ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 48

ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ

ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ

ಒಳ್ಳೇ ಸ್ನೇಹಿತರು ಕಷ್ಟದಲ್ಲೂ ಸುಖದಲ್ಲೂ ನಮ್ಮ ಜೊತೆ ಇರುತ್ತಾರೆ. ಆದರೆ ಎಲ್ಲರೂ ಒಳ್ಳೇ ಸ್ನೇಹಿತರಾಗಿರಲ್ಲ ಅಂತ ಬೈಬಲ್‌ ಹೇಳುತ್ತೆ. ಹಾಗಾದ್ರೆ ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋದು ಹೇಗೆ? ಅದರ ಬಗ್ಗೆ ನಾವೀಗ ನೋಡೋಣ.

1. ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋದು ಯಾಕೆ ಪ್ರಾಮುಖ್ಯ?

ನಾವು ಒಳ್ಳೆಯವರ ಜೊತೆ ಸಹವಾಸ ಮಾಡಿದ್ರೆ ಒಳ್ಳೆಯವರಾಗುತ್ತೇವೆ. ಕೆಟ್ಟವರ ಜೊತೆ ಸಹವಾಸ ಮಾಡಿದ್ರೆ ಕೆಟ್ಟವರಾಗುತ್ತೇವೆ. ಒಬ್ಬರ ಜೊತೆ ನೇರವಾಗಿ ಸಹವಾಸ ಮಾಡಿದ್ರೂ ಅಥವಾ ಇಂಟರ್‌ನೆಟ್‌ ಮೂಲಕ ಸಹವಾಸ ಮಾಡಿದ್ರೂ ಈ ಮಾತು ನಿಜ. ಅದಕ್ಕೇ ಬೈಬಲ್‌, “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ” ಅಂತ ಹೇಳುತ್ತೆ. (ಜ್ಞಾನೋಕ್ತಿ 13:20) ಯೆಹೋವನನ್ನು ಪ್ರೀತಿಸುವ ಮತ್ತು ಆರಾಧಿಸುವ ಸ್ನೇಹಿತರು, ನಾವು ದೇವರಿಗೆ ಆಪ್ತರಾಗೋಕೆ ಮತ್ತು ಒಳ್ಳೇ ನಿರ್ಣಯಗಳನ್ನ ಮಾಡೋಕೆ ಸಹಾಯ ಮಾಡ್ತಾರೆ. ಆದರೆ ಯೆಹೋವನನ್ನು ಪ್ರೀತಿಸದ ವ್ಯಕ್ತಿಗಳನ್ನ ಆಪ್ತ ಸ್ನೇಹಿತರನ್ನಾಗಿ ಮಾಡಿಕೊಂಡರೆ ನಾವು ಯೆಹೋವನಿಂದ ದೂರ ಹೋಗಿಬಿಡಬಹುದು. ಹಾಗಾಗಿ ನಮ್ಮ ಸ್ನೇಹಿತರನ್ನ ಜಾಣ್ಮೆಯಿಂದ ಆಯ್ಕೆಮಾಡಬೇಕು ಅಂತ ಬೈಬಲ್‌ ಹೇಳುತ್ತೆ. ಯಾಕಂದ್ರೆ ನಾವು ದೇವರನ್ನ ಪ್ರೀತಿಸುವ ವ್ಯಕ್ತಿಗಳನ್ನ ಸ್ನೇಹಿತರಾಗಿ ಮಾಡಿಕೊಂಡರೆ ನಮಗೂ ಅವರಿಗೂ ಪ್ರಯೋಜನ ಆಗುತ್ತೆ. ನಾವು, “ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ” ಇರೋಕೆ ಅದು ನಮಗೆ ಸಹಾಯ ಮಾಡುತ್ತೆ.—1 ಥೆಸಲೊನೀಕ 5:11.

2. ನಮ್ಮ ಸ್ನೇಹಿತರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?

ಯೆಹೋವ ದೇವರು ತನ್ನ ಸ್ನೇಹಿತರನ್ನ ತುಂಬ ಜಾಗ್ರತೆಯಿಂದ ಆರಿಸಿಕೊಳ್ಳುತ್ತಾನೆ. “ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 3:32) ಯೆಹೋವ ದೇವರನ್ನ ಪ್ರೀತಿಸದ ಜನರನ್ನ ಸ್ನೇಹಿತರನ್ನಾಗಿ ಮಾಡಿಕೊಂಡರೆ ಆತನಿಗೆ ತುಂಬ ಬೇಜಾರಾಗುತ್ತೆ! (ಯಾಕೋಬ 4:4 ಓದಿ.) ಆದರೆ ನಾವು ಕೆಟ್ಟವರ ಸಹವಾಸ ಮಾಡದೆ, ಯೆಹೋವ ದೇವರನ್ನ ಪ್ರೀತಿಸುವವರನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡರೆ ಆತನಿಗೆ ಖುಷಿಯಾಗುತ್ತೆ. ಅಷ್ಟೇ ಅಲ್ಲ ಆತನು ನಮ್ಮನ್ನೂ ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾನೆ.—ಕೀರ್ತನೆ 15:1-4.

