ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 46

ಸಮರ್ಪಣೆ ಮತ್ತು ದೀಕ್ಷಾಸ್ನಾನ ಯಾಕಷ್ಟು ಮುಖ್ಯ?

ಸಮರ್ಪಣೆ ಮತ್ತು ದೀಕ್ಷಾಸ್ನಾನ ಯಾಕಷ್ಟು ಮುಖ್ಯ?

ಒಬ್ಬ ವ್ಯಕ್ತಿ ಯೆಹೋವ ದೇವರಿಗೆ ಪ್ರಾರ್ಥನೆಯಲ್ಲಿ ಸಮರ್ಪಣೆ ಮಾಡಿಕೊಳ್ಳುವಾಗ, ‘ನಾನು ಜೀವ ಇರೋ ವರೆಗೂ ನಿನ್ನನ್ನು ಮಾತ್ರ ಆರಾಧಿಸುತ್ತೇನೆ, ಮತ್ತು ನಿನ್ನ ಇಷ್ಟದ ಪ್ರಕಾರ ಜೀವನ ಮಾಡುತ್ತೇನೆ, ಅದಕ್ಕೇ ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ’ ಅಂತ ಮಾತು ಕೊಡುತ್ತಾನೆ. (ಕೀರ್ತನೆ 40:8) ಆಮೇಲೆ ಅವನು ದೀಕ್ಷಾಸ್ನಾನ ಪಡೆದುಕೊಳ್ಳುತ್ತಾನೆ. ಹೀಗೆ ಮಾಡೋ ಮೂಲಕ ಅವನು ದೇವರಿಗೆ ಸಮರ್ಪಣೆ ಮಾಡಿಕೊಂಡಿದ್ದಾನೆ ಅಂತ ಬೇರೆಯವರಿಗೆ ತೋರಿಸಿಕೊಡುತ್ತಾನೆ. ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳೋದು ನಾವು ಜೀವನದಲ್ಲಿ ಮಾಡುವ ಅತೀ ದೊಡ್ಡ ತೀರ್ಮಾನ ಆಗಿರುತ್ತೆ. ಇಷ್ಟು ದೊಡ್ಡ ತೀರ್ಮಾನ ಮಾಡೋಕೆ ನಿಮ್ಮನ್ನ ಯಾವುದು ಪ್ರೇರಿಸುತ್ತೆ?

1. ಸಮರ್ಪಣೆ ಮಾಡಿಕೊಳ್ಳೋಕೆ ಮುಖ್ಯ ಕಾರಣ ಏನಾಗಿರಬೇಕು?

ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಳ್ಳೋಕೆ ಪ್ರೀತಿಯೇ ಕಾರಣವಾಗಿರಬೇಕು. (1 ಯೋಹಾನ 4:10, 19) “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು” ಅಂತ ಬೈಬಲ್‌ ಹೇಳುತ್ತೆ. (ಮಾರ್ಕ 12:30) ಯೆಹೋವ ದೇವರ ಮೇಲಿನ ನಮ್ಮ ಪ್ರೀತಿಯನ್ನ ಬರಿ ಮಾತಿನಲ್ಲಿ ಅಲ್ಲ ಕ್ರಿಯೆಯಲ್ಲೂ ತೋರಿಸಬೇಕು. ಉದಾಹರಣೆಗೆ ತುಂಬ ಪ್ರೀತಿಸುವ ಗಂಡು ಹೆಣ್ಣು ಒಬ್ಬರಿಗೊಬ್ಬರು ಮಾತು ಕೊಟ್ಟಿರುತ್ತಾರೆ, ಆಮೇಲೆ ಕೊಟ್ಟ ಮಾತಿನಂತೆ ಮದುವೆ ಆಗುತ್ತಾರೆ. ಹಾಗೇನೇ ಯೆಹೋವ ದೇವರ ಮೇಲೆ ನಮಗೆ ನಿಜವಾದ ಪ್ರೀತಿಯಿದ್ದರೆ ನಾವು ಸಮರ್ಪಣೆ ಮಾಡಿಕೊಳ್ಳುತ್ತೇವೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುತ್ತೇವೆ.

