ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 22

ಸಿಹಿಸುದ್ದಿಯನ್ನ ನೀವು ಬೇರೆಯವರಿಗೆ ಹೇಗೆ ಹೇಳಬಹುದು?

ಸಿಹಿಸುದ್ದಿಯನ್ನ ನೀವು ಬೇರೆಯವರಿಗೆ ಹೇಗೆ ಹೇಳಬಹುದು?

ನೀವು ಬೈಬಲ್‌ನಲ್ಲಿರೋ ಸತ್ಯಗಳನ್ನ ಕಲಿತಂತೆ, ‘ಈ ಸಿಹಿಸುದ್ದಿಯನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು!’ ಅಂತ ನಿಮಗೆ ಅನಿಸುತ್ತೆ. ಪ್ರತಿಯೊಬ್ಬರೂ ಇದನ್ನ ತಿಳಿದುಕೊಳ್ಳೋದು ತುಂಬ ಪ್ರಾಮುಖ್ಯ. ಆದರೆ ನೀವು ಕಲಿತಿದ್ದನ್ನ ಬೇರೆಯವರಿಗೆ ಹೇಳೋಕೆ ನಿಮಗೆ ಮುಜುಗರ ಅನಿಸಬಹುದು. ಭಯಪಡದೆ ಸಿಹಿಸುದ್ದಿಯನ್ನ, ಖುಷಿ ಖುಷಿಯಾಗಿ ಸಾರೋದು ಹೇಗೆ ಅಂತ ಈ ಪಾಠದಲ್ಲಿ ನೋಡೋಣ.

1. ನೀವು ಕಲಿತಿರೋ ವಿಷಯಗಳನ್ನ ಪರಿಚಯ ಇರುವವರಿಗೆ ಹೇಗೆ ಹೇಳಬಹುದು?

“ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ” ಅಂತ ಯೇಸುವಿನ ಶಿಷ್ಯರು ಹೇಳಿದರು. (ಅಪೊಸ್ತಲರ ಕಾರ್ಯ 4:20) ಅವರು ಕಲಿತ ಸತ್ಯವನ್ನ ತುಂಬ ಪ್ರೀತಿಸುತ್ತಿದ್ದರು ಹಾಗಾಗಿ ಇದನ್ನ ಎಲ್ಲರಿಗೂ ಹೇಳೋಕೆ ಇಷ್ಟಪಟ್ಟರು. ನಿಮಗೂ ಹಾಗೆ ಅನಿಸ್ತಿದೆಯಾ? ಹಾಗಾದ್ರೆ ನೀವು ಕಲಿತ ವಿಷಯಗಳನ್ನ ನಿಮ್ಮ ಕುಟುಂಬದವರ ಹತ್ತಿರ, ಫ್ರೆಂಡ್ಸ್‌ ಹತ್ತಿರ ಹೇಳೋಕೆ ಅವಕಾಶಕ್ಕಾಗಿ ಹುಡುಕಿ. ಆದರೆ ಇದನ್ನ ಪ್ರೀತಿಯಿಂದ, ಗೌರವದಿಂದ ಮಾಡಿ.—ಕೊಲೊಸ್ಸೆ 4:6 ಓದಿ.

ಹೀಗೆ ಶುರುಮಾಡಬಹುದು. . .

  • ನಿಮ್ಮ ಸಂಬಂಧಿಕರ ಜೊತೆ ಮಾತಾಡುವಾಗ “ಈ ವಾರ ನಾನೊಂದು ಒಳ್ಳೇ ವಿಷಯ ಕಲಿತೆ” ಅಂತ ಹೇಳಿ ಯಾವುದಾದ್ರೂ ಒಂದು ಬೈಬಲ್‌ ವಿಷಯವನ್ನ ತಿಳಿಸಿ.

  • ಹುಷಾರಿಲ್ಲದ ಅಥವಾ ಚಿಂತೆಯಲ್ಲಿ ಇರುವ ನಿಮ್ಮ ಫ್ರೆಂಡ್‌ಗೆ ಪ್ರೋತ್ಸಾಹ ನೀಡುವ ಒಂದು ವಚನವನ್ನ ತೋರಿಸಿ.

