ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 21

ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?

ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?

ಯೆಹೋವನು ತನ್ನ ಆಳ್ವಿಕೆಯ ಮೂಲಕ ನಮಗಿರುವ ಎಲ್ಲಾ ಸಮಸ್ಯೆಗಳನ್ನ ಬೇಗನೆ ತೆಗೆದುಹಾಕ್ತಾನೆ. ಇಂಥ ಒಳ್ಳೇ ಸಿಹಿಸುದ್ದಿಯನ್ನ ಬೇರೆಯವರೂ ತಿಳಿದುಕೊಳ್ಳಬೇಕಲ್ವಾ? ತನ್ನ ಶಿಷ್ಯರೂ ಸಿಹಿಸುದ್ದಿಯನ್ನ ಬೇರೆಯವರಿಗೆ ತಿಳಿಸಬೇಕಂತ ಯೇಸು ಆಜ್ಞೆ ಕೊಟ್ಟಿದ್ದಾನೆ. (ಮತ್ತಾಯ 28:19, 20) ಯೇಸು ಕೊಟ್ಟ ಈ ಆಜ್ಞೆಯನ್ನ ಯೆಹೋವನ ಸಾಕ್ಷಿಗಳು ಹೇಗೆ ಪಾಲಿಸುತ್ತಿದ್ದಾರೆ?

1. ಮತ್ತಾಯ 24:14ರಲ್ಲಿರುವ ಮಾತು ಈಗ ಹೇಗೆ ನೆರವೇರುತ್ತಿದೆ?

‘ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾರಲಾಗುತ್ತೆ’ ಅಂತ ಯೇಸು ಮುಂಚೆನೇ ಹೇಳಿದನು. (ಮತ್ತಾಯ 24:14) ಈ ಸಿಹಿಸುದ್ದಿಯನ್ನ ಯೆಹೋವನ ಸಾಕ್ಷಿಗಳಾದ ನಾವು ತುಂಬ ಖುಷಿಯಿಂದ ಸಾರುತ್ತಿದ್ದೇವೆ. ಭೂಮಿಯ ಎಲ್ಲಾ ಕಡೆ ಸುಮಾರು 1000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಈ ಸಿಹಿಸುದ್ದಿಯನ್ನ ಸಾರುತ್ತಾ ಇದ್ದೇವೆ! ಇದೊಂದು ದೊಡ್ಡ ಕೆಲಸ. ಇದನ್ನ ವ್ಯವಸ್ಥಿತವಾಗಿ ಮಾಡೋಕೆ ತುಂಬ ಪ್ರಯತ್ನ ಹಾಕಬೇಕು. ಯೆಹೋವ ದೇವರ ಸಹಾಯವಿಲ್ಲದೆ ಈ ಕೆಲಸವನ್ನ ಮಾಡೋಕೆ ಸಾಧ್ಯಾನೇ ಇಲ್ಲ!

2. ಎಲ್ಲಾ ಜನರಿಗೆ ಸಿಹಿಸುದ್ದಿ ಸಾರಲು ನಾವೇನು ಮಾಡುತ್ತೇವೆ?

ಜನ ಎಲ್ಲೆಲ್ಲಿ ಸಿಗ್ತಾರೋ ಅಲ್ಲೆಲ್ಲಾ ಸಾರುತ್ತೇವೆ. ಒಂದನೇ ಶತಮಾನದ ಕ್ರೈಸ್ತರಂತೆ ನಾವು “ಮನೆಮನೆಗೆ ಹೋಗಿ” ಸಾರುತ್ತೇವೆ. (ಅಪೊಸ್ತಲರ ಕಾರ್ಯ 5:42) ಈ ರೀತಿ ಮಾಡೋದ್ರಿಂದ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಸಾರೋಕೆ ಆಗ್ತಿದೆ. ಕೆಲವೊಮ್ಮೆ ಜನರು ಮನೆಯಲ್ಲಿ ಸಿಗದೇ ಇರೋದ್ರಿಂದ ನಾವು ಸಾರ್ವಜನಿಕ ಸ್ಥಳಗಳಲ್ಲೂ ಸಾರುತ್ತೇವೆ. ಯೆಹೋವನ ಬಗ್ಗೆ ಮತ್ತು ಆತನ ಆಳ್ವಿಕೆಯ ಬಗ್ಗೆ ಜನರಿಗೆ ತಿಳಿಸೋಕೆ ಸಿಗುವ ಎಲ್ಲಾ ಅವಕಾಶಗಳನ್ನ ಚೆನ್ನಾಗಿ ಬಳಸುತ್ತೇವೆ.