2. ದೀಕ್ಷಾಸ್ನಾನ ಪಡೆದುಕೊಂಡಿರುವ ತನ್ನ ಸೇವಕರಿಗೆ ಯೆಹೋವನು ಯಾವೆಲ್ಲಾ ಆಶೀರ್ವಾದಗಳನ್ನ ಕೊಡುತ್ತಾನೆ?

ನೀವು ದೀಕ್ಷಾಸ್ನಾನ ಪಡೆದುಕೊಂಡಾಗ ಯೆಹೋವ ದೇವರ ಕುಟುಂಬದಲ್ಲಿ ಒಬ್ಬರಾಗುತ್ತೀರ. ದೀಕ್ಷಾಸ್ನಾನ ಆದಮೇಲೆ ಯೆಹೋವ ದೇವರು ನಿಮ್ಮನ್ನ ಹೇಗೆಲ್ಲಾ ಪ್ರೀತಿಸ್ತಾನೆ ಅಂತ ತಿಳಿದುಕೊಳ್ಳುತ್ತೀರ ಮತ್ತು ಆತನಿಗೆ ಮುಂಚೆಗಿಂತ ಇನ್ನಷ್ಟು ಹೆಚ್ಚು ಆಪ್ತರಾಗುತ್ತೀರ. (ಮಲಾಕಿ 3:16-18 ಓದಿ.) ಯೆಹೋವ ದೇವರು ನಿಮಗೆ ತಂದೆಯಾಗಿರುತ್ತಾನೆ. ಅಷ್ಟೇ ಅಲ್ಲ, ಆತನನ್ನ ಮತ್ತು ನಿಮ್ಮನ್ನ ಪ್ರೀತಿಸುವ ಸಹೋದರ ಸಹೋದರಿಯರ ಒಂದು ಲೋಕವ್ಯಾಪಕ ಕುಟುಂಬ ನಿಮಗೆ ಸಿಗುತ್ತೆ. (ಮಾರ್ಕ 10:29, 30 ಓದಿ.) ಆದ್ರೆ ದೀಕ್ಷಾಸ್ನಾನವನ್ನ ಪಡೆದುಕೊಳ್ಳಲು ನೀವು ಕೆಲವು ವಿಷಯಗಳನ್ನ ಮಾಡಲೇಬೇಕು. ನೀವು ಯೆಹೋವ ದೇವರ ಬಗ್ಗೆ ಕಲಿಯಬೇಕು, ಆತನನ್ನ ಪ್ರೀತಿಸಬೇಕು, ಆತನ ಮೇಲೆ ಮತ್ತು ಆತನ ಮಗನ ಮೇಲೆ ನಂಬಿಕೆ ಇಡಬೇಕು. ಆಮೇಲೆ ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಳ್ಳಬೇಕು. ನೀವು ಇದನ್ನೆಲ್ಲಾ ಮಾಡಿ ದೀಕ್ಷಾಸ್ನಾನ ಪಡಕೊಂಡರೆ ಎಂದೆಂದೂ ಖುಷಿಯಾಗಿ ಜೀವಿಸಲು ಸಾಧ್ಯವಾಗುತ್ತೆ. ಅದಕ್ಕೆ “ದೀಕ್ಷಾಸ್ನಾನ . . . ಈಗ್ಲೂ ನಿಮ್ಮನ್ನ ಕಾಪಾಡ್ತಿದೆ” ಅಂತ ಬೈಬಲ್‌ ಹೇಳುತ್ತೆ.—1 ಪೇತ್ರ 3:21.

ಹೆಚ್ಚನ್ನ ತಿಳಿಯೋಣ

ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಳ್ಳೋದು ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳೋದು ಯಾಕೆ ಪ್ರಾಮುಖ್ಯ ಅಂತ ಕಲಿಯಿರಿ.

