ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 18

ನಿಜ ಕ್ರೈಸ್ತರು ಯಾರು?

ನಿಜ ಕ್ರೈಸ್ತರು ಯಾರು?

ಕೋಟ್ಯಾಂತರ ಜನರು ‘ನಾವು ಕ್ರೈಸ್ತರು’ ಅಂತ ಹೇಳಿಕೊಳ್ತಾರೆ. ಆದರೆ ಅವರ ನಂಬಿಕೆ ಒಂದೇ ತರ ಇಲ್ಲ, ಅವರ ಆಚಾರವಿಚಾರನೂ ಬೇರೆಬೇರೆ. ಹಾಗಾದ್ರೆ ನಿಜ ಕ್ರೈಸ್ತರನ್ನ ಕಂಡುಹಿಡಿಯೋದು ಹೇಗೆ?

1. ನಿಜ ಕ್ರೈಸ್ತರು ಅಂದ್ರೆ ಯಾರು?

ಯೇಸುವಿನ ಶಿಷ್ಯರನ್ನ ಅಥವಾ ಹಿಂಬಾಲಕರನ್ನ ಕ್ರೈಸ್ತರು ಅಂತ ಹೇಳ್ತಾರೆ. (ಅಪೊಸ್ತಲರ ಕಾರ್ಯ 11:26 ಓದಿ.) ಆದರೆ ಒಬ್ಬ ವ್ಯಕ್ತಿ ಯೇಸುವಿನ ಶಿಷ್ಯನಾಗೋದು ಹೇಗೆ? “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ” ಅಂತ ಯೇಸು ಹೇಳಿದನು. (ಯೋಹಾನ 8:31) ಇದರ ಅರ್ಥ ಯೇಸು ಹೇಳಿದ್ದನ್ನ ಮಾಡುವವರೇ ನಿಜ ಕ್ರೈಸ್ತರು. ಯೇಸು ಯಾವಾಗ್ಲೂ ಬೈಬಲಿನಲ್ಲಿ ಇರೋದನ್ನೇ ಕಲಿಸಿದನು, ನಿಜ ಕ್ರೈಸ್ತರು ಕೂಡ ಹಾಗೇ ಮಾಡ್ತಾರೆ.—ಲೂಕ 24:27 ಓದಿ.

2. ನಿಜ ಕ್ರೈಸ್ತರು ಹೇಗೆ ಪ್ರೀತಿ ತೋರಿಸ್ತಾರೆ?

ಯೇಸು ತನ್ನ ಹಿಂಬಾಲಕರಿಗೆ ಹೀಗೆ ಹೇಳಿದನು: “ನಾನು ನಿಮ್ಮನ್ನ ಪ್ರೀತಿಸಿದ ಹಾಗೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾನ 15:12) ಯೇಸು ತನ್ನ ಶಿಷ್ಯರನ್ನ ಪ್ರೀತಿಸ್ತಾನೆ ಅಂತ ಹೇಗೆ ತೋರಿಸಿದನು? ಆತನು ಅವರ ಜೊತೆ ಸಮಯ ಕಳೆದನು, ಅವರಿಗೆ ಪ್ರೋತ್ಸಾಹ ಕೊಟ್ಟನು ಮತ್ತು ಸಹಾಯ ಮಾಡಿದನು. ಅಷ್ಟೇ ಅಲ್ಲ, ಅವರಿಗೋಸ್ಕರ ತನ್ನ ಜೀವವನ್ನೇ ಕೊಟ್ಟನು. (1 ಯೋಹಾನ 3:16) ಅದೇ ತರ ನಿಜ ಕ್ರೈಸ್ತರು ಪ್ರೀತಿ ತೋರಿಸಬೇಕು ಅಂತ ಹೇಳೋದಷ್ಟೇ ಅಲ್ಲ, ತಮ್ಮ ಮಾತು ಮತ್ತು ನಡತೆ ಮೂಲಕ ಒಬ್ಬರಿಗೊಬ್ಬರು ಪ್ರೀತಿ ತೋರಿಸ್ತಾರೆ.

3. ನಿಜ ಕ್ರೈಸ್ತರು ಮುಖ್ಯವಾಗಿ ಏನು ಮಾಡ್ತಾರೆ?

