಂತನೂ ನೋಡಿ.

4. ಬೈಬಲ್‌ ಕಲಿಯೋದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ

ಕೆಲವೊಮ್ಮೆ ನಮಗೆ ಬೈಬಲ್‌ ಕಲಿಯೋಕೆ ಪುರುಸೊತ್ತೇ ಇರಲ್ಲ. ಆಗ ಏನು ಮಾಡೋದು? ಅದರ ಬಗ್ಗೆ ತಿಳಿಯಲು ಫಿಲಿಪ್ಪಿ 1:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • “ತುಂಬ ಮುಖ್ಯವಾದ” ವಿಷಯಗಳು ಯಾವುವು ಅಂತ ನಿಮಗೆ ಅನಿಸುತ್ತೆ?

  • ನೀವು ಹೇಗೆ ಬೈಬಲ್‌ ಕಲಿಯೋಕೆ ಹೆಚ್ಚು ಪ್ರಾಮುಖ್ಯತೆ ಕೊಡಬಹುದು?

  1. ನೀವು ಒಂದು ಬಕೆಟಿನಲ್ಲಿ ಮರಳನ್ನ ಹಾಕಿ ಆಮೇಲೆ ಕಲ್ಲನ್ನ ಹಾಕಿದರೆ ಎಲ್ಲಾ ಕಲ್ಲನ್ನ ಬಕೆಟಿನಲ್ಲಿ ಹಾಕೋಕೆ ಆಗಲ್ಲ

  2. ನೀವು ಬಕೆಟಿನಲ್ಲಿ ಮೊದಲು ಕಲ್ಲನ್ನ ಹಾಕಿದರೆ ಆದಷ್ಟು ಮರಳನ್ನ ಅದರೊಳಗೆ ಹಾಕೋಕೆ ಆಗುತ್ತೆ. ಅದೇ ತರ ನಿಮ್ಮ ಜೀವನದಲ್ಲಿ ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಮೊದಲು ಆದ್ಯತೆ ಕೊಟ್ಟರೆ ನೀವು ಅವುಗಳನ್ನೆಲ್ಲಾ ಚೆನ್ನಾಗಿ ಮಾಡೋಕಾಗುತ್ತೆ. ಅಷ್ಟೇ ಅಲ್ಲ ಬೇರೆ ವಿಷಯಗಳಿಗೂ ಸಮಯ ಸಿಗುತ್ತೆ

ದೇವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು, ಆತನನ್ನ ಆರಾಧಿಸಬೇಕು ಅನ್ನೋ ಅಗತ್ಯವನ್ನ ಇಟ್ಟು ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಬೈಬಲನ್ನ ಕಲಿಯುವಾಗ ಆ ಅಗತ್ಯವನ್ನ ಪೂರೈಸಿಕೊಳ್ಳೋಕೆ ಆಗುತ್ತೆ. ಮತ್ತಾಯ 5:3 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಬೈಬಲ್‌ ಕಲಿಯೋಕೆ ಹೆಚ್ಚು ಪ್ರಾಮುಖ್ಯತೆ ಕೊಡುವಾಗ ನಮಗೆ ಯಾವ ಪ್ರಯೋಜನ ಸಿಗುತ್ತೆ?

5. ಎಷ್ಟೇ ವಿರೋಧ ಬಂದ್ರೂ ಬೈಬಲ್‌ ಕಲಿಯೋದನ್ನ ನಿಲ್ಲಿಸಬೇಡಿ

ನೀವು ಬೈಬಲ್‌ ಕಲಿಯೋದನ್ನ ಕೆಲವೊಮ್ಮೆ ಬೇರೆಯವರು ವಿರೋಧಿಸಬಹುದು. ಇಂಥ ಸಮಯದಲ್ಲಿ ಏನು ಮಾಡಬೇಕು ಅಂತ ಫ್ರಾನ್‌ಚೆಸ್ಕೋರವರ ಅನುಭವದಿಂದ ತಿಳಿದುಕೊಳ್ಳಿ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ಬೈಬಲ್‌ ಕಲಿಯುತ್ತಿದ್ದೀನಿ ಅಂತ ಫ್ರಾನ್‌ಚೆಸ್ಕೋ ಹೇಳಿದಾಗ ಅವನ ಕುಟುಂಬದವರು ಮತ್ತು ಗೆಳೆಯರು ಏನು ಮಾಡಿದರು?

  • ಅವನು ಬೈಬಲ್‌ ಕಲಿಯೋದನ್ನ ನಿಲ್ಲಿಸದೇ ಇದ್ದಿದ್ದರಿಂದ ಯಾವ ಆಶೀರ್ವಾದ ಸಿಕ್ತು?

2 ತಿಮೊತಿ 2:24, 25 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನೀವು ಬೈಬಲ್‌ ಕಲಿಯುತ್ತಾ ಇರೋದರ ಬಗ್ಗೆ ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಗನಿಸುತ್ತಿದೆ?

  • ಈ ವಚನದಲ್ಲಿ ಓದಿದ ಪ್ರಕಾರ ನೀವು ಬೈಬಲ್‌ ಕಲಿಯೋದು ಯಾರಿಗಾದ್ರೂ ಇಷ್ಟ ಆಗಲಿಲ್ಲ ಅಂದರೆ ನೀವೇನು ಮಾಡಬೇಕು? ಯಾಕೆ?