3. ನಾವು ಯಾರನ್ನ ಆರಾಧಿಸಬೇಕು ಅನ್ನೋ ತೀರ್ಮಾನ ತೆಗೆದುಕೊಳ್ಳಲೇಬೇಕು

ಹಿಂದಿನ ಕಾಲದಲ್ಲಿದ್ದ ದೇವಜನರಲ್ಲಿ ಕೆಲವರು ಸುಳ್ಳು ದೇವರಾದ ಬಾಳನನ್ನೂ ಯೆಹೋವ ದೇವರನ್ನೂ ಒಟ್ಟಿಗೆ ಆರಾಧಿಸಬಹುದು ಅಂತ ಅಂದುಕೊಂಡಿದ್ರು. ಆದರೆ ಈ ತಪ್ಪಾದ ಯೋಚನೆಯನ್ನ ಸರಿಪಡಿಸಲು ಯೆಹೋವ ದೇವರು ಎಲೀಯನನ್ನ ಕಳಿಸಿದನು. 1 ಅರಸು 18:21 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಇಸ್ರಾಯೇಲ್ಯರು ಯಾವ ತೀರ್ಮಾನವನ್ನ ತೆಗೆದುಕೊಳ್ಳಬೇಕಿತ್ತು?

ಇಸ್ರಾಯೇಲ್ಯರಂತೆ ನಾವು ಸಹ ಯಾರನ್ನ ಆರಾಧಿಸಬೇಕು ಅಂತ ತೀರ್ಮಾನ ತೆಗೆದುಕೊಳ್ಳಲೇಬೇಕು. ಲೂಕ 16:13 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಾವು ಯೆಹೋವ ದೇವರನ್ನ ಆರಾಧಿಸೋದ್ರ ಜೊತೆಗೆ ಒಬ್ಬ ವ್ಯಕ್ತಿಯನ್ನೋ ಅಥವಾ ಇನ್ಯಾವುದನ್ನೋ ಯಾಕೆ ಆರಾಧಿಸಕ್ಕಾಗಲ್ಲ?

  • ನಾವು ಯೆಹೋವನನ್ನು ಆರಾಧಿಸ್ತೇವೆ ಅಂತ ಹೇಗೆ ತೋರಿಸಿಕೊಡಬಹುದು?

4. ಯೆಹೋವ ದೇವರು ನಿಮಗೆ ಏನೆಲ್ಲಾ ಕೊಟ್ಟಿದ್ದಾನೆ ಅನ್ನೋದರ ಬಗ್ಗೆ ಯೋಚಿಸಿ

ಯೆಹೋವ ದೇವರು ನಮಗೆ ತುಂಬ ಅಮೂಲ್ಯವಾದ ಉಡುಗೊರೆಗಳನ್ನ ಕೊಟ್ಟಿದ್ದಾನೆ. ನೀವು ಆತನಿಗೆ ಏನು ಕೊಡ್ತೀರಾ? ವಿಡಿಯೋ ನೋಡಿ.

ಯೆಹೋವನು ನಿಮಗೆ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ? ಕೀರ್ತನೆ 104:14, 15 ಮತ್ತು 1 ಯೋಹಾನ 4:9, 10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವ ದೇವರು ಕೊಟ್ಟಿರುವ ಯಾವೆಲ್ಲಾ ಉಡುಗೊರೆಗಳಿಗಾಗಿ ನೀವು ತುಂಬ ಕೃತಜ್ಞತೆ ತೋರಿಸಲು ಇಷ್ಟಪಡ್ತೀರಾ?

  • ಆ ಉಡುಗೊರೆಗಳನ್ನ ಕೊಟ್ಟಿರೋದಕ್ಕೆ ಆತನ ಬಗ್ಗೆ ನಿಮಗೆ ಹೇಗನಿಸುತ್ತೆ?