3. ಸಿಹಿಸುದ್ದಿಯನ್ನ ಯಾರು ಸಾರಬೇಕು?

ಪ್ರತಿಯೊಬ್ಬ ನಿಜ ಕ್ರೈಸ್ತನು ಸಿಹಿಸುದ್ದಿಯನ್ನ ಸಾರಲೇ ಬೇಕು. ಸಾರುವ ಕೆಲಸವನ್ನ ನಾವು ತುಂಬ ಗಂಭೀರವಾಗಿ ನೋಡುತ್ತೇವೆ. ಜನರ ಜೀವ ಅಪಾಯದಲ್ಲಿ ಇರೋದ್ರಿಂದ ನಮ್ಮ ಕೈಲಾದಷ್ಟು ಹೆಚ್ಚು ಜನರಿಗೆ ಸಿಹಿಸುದ್ದಿಯನ್ನ ಸಾರುತ್ತೇವೆ. (1 ತಿಮೊತಿ 4:16 ಓದಿ.) ಈ ಕೆಲಸವನ್ನ ನಾವು ಹಣಕ್ಕಾಗಿ ಮಾಡಲ್ಲ. ಯಾಕೆಂದರೆ “ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ” ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 10:7, 8) ನಾವು ಸಿಹಿಸುದ್ದಿಯನ್ನ ಸಾರೋದ್ರಿಂದ ಯೆಹೋವನ ಮಾತನ್ನ ಕೇಳುತ್ತೇವೆ ಮತ್ತು ಆತನನ್ನ ಖುಷಿಪಡಿಸ್ತೇವೆ. ಹಾಗಾಗಿ ನಾವು ಹೇಳೋದನ್ನ ಕೆಲವರು ಕೇಳದಿದ್ರೂ ಜನರಿಗೆ ಸಾರೋದನ್ನ ಮುಂದುವರಿಸುತ್ತೇವೆ.

ಹೆಚ್ಚನ್ನ ತಿಳಿಯೋಣ

ಯೆಹೋವನ ಸಾಕ್ಷಿಗಳು ಭೂಮಿಯ ಎಲ್ಲಾ ಕಡೆ ಸಾರಲು ಮಾಡುತ್ತಿರುವ ಪ್ರಯತ್ನದ ಬಗ್ಗೆ ಕಲಿಯಿರಿ ಮತ್ತು ಈ ಕೆಲಸಕ್ಕೆ ಯೆಹೋವನು ಹೇಗೆ ಸಹಾಯ ಮಾಡ್ತಿದ್ದಾನೆ ಅಂತ ತಿಳಿಯಿರಿ.

4. ಎಲ್ಲರಿಗೂ ಸಿಹಿಸುದ್ದಿ ಸಾರೋದೇ ನಮ್ಮ ಮುಖ್ಯ ಗುರಿ

ಭೂಮಿಯ ಎಲ್ಲಾ ಕಡೆ ಸಿಹಿಸುದ್ದಿಯನ್ನ ಸಾರೋಕೆ ಯೆಹೋವನ ಸಾಕ್ಷಿಗಳು ತುಂಬ ಪ್ರಯತ್ನ ಮಾಡ್ತಾರೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಸಿಹಿಸುದ್ದಿ ಸಾರೋಕೆ ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಯಾವ ಪ್ರಯತ್ನ ನಿಮಗೆ ಇಷ್ಟ ಆಯಿತು?

ಮತ್ತಾಯ 22:39 ಮತ್ತು ರೋಮನ್ನರಿಗೆ 10:13-15 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಾವು ಜನರನ್ನ ತುಂಬ ಪ್ರೀತಿಸ್ತೇವೆ ಅಂತ ನಾವು ಮಾಡುವ ಸೇವೆ ಹೇಗೆ ತೋರಿಸುತ್ತೆ?

  • ಸಿಹಿಸುದ್ದಿ ಸಾರುವವರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?—ವಚನ 15 ನೋಡಿ.