ಯೇಸು ತನ್ನ ಶಿಷ್ಯರನ್ನ, “ದೇವರ ಆಳ್ವಿಕೆ ಬಗ್ಗೆ ಸಾರೋಕೆ” ಕಳುಹಿಸಿದನು. (ಲೂಕ 9:2) ಒಂದನೇ ಶತಮಾನದ ಕ್ರೈಸ್ತರು ಆರಾಧನಾ ಸ್ಥಳಗಳಲ್ಲಿ ಮಾತ್ರ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಮನೆಗಳಲ್ಲಿ ಸಾರುತ್ತಿದ್ದರು. (ಅಪೊಸ್ತಲರ ಕಾರ್ಯ 5:42 ಮತ್ತು 17:17 ಓದಿ.) ಅದೇ ತರ ನಿಜ ಕ್ರೈಸ್ತರು ಕೂಡ ಜನ ಎಲ್ಲೆಲ್ಲಿ ಸಿಗುತ್ತಾರೋ ಅಲ್ಲೆಲ್ಲಾ ಹೋಗಿ ಬೈಬಲಿನ ಸತ್ಯವನ್ನ ಸಾರುತ್ತಾರೆ. ನಿಜ ಕ್ರೈಸ್ತರು ಎಲ್ಲಾ ಜನರನ್ನ ಪ್ರೀತಿಸುತ್ತಾರೆ. ಅದಕ್ಕೇ ಅವರು ನಿರೀಕ್ಷೆ ಮತ್ತು ಸಾಂತ್ವನದ ಸಂದೇಶವನ್ನ ಎಲ್ಲಾ ಜನರಿಗೆ ತಿಳಿಸಲಿಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನ ಸಂತೋಷದಿಂದ ಬಳಸುತ್ತಾರೆ.—ಮಾರ್ಕ 12:31.

ಹೆಚ್ಚನ್ನ ತಿಳಿಯೋಣ

ನಿಜ ಕ್ರೈಸ್ತರಿಗೂ ಯೇಸುವಿನ ಬೋಧನೆಗಳನ್ನ ಪಾಲಿಸದವರಿಗೂ ಇರುವ ವ್ಯತ್ಯಾಸವನ್ನ ನೋಡಿ.

4. ನಿಜ ಕ್ರೈಸ್ತರು ಬೈಬಲಿನಲ್ಲಿರುವ ಸತ್ಯವನ್ನ ಹುಡುಕುತ್ತಾರೆ

ಒಂದನೇ ಶತಮಾನದ ಕ್ರೈಸ್ತರು ದೇವರ ವಾಕ್ಯವನ್ನ ಓದಿ ಅದನ್ನ ಪಾಲಿಸ್ತಿದ್ದರು

ಕೆಲವರು ತಾವು ಕ್ರೈಸ್ತರು ಅಂತ ಹೇಳಿಕೊಳ್ತಾರೆ ಆದರೆ ಬೈಬಲಿನಲ್ಲಿರುವ ಸತ್ಯಗಳನ್ನ ಕಲಿಯುವ ಮತ್ತು ಅನ್ವಯಿಸುವ ಅಗತ್ಯ ಇಲ್ಲ ಅಂತ ನೆನಸುತ್ತಾರೆ. ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.

  • ಕೆಲವು ಚರ್ಚಿನವರು ಯೇಸುವಿನ ಬೋಧನೆಗಳನ್ನ ಹೇಗೆ ತಿರುಚಿದ್ದಾರೆ?

ಯೇಸು ಬೈಬಲ್‌ ಸತ್ಯಗಳನ್ನ ಕಲಿಸಿದನು. ಯೋಹಾನ 18:37 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • “ಸತ್ಯವನ್ನ ನಂಬುವ” ನಿಜ ಕ್ರೈಸ್ತರು ಏನು ಮಾಡುತ್ತಾರೆ ಅಂತ ಯೇಸು ಹೇಳಿದನು?