ನಿಮಗೆ ತುಂಬ ಇಷ್ಟವಿರೋ ವಸ್ತುವನ್ನ ಯಾರಾದ್ರೂ ಉಡುಗೊರೆಯಾಗಿ ಕೊಟ್ಟರೆ ನೀವು ಅದಕ್ಕೆ ಖಂಡಿತ ಕೃತಜ್ಞತೆ ತೋರಿಸುತ್ತೀರ ಅಲ್ವಾ? ಧರ್ಮೋಪದೇಶಕಾಂಡ 16:17 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಇಲ್ಲಿಯವರೆಗೆ ಯೆಹೋವ ದೇವರು ನಿಮಗೆ ಕೊಟ್ಟಿರುವ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ ನೀವು ಆತನಿಗೆ ಏನು ಕೊಡೋಕೆ ಬಯಸ್ತೀರಾ?

5. ಸಮರ್ಪಣೆ ತರುತ್ತೆ ಆಶೀರ್ವಾದಗಳ ಸುರಿಮಳೆ

ಕೈ ತುಂಬ ಹಣ, ಒಳ್ಳೇ ಹೆಸರು, ಒಳ್ಳೇ ಕೆಲಸ ಇದ್ದರೆ ಸಂತೋಷವಾಗಿ ಇರಬಹುದು ಅಂತ ತುಂಬ ಜನ ಅಂದುಕೊಳ್ಳುತ್ತಾರೆ. ಆದರೆ ಅದು ನಿಜಾನಾ? ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.

  • ವಿಡಿಯೋದಲ್ಲಿದ್ದ ವ್ಯಕ್ತಿಗೆ ಫುಟ್‌ಬಾಲ್‌ ಅಂದರೆ ಜೀವ ಆಗಿತ್ತು, ಮತ್ತೆ ಯಾಕೆ ಅವನು ಅದನ್ನ ಬಿಟ್ಟುಬಿಟ್ಟ?

  • ಅವನು ಫುಟ್‌ಬಾಲಿಗಲ್ಲ ಯೆಹೋವನಿಗೆ ತನ್ನ ಜೀವನವನ್ನ ಮುಡಿಪಾಗಿಟ್ಟ. ಈ ನಿರ್ಧಾರ ಸರಿಯಾಗಿತ್ತಾ? ಯಾಕೆ?

ಕ್ರೈಸ್ತನಾಗೋಕೆ ಮುಂಚೆ ಅಪೊಸ್ತಲ ಪೌಲ ಸಮಾಜದಲ್ಲಿ ದೊಡ್ಡ ಸ್ಥಾನ ಗಳಿಸಬೇಕು ಅಂತ ಪ್ರಯತ್ನಿಸುತ್ತಿದ್ದ. ಅವನು ತುಂಬ ಹೆಸರುವಾಸಿಯಾದ ಒಬ್ಬ ಗುರುವಿನ ಶಿಷ್ಯನಾಗಿದ್ದ. ಆದರೆ ಒಬ್ಬ ಕ್ರೈಸ್ತನಾಗೋಕೆ ಅವನು ಅದನ್ನೆಲ್ಲಾ ಬಿಟ್ಟುಬಿಟ್ಟ. ಆಮೇಲೆ ‘ನಾನು ಯಾಕೆ ಹೀಗೆ ಮಾಡಿಬಿಟ್ಟೆ’ ಅಂತ ಅವನು ಯಾವತ್ತಾದರೂ ಕೊರಗಿದನಾ? ಫಿಲಿಪ್ಪಿ 3:8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಕ್ರೈಸ್ತನಾಗೋಕೆ ಮುಂಚೆ ಅಪೊಸ್ತಲ ಪೌಲ ಪಡೆದುಕೊಂಡಿದ್ದ ಎಲ್ಲವನ್ನ “ಕಸ” ಅಂತ ಯಾಕೆ ಹೇಳಿದ?

  • ಕ್ರೈಸ್ತನಾದ ಮೇಲೆ ಅವನಿಗೆ ಏನು ಸಿಕ್ತು?

  • ಯೆಹೋವ ದೇವರ ಸೇವೆಗಿಂತ ಹೆಚ್ಚು ಖುಷಿ ಕೊಡುವ ಯಾವುದನ್ನಾದರೂ ಈ ಲೋಕ ಕೊಡಕ್ಕಾಗುತ್ತಾ?