5. ನಾವು ದೇವರ ಜೊತೆ ಕೆಲಸ ಮಾಡುವವರು

ಯೆಹೋವನು ನಮ್ಮ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ಅನೇಕ ಅನುಭವಗಳು ತೋರಿಸುತ್ತೆ. ನ್ಯೂಜ಼ಿಲೆಂಡಿನಲ್ಲಿರುವ ಸಹೋದರ ಪೌಲ್‌ ಉದಾಹರಣೆ ನೋಡಿ. ಒಂದು ಮಧ್ಯಾಹ್ನ ಮನೆಮನೆ ಸೇವೆ ಮಾಡುತ್ತಿರುವಾಗ ಅವರು ಒಬ್ಬ ಸ್ತ್ರೀಯನ್ನ ಭೇಟಿ ಮಾಡಿದರು. ಆ ಸ್ತ್ರೀ, ಅವತ್ತು ಬೆಳಗ್ಗೆಯಷ್ಟೇ ಯೆಹೋವನ ಹೆಸರು ಹೇಳಿ, ‘ನಾನು ನಿನ್ನ ಬಗ್ಗೆ ಕಲಿಯಬೇಕು, ಅದಕ್ಕಾಗಿ ಯಾರನ್ನಾದ್ರೂ ಕಳುಹಿಸು’ ಅಂತ ಪ್ರಾರ್ಥನೆ ಮಾಡಿದ್ದರು. ಇದಾಗಿ “ಮೂರು ತಾಸು ಆದಮೇಲೆ ನಾನು ಅವರ ಮನೆ ಮುಂದೆ ಇದ್ದೆ” ಅಂತ ಸಹೋದರ ಪೌಲ್‌ ಹೇಳಿದರು.

1 ಕೊರಿಂಥ 3:9 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಇಂಥ ಅನುಭವಗಳಿಂದ ಯೆಹೋವನು ನಮ್ಮ ಸಾರುವ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ಹೇಗೆ ಹೇಳಬಹುದು?

ಅಪೊಸ್ತಲರ ಕಾರ್ಯ 1:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಸೇವೆಯನ್ನ ಚೆನ್ನಾಗಿ ಮಾಡೋಕೆ ಯೆಹೋವನ ಸಹಾಯ ನಮಗೆ ಯಾಕೆ ಬೇಕು?

ನಿಮಗೆ ಗೊತ್ತಿತ್ತಾ?

ಪ್ರತಿವಾರ ನಡೆಯುವ ವಾರಮಧ್ಯದ ಮೀಟಿಂಗ್‌ನಲ್ಲಿ ಜನರಿಗೆ ಸಿಹಿಸುದ್ದಿಯನ್ನ ಸಾರೋದು ಹೇಗೆ ಅಂತ ನಾವು ಕಲಿಯುತ್ತೇವೆ. ಒಂದುವೇಳೆ ನೀವು ಅಂಥ ಮೀಟಿಂಗ್‌ಗೆ ಹಾಜರಾಗಿದ್ದರೆ ಅಲ್ಲಿ ಕೊಡುವ ತರಬೇತಿಯ ಬಗ್ಗೆ ನಿಮಗೆ ಹೇಗನಿಸುತ್ತೆ?

6. ಸಾರಬೇಕು ಅಂತ ದೇವರು ಕೊಟ್ಟಿರೋ ಆಜ್ಞೆಯನ್ನ ಪಾಲಿಸ್ತೇವೆ

ಒಂದನೇ ಶತಮಾನದಲ್ಲಿ, ಯೇಸುವಿನ ಶಿಷ್ಯರು ಸಿಹಿಸುದ್ದಿಯನ್ನ ಸಾರದಂತೆ ಕೆಲವು ವಿರೋಧಿಗಳು ತಡೆದರು. ಆದರೆ ಅವರು ‘ಸಿಹಿಸುದ್ದಿ ಸಾರೋಕೆ’ ತಮಗಿದ್ದ ‘ಕಾನೂನುಬದ್ಧ ಹಕ್ಕನ್ನ’ ಪಡೆಯೋಕೆ ಪ್ರಯತ್ನಿಸಿದರು. (ಫಿಲಿಪ್ಪಿ 1:7) ಇವತ್ತು ಯೆಹೋವನ ಸಾಕ್ಷಿಗಳು ಹಾಗೇ ಮಾಡ್ತಾರೆ. a

ಅಪೊಸ್ತಲರ ಕಾರ್ಯ 5:27-42 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

ಕೆಲವರು ಹೀಗೆ ಕೇಳಬಹುದು: “ಯೆಹೋವನ ಸಾಕ್ಷಿಗಳು ಯಾಕೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಾರೆ?”