5. ನಿಜ ಕ್ರೈಸ್ತರು ಬೈಬಲ್‌ ಸತ್ಯವನ್ನ ಜನರಿಗೆ ಸಾರುತ್ತಾರೆ

ಒಂದನೇ ಶತಮಾನದ ಕ್ರೈಸ್ತರು ಬೇರೆಯವರಿಗೆ ಸಾರುತ್ತಿದ್ದರು

ಯೇಸು ಸ್ವರ್ಗಕ್ಕೆ ಹೋಗೋದಕ್ಕೆ ಮುಂಚೆ ತನ್ನ ಶಿಷ್ಯರಿಗೆ ಒಂದು ಕೆಲಸ ಕೊಟ್ಟನು. ಆ ಕೆಲಸ ಇವತ್ತಿಗೂ ನಡೆಯುತ್ತಾ ಇದೆ. ಮತ್ತಾಯ 28:19, 20 ಮತ್ತು ಅಪೊಸ್ತಲರ ಕಾರ್ಯ 1:8 ಓದಿ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಿಜ ಕ್ರೈಸ್ತರು ಸಿಹಿಸುದ್ದಿಯನ್ನ ಎಲ್ಲಿ ತನಕ ಮತ್ತು ಎಲ್ಲೆಲ್ಲಿ ಸಾರ್ತಾರೆ?

6. ನಿಜ ಕ್ರೈಸ್ತರು ಏನು ಕಲಿಸ್ತಾರೋ ಅದರ ಪ್ರಕಾರ ನಡೆಯುತ್ತಾರೆ

ಥಾಮಸ್‌ ಅನ್ನೋ ವ್ಯಕ್ತಿ, ‘ನನಗೆ ನಿಜ ಕ್ರೈಸ್ತರು ಸಿಕ್ಕಿದರು’ ಅಂತ ಹೇಳಿದ. ಇದಕ್ಕಿರೋ ಕಾರಣ ತಿಳಿಯಲು ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ಥಾಮಸ್‌ಗೆ ಯಾಕೆ ಧರ್ಮ ಅಂದ್ರೇನೇ ಬೇಡ ಅನಿಸಿಬಿಡ್ತು?

  • ಥಾಮಸ್‌ಗೆ ಸತ್ಯಧರ್ಮ ಸಿಕ್ಕಿದೆ ಅಂತ ಯಾಕೆ ಅನಿಸಿತು?

ನುಡಿಗಿಂತ ನಡೆ ಮುಖ್ಯ. ಮತ್ತಾಯ 7:21 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೇಸುವಿಗೆ ಯಾವುದು ಇಷ್ಟ, ನಂಬಿಕೆ ಇದೆ ಅಂತ ಹೇಳೋದಾ ಅಥವಾ ಅದರ ಪ್ರಕಾರ ನಡೆಯೋದಾ?

7. ನಿಜ ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ

ಒಂದನೇ ಶತಮಾನದ ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು

ಕ್ರೈಸ್ತರು ತಮ್ಮ ಸಹೋದರರಿಗಾಗಿ ಪ್ರಾಣವನ್ನ ಕೊಡೋಕೂ ರೆಡಿ ಇರುತ್ತಾರೆ. ಉದಾಹರಣೆಗೆ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.

  • ಯೋಹಾನ್‌ಸನ್‌ಗಾಗಿ ಸಹೋದರ ಲಾಯ್ಡ್‌ ತನ್ನ ಪ್ರಾಣವನ್ನೇ ಕೊಡೋಕೆ ಯಾಕೆ ರೆಡಿ ಇದ್ದರು?

  • ಲಾಯ್ಡ್‌ ನಿಜ ಕ್ರೈಸ್ತನಂತೆ ನಡೆದುಕೊಂಡರಾ?

ಯೋಹಾನ 13:34, 35 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೇಸುವಿನ ಶಿಷ್ಯರು (ನಿಜ ಕ್ರೈಸ್ತರು) ಬೇರೆ ಜಾತಿ, ದೇಶದ ಜನರ ಜೊತೆ ಹೇಗೆ ನಡೆದುಕೊಳ್ತಾರೆ?

  • ನಿಜ ಕ್ರೈಸ್ತರು ಯುದ್ಧ ಮಾಡ್ತಾರಾ? ನಿಮಗೇನು ಅನಿಸುತ್ತೆ?

ಕೆಲವರು ಹೀಗಂತಾರೆ: “ಯಾವ ಚರ್ಚಿಗೆ ಹೋದರೇನು? ಎಲ್ಲಾ ಒಂದೇ ತಾನೇ?”