  • ನಿಮ್ಮ ಜೊತೆ ಕೆಲಸ ಮಾಡುವವರ ಹತ್ತಿರ ನೀವು ಮಾತಾಡುವಾಗ, ಕೂಟಗಳಲ್ಲಿ ಕಲಿತ ವಿಷಯಗಳನ್ನ, ಬೈಬಲ್‌ ಸ್ಟಡಿಯಲ್ಲಿ ಕಲಿತ ವಿಷಯಗಳನ್ನ ಹಂಚಿಕೊಳ್ಳಬಹುದು.

  • ನಿಮ್ಮ ಫ್ರೆಂಡ್ಸ್‌ಗೆ jw.org ವೆಬ್‌ಸೈಟ್‌ ತೋರಿಸಿ.

  • ನೀವು ಬೈಬಲ್‌ ಸ್ಟಡಿ ತೆಗೆದುಕೊಳ್ಳುತ್ತಿರುವಾಗ ಬೇರೆಯವರನ್ನೂ ಕರೆಯಿರಿ ಅಥವಾ jw.org ವೆಬ್‌ಸೈಟ್‌ನಲ್ಲಿ ಬೈಬಲ್‌ ಸ್ಟಡಿಗಾಗಿ ಹೇಗೆ ವಿನಂತಿಸಬಹುದು ಅನ್ನೋದನ್ನ ತೋರಿಸಿ.

2. ಸಭೆಯ ಜೊತೆ ನಾವು ಯಾಕೆ ಸಿಹಿಸುದ್ದಿಯನ್ನ ಸಾರಬೇಕು?

ಯೇಸುವಿನ ಶಿಷ್ಯರು ತಮಗೆ ಗೊತ್ತಿರುವ ಜನರಿಗೆ ಮಾತ್ರ ಅಲ್ಲ ಗೊತ್ತಿಲ್ಲದ ಜನರಿಗೂ ಸಿಹಿಸುದ್ದಿಯನ್ನ ಸಾರಿದರು. ಯೇಸು, “ಒಂದೊಂದು ಊರಿಗೆ . . . ತನಗಿಂತ ಮುಂಚೆ ಅವ್ರನ್ನ [ಶಿಷ್ಯರನ್ನ] ಇಬ್ಬಿಬ್ಬರನ್ನಾಗಿ ಕಳಿಸಿದನು.” (ಲೂಕ 10:1) ಈ ರೀತಿ ವ್ಯವಸ್ಥಿತವಾಗಿ ಏರ್ಪಾಡು ಮಾಡಿದ್ರಿಂದ ತುಂಬ ಜನರು ಸಿಹಿಸುದ್ದಿಯನ್ನ ಕೇಳಿಸಿಕೊಂಡರು. ಶಿಷ್ಯರಿಗೂ ಒಟ್ಟಿಗೆ ಕೆಲಸ ಮಾಡಿದ್ರಿಂದ ತುಂಬ ಖುಷಿ ಆಯ್ತು. (ಲೂಕ 10:17) ಅದೇ ತರ ನೀವು ಸಭೆಯಲ್ಲಿರುವ ಸಹೋದರ ಸಹೋದರಿಯರ ಜೊತೆ ಸೇರಿ ಸಿಹಿಸುದ್ದಿಯನ್ನ ಸಾರೋಕೆ ಗುರಿ ಇಡಬಹುದಾ?

ಹೆಚ್ಚನ್ನ ತಿಳಿಯೋಣ

ಧೈರ್ಯದಿಂದ ಸಿಹಿಸುದ್ದಿಯನ್ನ ಸಾರೋದು ಹೇಗೆ ಮತ್ತು ಸಾರೋದ್ರಲ್ಲಿ ಸಂತೋಷವನ್ನ ಕಂಡುಕೊಳ್ಳೋದು ಹೇಗೆ ಅಂತ ನೋಡಿ.