6. ಯೆಹೋವ ನಿಮಗೆ ಖಂಡಿತ ಸಹಾಯ ಮಾಡ್ತಾನೆ

ನಾವು ಯೆಹೋವನಿಗೆ ಆಪ್ತರಾಗುತ್ತಾ ಹೋದಂತೆ ಆತನನ್ನ ಮೆಚ್ಚಿಸಬೇಕು ಅನ್ನೋ ಆಸೆನೂ ಹೆಚ್ಚಾಗುತ್ತೆ. ಆದ್ರೂ ಆತನಿಗೆ ಇಷ್ಟ ಆಗೋ ರೀತಿ ಜೀವಿಸೋಕೆ, ಬದಲಾವಣೆ ಮಾಡಿಕೊಳ್ಳೋಕೆ ನಮಗೆ ಕಷ್ಟ ಅನಿಸಬಹುದು. ನಿಮಗೂ ಈ ರೀತಿ ಅನಿಸೋದಾದ್ರೆ ಪ್ರಯತ್ನ ಬಿಡಬೇಡಿ. ಯೆಹೋವ ನಿಮಗೆ ಸಹಾಯ ಮಾಡ್ತಾನೆ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಜಿಮ್‌ ಯಾವೆಲ್ಲಾ ಬದಲಾವಣೆ ಮಾಡಿಕೊಂಡನು?

  • ಅವನ ಉದಾಹರಣೆಯಿಂದ ನೀವೇನು ಕಲಿತ್ರಿ?

ಇಬ್ರಿಯ 11:6 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ‘ಶ್ರದ್ಧೆಯಿಂದ ಆರಾಧಿಸೋರು’ ಅಂದರೆ ಯೆಹೋವನ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಆತನನ್ನ ಮೆಚ್ಚಿಸೋಕೆ ತಮ್ಮಿಂದಾದ ಎಲ್ಲವನ್ನ ಮಾಡುವವರು. ಇಂಥವರಿಗಾಗಿ ಯೆಹೋವನು ಏನು ಮಾಡ್ತಾನೆ?

  • ಬೈಬಲ್‌ ಕಲಿಯೋಕೆ ನೀವು ಹಾಕುವ ಪ್ರಯತ್ನಗಳನ್ನ ನೋಡುವಾಗ ಯೆಹೋವನಿಗೆ ಹೇಗನಿಸುತ್ತೆ?

ಕೆಲವರು ಹೀಗೆ ಕೇಳಬಹುದು: “ನೀವು ಯಾಕೆ ಬೈಬಲ್‌ ಕಲೀತಿದ್ದೀರಾ?”

  • ಆಗ ನೀವೇನು ಹೇಳುತ್ತೀರಾ?

ನಾವೇನು ಕಲಿತ್ವಿ

ಕಷ್ಟಗಳು ಬಂದರೂ ತಪ್ಪದೇ ಬೈಬಲ್‌ ಕಲಿಯುತ್ತಾ ಇದ್ದರೆ ಯಾವಾಗ್ಲೂ ಖುಷಿ ಖುಷಿಯಾಗಿ ಇರಬಹುದು. ಸಮಸ್ಯೆಗಳು ಬರುವಾಗ ಯೆಹೋವನ ಮೇಲೆ ಭರವಸೆ ಇಡಿ, ಆತನು ನಿಮಗೆ ಖಂಡಿತ ಸಹಾಯ ಮಾಡ್ತಾನೆ.

ನೆನಪಿದೆಯಾ

  • ಬೈಬಲಿನ ಸತ್ಯಗಳು ನಿಮಗೆ ಯಾಕಷ್ಟು ಅಮೂಲ್ಯ?

  • ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಪ್ರಾಮುಖ್ಯತೆ ಕೊಡೋಕೆ ನೀವೇನು ಮಾಡಬಹುದು?

  • ತಪ್ಪದೇ ಬೈಬಲ್‌ ಕಲಿಯೋಕೆ ನಾವು ಯಾಕೆ ಯೆಹೋವ ದೇವರ ಸಹಾಯ ಪಡೆದುಕೊಳ್ಳಬೇಕು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಸಮಯವನ್ನ ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅಂತ ತಿಳಿಯಲು ನಾಲ್ಕು ವಿಷಯಗಳನ್ನ ನೋಡಿ. ಇದನ್ನ ಮಾಡಿ ತುಂಬ ಜನ ಪ್ರಯೋಜನ ಪಡೆದಿದ್ದಾರೆ.

“ನಿಮ್ಮ ಸಮಯ ನಿಮ್ಮ ಕೈಯಲ್ಲಿ” (ಎಚ್ಚರ!, ಏಪ್ರಿಲ್‌ 2014)

ಒಬ್ಬ ಸ್ತ್ರೀ ಬೈಬಲ್‌ ಕಲಿಯುತ್ತಿರೋದು ಅವಳ ಗಂಡನಿಗೆ ಇಷ್ಟ ಆಗುತ್ತಿರಲಿಲ್ಲ. ಆಗ ಯೆಹೋವ ದೇವರು ಅವಳಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡಿ.

ತಾಳಿಕೊಂಡು ಹೋಗಲು ಯೆಹೋವನು ಬಲ ಕೊಟ್ಟನು (5:05)

ಪತ್ನಿಯ ಪಟ್ಟುಬಿಡದ ಪ್ರಯತ್ನದಿಂದ ಪತಿಗಾದ ಪ್ರಯೋಜನ.

ಸತ್ಯಕ್ಕಾಗಿ ನನ್ನ ತನಿಖೆ (6:30)

ಯೆಹೋವನ ಸಾಕ್ಷಿಗಳು ಕುಟುಂಬಗಳನ್ನ ಒಡೆಯುತ್ತಾರೆ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ನಿಜಾನಾ?

“ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆಯುತ್ತಾರಾ? ಇಲ್ಲ ಕಟ್ಟುತ್ತಾರಾ?” (jw.org ಲೇಖನ)