ಪೌಲ ಏನು ಕಳೆದುಕೊಂಡನೋ ಅದಕ್ಕಿಂತ ಜಾಸ್ತಿ ಪಡೆದುಕೊಂಡ

ಕೆಲವರು ಹೀಗಂತಾರೆ: “ಇದೇ ಸತ್ಯ ಅಂತ ನನಗೆ ಗೊತ್ತು, ಆದ್ರೆ ನನ್ನ ಜೀವನವನ್ನ ದೇವರಿಗೆ ಸಮರ್ಪಣೆ ಮಾಡಿಕೊಳ್ಳೋಕೆ ಆಗಲ್ಲ.”

  • ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳೋದು ಒಳ್ಳೇದು ಅಂತ ನಿಮಗೆ ಯಾಕೆ ಅನಿಸುತ್ತೆ?

ನಾವೇನು ಕಲಿತ್ವಿ

ನಾವು ಯೆಹೋವ ದೇವರನ್ನ ಪ್ರೀತಿಸೋದಾದ್ರೆ ಸಮರ್ಪಣೆ ಮಾಡಿಕೊಳ್ಳುತ್ತೇವೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುತ್ತೇವೆ.

ನೆನಪಿದೆಯಾ

  • ಯೆಹೋವನು ಮಾತ್ರ ನಮ್ಮ ಪ್ರೀತಿಗೆ ಮತ್ತು ಆರಾಧನೆಗೆ ಅರ್ಹನು ಯಾಕೆ?

  • ದೀಕ್ಷಾಸ್ನಾನ ಪಡೆದುಕೊಂಡ ತನ್ನ ಸಾಕ್ಷಿಗಳಿಗೆ ಯೆಹೋವ ದೇವರು ಯಾವೆಲ್ಲಾ ಆಶೀರ್ವಾದಗಳನ್ನ ಕೊಡುತ್ತಾನೆ?

  • ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳೋಕೆ ನೀವು ಇಷ್ಟಪಡ್ತೀರಾ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೆಹೋವ ದೇವರಿಗೆ ಸಮರ್ಪಣೆ ಮಾಡೋಕೆ ಒಬ್ಬ ಗಾಯಕಿಗೆ ಮತ್ತು ಒಬ್ಬ ಆಟಗಾರನಿಗೆ ಯಾವುದು ಸಹಾಯ ಮಾಡಿತು ಅಂತ ನೋಡಿ.

ಯುವಜನರ ಪ್ರಶ್ನೆನಾನು ನನ್ನ ಜೀವನದಲ್ಲಿ ಏನು ಮಾಡಲಿ?ನಡೆದು ಬಂದ ದಾರಿ  (6:54)

ಸಮರ್ಪಣೆ ಮಾಡಿಕೊಳ್ಳೋಕೆ ಇನ್ನೂ ಯಾವೆಲ್ಲಾ ಕಾರಣಗಳಿವೆ ಅಂತ ನೋಡಿ.

“ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?” (ಕಾವಲಿನಬುರುಜು, ಜನವರಿ 15, 2010)

ತಮ್ಮನ್ನ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡವರು ಜೀವನದಲ್ಲಿ ಹೇಗೆ ಖುಷಿಯಾಗಿದ್ದಾರೆ ಅಂತ ನೋಡಿ.

ನೀಡ್ತೀನಿ ಪ್ರಾಣನೇ ಇದು ನನ್ನಾಣೆ (4:30)

ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಅಂತ ತಿಳಿದುಕೊಳ್ಳೋಕೆ ಒಬ್ಬ ಸ್ತ್ರೀಗೆ ಯಾವುದು ಸಹಾಯ ಮಾಡಿತು? “ಜೀವನ ಅಂದರೆ ಇಷ್ಟೇನಾ? ಅಂತ ತುಂಬಾ ವರ್ಷಗಳಿಂದ ಯೋಚಿಸುತ್ತಿದ್ದೆ” ಅನ್ನೋ ಲೇಖನ ನೋಡಿ.

“ಬದುಕು ಬದಲಾದ ವಿಧ” (ಕಾವಲಿನಬುರುಜು ಲೇಖನ)