  • ನಿಜ ಕ್ರೈಸ್ತರನ್ನ ಗುರುತಿಸೋದು ಯಾಕೆ ಪ್ರಾಮುಖ್ಯ ಅಂತ ತೋರಿಸಲು ಯಾವ ವಚನವನ್ನು ಉಪಯೋಗಿಸುತ್ತೀರಾ?

ನಾವೇನು ಕಲಿತ್ವಿ

ನಿಜ ಕ್ರೈಸ್ತರು ಬೈಬಲ್‌ ಏನು ಹೇಳುತ್ತೋ ಅದರ ಪ್ರಕಾರ ಜೀವನ ಮಾಡ್ತಾರೆ, ಬೇರೆಯವರಿಗೋಸ್ಕರ ಪ್ರಾಣ ಕೊಡುವಷ್ಟರ ಮಟ್ಟಿಗೆ ಪ್ರೀತಿ ತೋರಿಸ್ತಾರೆ ಮತ್ತು ಬೈಬಲ್‌ ಸತ್ಯಗಳನ್ನ ಜನರಿಗೆ ಕಲಿಸ್ತಾರೆ.

ನೆನಪಿದೆಯಾ

  • ನಿಜ ಕ್ರೈಸ್ತರ ನಂಬಿಕೆಗಳಿಗೆ ಆಧಾರ ಏನು?

  • ಯಾವ ಗುಣವನ್ನ ನೋಡಿ ನೀವು ನಿಜ ಕ್ರೈಸ್ತರನ್ನ ಗುರುತಿಸುತ್ತೀರಾ?

  • ನಿಜ ಕ್ರೈಸ್ತರು ಮುಖ್ಯವಾಗಿ ಏನು ಮಾಡ್ತಾರೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೇಸುವಿನ ಮಾದರಿಯನ್ನ ಮತ್ತು ಆತನ ಬೋಧನೆಯನ್ನ ತಮ್ಮ ಜೀವನದಲ್ಲಿ ಆದಷ್ಟು ಪಾಲಿಸೋಕೆ ಬಯಸುವ ಒಂದು ಗುಂಪಿನ ಬಗ್ಗೆ ಹೆಚ್ಚನ್ನ ತಿಳಿಯಿರಿ.

ಯೆಹೋವನ ಸಾಕ್ಷಿಗಳು ಯಾರು? (1:13)

ಒಬ್ಬ ಕ್ಯಾಥೋಲಿಕ್‌ ಸನ್ಯಾಸಿನಿಗೆ (ನನ್‌) ‘ನಿಜ ಕ್ರೈಸ್ತ ಕುಟುಂಬವನ್ನ’ ಕಂಡುಕೊಳ್ಳೋಕೆ ಯಾವುದು ಸಹಾಯ ಮಾಡಿತು ಅಂತ ನೋಡಿ.

“ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!” (ಕಾವಲಿನಬುರುಜು, ಜುಲೈ 1, 2014)

ನೈಸರ್ಗಿಕ ವಿಪತ್ತಿನಿಂದಾಗಿ ಕಷ್ಟದಲ್ಲಿದ್ದ ಜೊತೆ ಸಹೋದರರಿಗೆ ನಿಜ ಕ್ರೈಸ್ತರು ಹೇಗೆ ಪ್ರೀತಿ ತೋರಿಸಿದರು ಅಂತ ನೋಡಿ.

ನೈಸರ್ಗಿಕ ವಿಪತ್ತು ಸಂಭವಿಸಿದಾಗ ನಮ್ಮ ಸಹೋದರರಿಗೆ ಸಹಾಯ—ತುಣುಕು (3:57)

ಒಂದನೇ ಶತಮಾನದ ಕ್ರೈಸ್ತರ ತರನೇ ಈಗಿನ ಕಾಲದ ಕ್ರೈಸ್ತರು ಯೇಸುವಿನ ಮಾತನ್ನ ಪಾಲಿಸ್ತಿದ್ದಾರೆ, ಅದು ಹೇಗೆ ಅಂತ ನೋಡಿ.

“ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?” (ಕಾವಲಿನಬುರುಜು ಲೇಖನ)