3. ಯೆಹೋವ ದೇವರೇ ನಿಮ್ಮ ಜೊತೆ ಇರುತ್ತಾನೆ

ಸಿಹಿಸುದ್ದಿಯನ್ನ ಸಾರುವಾಗ ಜನರು ತಮ್ಮ ಬಗ್ಗೆ ಏನು ಅಂದುಕೊಳ್ತಾರೋ ಅಂತ ಕೆಲವರಿಗೆ ಅನಿಸಬಹುದು. ಎಲ್ಲಿ ಕೋಪ ಮಾಡಿಕೊಂಡು ಬೈತಾರೋ ಅನ್ನೋ ಭಯನೂ ಇರಬಹುದು.

  • ನೀವು ಕಲಿತಿದ್ದನ್ನ ಬೇರೆಯವರಿಗೆ ಹೇಳೋಕೆ ನಿಮಗೆ ಭಯ ಅನಿಸ್ತಿದೆಯಾ? ಯಾಕೆ?

ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಧೈರ್ಯದಿಂದ ಸಿಹಿಸುದ್ದಿ ಸಾರೋಕೆ ಆ ಯುವಕರಿಗೆ ಯಾವುದು ಸಹಾಯ ಮಾಡಿತು?

ಯೆಶಾಯ 41:10 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಸಿಹಿಸುದ್ದಿ ಸಾರೋಕೆ ಭಯ ಅನಿಸಿದ್ರೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?

ನಿಮಗೆ ಗೊತ್ತಿತ್ತಾ?

ಜನರಿಗೆ ಸಿಹಿಸುದ್ದಿ ಸಾರೋಕೆ ತಮ್ಮಿಂದ ಯಾವತ್ತೂ ಆಗಲ್ಲ ಅಂತ ತುಂಬ ಯೆಹೋವನ ಸಾಕ್ಷಿಗಳಿಗೆ ಅನಿಸಿದೆ. ಸರ್ಗೆ ಅವರ ಉದಾಹರಣೆ ನೋಡಿ. ಅವರಿಗೆ ಕೀಳರಿಮೆ ಇತ್ತು, ಅದಕ್ಕೆ ಜನರ ಜೊತೆ ಮಾತಾಡೋಕೆ ಕಷ್ಟ ಅನಿಸ್ತಿತ್ತು. ಆದ್ರೆ ಬೈಬಲ್‌ ಕಲಿಯೋಕೆ ಶುರುಮಾಡಿದಾಗ ತಾನು ಕಲಿತಿದ್ದನ್ನ ಜನರಿಗೆ ಹೇಳಬೇಕು ಅಂತ ಗೊತ್ತಾಯ್ತು. ಅವರು ಹೀಗೆ ಹೇಳುತ್ತಾರೆ, “ಮೊದಮೊದಲು ನಂಗೆ ಭಯ ಆಗ್ತಿತ್ತು. ಆದ್ರೂ ನಾನು ಕಲಿತಿದ್ದನ್ನ ಬೇರೆಯವರಿಗೆ ಹೇಳ್ತಿದ್ದೆ. ಹೀಗೆ ಮಾತಾಡ್ತಾ ಮಾತಾಡ್ತಾ ನನ್ನ ಧೈರ್ಯ ಹೆಚ್ಚಾಯ್ತು, ನಂಬಿಕೆನೂ ಹೆಚ್ಚಾಯ್ತು.”

4. ಗೌರವದಿಂದ ಮಾತಾಡಿ

ನೀವು ಒಬ್ಬರ ಹತ್ತಿರ ಸಿಹಿಸುದ್ದಿಯ ಬಗ್ಗೆ ಮಾತಾಡೋ ಮುಂಚೆ ಯಾವ ವಿಷಯದ ಬಗ್ಗೆ ಮಾತಾಡಬೇಕು ಅಂತ ಯೋಚಿಸಿ. ಆ ವಿಷಯವನ್ನ ಅವರ ಹತ್ತಿರ ಹೇಗೆ ಗೌರವದಿಂದ ಮಾತಾಡೋದು ಅಂತನೂ ಯೋಚಿಸಿ. 2 ತಿಮೊತಿ 2:24 ಮತ್ತು 1 ಪೇತ್ರ 3:15 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಸಿಹಿಸುದ್ದಿಯನ್ನ ಸಾರುವಾಗ ಜನರ ಜೊತೆ ಹೇಗೆ ನಡೆದುಕೊಳ್ಳಬೇಕು?