  • ನೀವೇನು ಉತ್ತರ ಕೊಡ್ತೀರಾ?

ನಾವೇನು ಕಲಿತ್ವಿ

ಎಲ್ಲಾ ಜನರಿಗೆ ಸಿಹಿಸುದ್ದಿಯನ್ನ ಸಾರಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. ಈ ಕೆಲಸ ಮಾಡೋದಕ್ಕೆ ಯೆಹೋವನು ಸಹಾಯ ಮಾಡ್ತಿದ್ದಾನೆ.

ನೆನಪಿದೆಯಾ

  • ಭೂಮಿಯ ಎಲ್ಲಾ ಕಡೆ ಸಿಹಿಸುದ್ದಿಯನ್ನ ಹೇಗೆ ಸಾರಲಾಗುತ್ತಿದೆ?

  • ಜನರನ್ನ ಪ್ರೀತಿಸುತ್ತೇವೆ ಅಂತ ನಾವು ಸೇವೆ ಮಾಡುವ ಮೂಲಕ ಹೇಗೆ ತೋರಿಸಿ ಕೊಡುತ್ತೇವೆ?

  • ಸಿಹಿಸುದ್ದಿ ಸಾರೋದ್ರಿಂದ ನಮಗೆ ಖುಷಿ ಸಿಗುತ್ತಾ? ಹೇಗೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ದೊಡ್ಡ ದೊಡ್ಡ ಪಟ್ಟಣಗಳಲ್ಲಿರುವ ಜನರಿಗೆ ಯೆಹೋವನ ಸಾಕ್ಷಿಗಳು ಹೇಗೆ ಸಾರುತ್ತಿದ್ದಾರೆ ಅಂತ ನೋಡಿ.

ಪ್ಯಾರಿಸ್‌ನ ವಿಶೇಷ ಸಾರ್ವಜನಿಕ ಸೇವೆ (5:11)

ಯೆಹೋವನ ಸಾಕ್ಷಿಗಳು ನಿರಾಶ್ರಿತರಿಗೆ ಹೇಗೆ ಸಾರುತ್ತಿದ್ದಾರೆ?

ನಿರಾಶ್ರಿತರಿಗೆ ಸಿಕ್ಕ ಸಾಂತ್ವನ (5:59)

ಪೂರ್ಣ ಸಮಯದ ಸೇವೆ ಮಾಡಿದ್ದರಿಂದ ಜೀವನ ಹೇಗೆ ಖುಷಿ ಖುಷಿಯಾಗಿದೆ ಅಂತ ಒಬ್ಬ ಸಹೋದರಿಯ ಅನುಭವದಿಂದ ತಿಳಿಯಿರಿ.

ನನ್ನ ಅಚ್ಚುಮೆಚ್ಚಿನ ಕೆಲಸ (6:29)

ಕೆಲವು ಪ್ರಾಮುಖ್ಯ ಕೇಸುಗಳಲ್ಲಿ ನಮಗೆ ಜಯ ಸಿಕ್ಕಿದ್ದರಿಂದ ಸಿಹಿಸುದ್ದಿಯನ್ನ ಇನ್ನೂ ಚೆನ್ನಾಗಿ ಸಾರೋಕೆ ಹೇಗೆ ಆಗುತ್ತಿದೆ ಅಂತ ತಿಳಿಯಿರಿ.

“ಸಿಹಿಸುದ್ದಿಯ ಪ್ರಚಾರಕರು ಕೋರ್ಟಿನ ಮೆಟ್ಟಿಲೇರಿದರು” (jw.org ಲೇಖನ)

a ಸಿಹಿಸುದ್ದಿಯನ್ನ ಸಾರಬೇಕು ಅಂತ ಹೇಳಿರೋದು ಯೆಹೋವ ದೇವರು. ಹಾಗಾಗಿ ಸಿಹಿಸುದ್ದಿಯನ್ನ ಸಾರಲು ಯೆಹೋವನ ಸಾಕ್ಷಿಗಳಿಗೆ ಯಾವ ಮಾನವ ಅಧಿಕಾರಿಗಳ ಅನುಮತಿ ಬೇಕಾಗಿಲ್ಲ.