  • ನಿಮ್ಮ ಸಂಬಂಧಿಕರು ಮತ್ತು ಫ್ರೆಂಡ್ಸ್‌ ಕೆಲವೊಮ್ಮೆ ನೀವು ಹೇಳೋದನ್ನ ಒಪ್ಪಲ್ಲ. ಆಗ ನೀವೇನು ಮಾಡಬೇಕು? ಏನು ಮಾಡಬಾರದು?

  • “ನೀವು ಇದನ್ನೇ ನಂಬಬೇಕು” ಅನ್ನೋ ತರ ಮಾತಾಡದೆ ಜಾಣ್ಮೆಯಿಂದ ಪ್ರಶ್ನೆ ಕೇಳೋದು ಯಾಕೆ ಒಳ್ಳೇದು?

5. ಸಿಹಿಸುದ್ದಿ ಸಾರೋದ್ರಿಂದ ತುಂಬ ಖುಷಿ ಸಿಗುತ್ತೆ

ಯೆಹೋವ ದೇವರು ಯೇಸುಗೆ ಸಿಹಿಸುದ್ದಿ ಸಾರೋಕೆ ಹೇಳಿದನು. ಯೇಸುಗೆ ಆ ಕೆಲಸ ಎಷ್ಟು ಇಷ್ಟ ಆಗ್ತಿತ್ತು? ಯೋಹಾನ 4:34 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಒಳ್ಳೇ ಆಹಾರ ತಿನ್ನೋದ್ರಿಂದ ನಾವು ಜೀವಂತವಾಗಿ, ಖುಷಿ ಖುಷಿಯಾಗಿ ಇರುತ್ತೇವೆ. ಹಾಗಾದ್ರೆ ಯೇಸು ಯಾಕೆ ಊಟವನ್ನ ಯೆಹೋವನಿಗೆ ಇಷ್ಟವಾಗೋ ಕೆಲಸಕ್ಕೆ ಅಂದರೆ ಸಿಹಿಸುದ್ದಿ ಸಾರೋದಕ್ಕೆ ಹೋಲಿಸಿದನು?

  • ಸಿಹಿಸುದ್ದಿ ಸಾರೋದ್ರಿಂದ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

ಸಲಹೆಗಳು

  • ವಾರಮಧ್ಯದ ಕೂಟದಿಂದ ಸಿಹಿಸುದ್ದಿಯನ್ನ ಹೇಗೆ ಸಾರೋದು ಅಂತ ಕಲಿಯಿರಿ.

  • ವಾರಮಧ್ಯದ ಕೂಟದಲ್ಲಿ ನಡೆಯುವ ವಿದ್ಯಾರ್ಥಿ ನೇಮಕಗಳಲ್ಲಿ ಭಾಗವಹಿಸಲು ಏನು ಮಾಡಬೇಕು ಅಂತ ನಿಮ್ಮ ಬೈಬಲ್‌ ಟೀಚರ್‌ಗೆ ಕೇಳಿ. ನೀವು ಕಲಿತಿದ್ದನ್ನ ಬೇರೆಯವರಿಗೆ ಹೇಳಲು ಆ ನೇಮಕಗಳು ನಿಮಗೆ ಸಹಾಯ ಮಾಡುತ್ತೆ.

  • “ಕೆಲವರು ಹೀಗಂತಾರೆ” ಅಥವಾ “ಕೆಲವರು ಹೀಗೆ ಕೇಳಬಹುದು” ಅನ್ನೋ ಭಾಗದಲ್ಲಿ ಇರೋ ಕೆಲವು ಆಕ್ಷೇಪಣೆಗಳಿಗೆ ಮತ್ತು ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬಹುದು ಅಂತ ಮೊದಲೇ ತಯಾರಿ ಮಾಡಿ.

ಕೆಲವರು ಹೀಗೆ ಕೇಳಬಹುದು: “ಮತ್ತೇನು ಸಮಾಚಾರ?”

  • ಈ ಅವಕಾಶ ಬಳಸಿಕೊಂಡು ನೀವು ಬೈಬಲಿನಿಂದ ಕಲಿತ ಯಾವ ವಿಷಯವನ್ನ ಅವರಿಗೆ ಹೇಳುತ್ತೀರಾ?

ನಾವೇನು ಕಲಿತ್ವಿ

ಸಿಹಿಸುದ್ದಿ ಸಾರೋದ್ರಿಂದ ತುಂಬ ಖುಷಿಯಾಗುತ್ತೆ, ಒಂದು ಸಲ ಮಾತಾಡೋಕೆ ಶುರುಮಾಡಿದ ಮೇಲೆ, ‘ಸಾರೋದು ನಾನು ಅಂದುಕೊಂಡಷ್ಟು ಕಷ್ಟ ಅಲ್ಲ’ ಅಂತ ನಿಮಗನಿಸುತ್ತೆ.

ನೆನಪಿದೆಯಾ

  • ನಾವು ಯಾಕೆ ಸಿಹಿಸುದ್ದಿಯನ್ನ ಸಾರಬೇಕು?

  • ನಾವು ಹೇಗೆ ಗೌರವದಿಂದ ಸಿಹಿಸುದ್ದಿಯನ್ನ ಸಾರಬಹುದು?

  • ನೀವು ಸಿಹಿಸುದ್ದಿಯನ್ನ ಹೇಗೆ ಧೈರ್ಯದಿಂದ ಸಾರಬಹುದು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

jw.org ಕಾಂಟ್ಯಾಕ್ಟ್‌ ಕಾರ್ಡನ್ನ ಬಳಸಿ ಸಿಹಿಸುದ್ದಿಯನ್ನ ಯಾವ ನಾಲ್ಕು ವಿಧಗಳಲ್ಲಿ ಸಾರಬಹುದು ಅಂತ ನೋಡಿ.

JW.ORG ಕಾರ್ಡಿನ ಮಾದರಿ ನಿರೂಪಣೆ (1:43)

ಸಿಹಿಸುದ್ದಿ ಸಾರೋಕೆ ಯಾವ ನಾಲ್ಕು ಗುಣಗಳು ಸಹಾಯ ಮಾಡುತ್ತೆ ಅಂತ ತಿಳಿದುಕೊಳ್ಳಿ.

“ನೀವು ಬೆಸ್ತರಾಗೋಕೆ ತಯಾರಾ?” (ಕಾವಲಿನಬುರುಜು, ಸೆಪ್ಟೆಂಬರ್‌ 2020)

ನೀವು ಚಿಕ್ಕವರಾಗಿದ್ರೆ ಧೈರ್ಯದಿಂದ ಸಿಹಿಸುದ್ದಿಯನ್ನ ಸಾರೋಕೆ ನಿಮಗೆ ಸಹಾಯ ಮಾಡುವ ಒಂದು ಬೈಬಲ್‌ ಉದಾಹರಣೆಯನ್ನ ನೋಡಿ.

ಯೆಹೋವನು ಸಹಾಯ ಮಾಡುತ್ತಾನೆ ಧೈರ್ಯವಾಗಿರು! (11:59)

ಯೆಹೋವನ ಬಗ್ಗೆ ಗೊತ್ತಿಲ್ಲದ ನಿಮ್ಮ ಕುಟುಂಬದವರ ಹತ್ತಿರ ಹೇಗೆ ಬೈಬಲಿನ ಬಗ್ಗೆ ಮಾತಾಡಬಹುದು ಅಂತ ನೋಡಿ.

“ಅವಿಶ್ವಾಸಿ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಿರಿ” (ಕಾವಲಿನಬುರುಜು, ಮಾರ್ಚ್‌ 15, 2014)