ಹೆಚ್ಚನ್ನ ತಿಳಿಯೋಣ

ನಾವು ಯಾರನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ ಅನ್ನೋದು ಯಾಕೆ ಮುಖ್ಯ ಅಂತ ತಿಳಿಯಿರಿ. ನಾವು ಒಳ್ಳೇ ಸ್ನೇಹಿತರನ್ನ ಹೇಗೆ ಮಾಡಿಕೊಳ್ಳಬಹುದು ಅಂತ ನೋಡಿ.

3. ಕೆಟ್ಟ ಸಹವಾಸದ ಬಗ್ಗೆ ಎಚ್ಚರವಾಗಿರಿ

ದೇವರನ್ನ ಮತ್ತು ಆತನ ನೀತಿನಿಯಮಗಳನ್ನ ಪ್ರೀತಿಸದೆ ಇರುವವರ ಸಹವಾಸನೇ ಕೆಟ್ಟ ಸಹವಾಸ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ನಮಗೆ ಗೊತ್ತಿಲ್ಲದೆ ನಾವು ಹೇಗೆ ಕೆಟ್ಟ ಸಹವಾಸ ಮಾಡುವ ಸಾಧ್ಯತೆ ಇದೆ?

1 ಕೊರಿಂಥ 15:33 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಎಂಥ ವ್ಯಕ್ತಿಗಳನ್ನ ಸ್ನೇಹಿತರನ್ನಾಗಿ ಮಾಡಿಕೊಂಡರೆ ಕೆಟ್ಟ ಸಹವಾಸ ಆಗಬಹುದು? ಯಾಕೆ ಹಾಗೆ ಅನಿಸುತ್ತೆ?

ಕೀರ್ತನೆ 119:63 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಒಬ್ಬ ವ್ಯಕ್ತಿ ಒಳ್ಳೇ ಸ್ನೇಹಿತನಾ ಅಲ್ವಾ ಅಂತ ಹೇಗೆ ಕಂಡುಹಿಡಿಯಬಹುದು?

ಹುಳುಕಾಗಿರುವ ಒಂದು ಸೇಬು ಹಣ್ಣು ಉಳಿದ ಎಲ್ಲಾ ಹಣ್ಣುಗಳನ್ನ ಹಾಳುಮಾಡುತ್ತೆ. ಅದೇ ತರ ಕೆಟ್ಟ ಸಹವಾಸ ಮಾಡೋದ್ರಿಂದ ನಿಮಗೇನಾಗುತ್ತೆ?

4. ನಿಮ್ಮ ಹಾಗೆ ಇಲ್ಲದೇ ಇರೋರು ಕೂಡ ಒಳ್ಳೇ ಸ್ನೇಹಿತರಾಗಲು ಸಾಧ್ಯ

ಬೈಬಲಿನಲ್ಲಿ ದಾವೀದ ಮತ್ತು ಯೋನಾತಾನರ ಬಗ್ಗೆ ಇದೆ. ಇವರಿಬ್ಬರ ವಯಸ್ಸು ಮತ್ತು ಹಿನ್ನೆಲೆ ಬೇರೆ ಬೇರೆಯಾಗಿತ್ತು. ಹಾಗಿದ್ರೂ ಅವರಿಬ್ಬರೂ ಆಪ್ತ ಸ್ನೇಹಿತರಾಗಿದ್ದರು. 1 ಸಮುವೇಲ 18:1 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಯಾಕೆ ನಮ್ಮ ವಯಸ್ಸು, ಹಿನ್ನೆಲೆ ಮತ್ತು ಅಂತಸ್ತಿನವರನ್ನ ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು?

ರೋಮನ್ನರಿಗೆ 1:11, 12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವನನ್ನು ಪ್ರೀತಿಸುವ ಸ್ನೇಹಿತರು ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾರೆ?

ಒಬ್ಬ ಸಹೋದರನಿಗೆ ಹೇಗೆ ಒಳ್ಳೇ ಸ್ನೇಹಿತರು ಸಿಕ್ಕಿದರು ಅಂತ ತಿಳಿಯಲು ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

  • ಶಾಲೆಯಲ್ಲಿ ಅಖಿಲ್‌ ಮಾಡುತ್ತಿದ್ದ ಸಹವಾಸದ ಬಗ್ಗೆ ಅವನ ಹೆತ್ತವರಿಗೆ ಯಾಕೆ ಚಿಂತೆಯಾಗುತ್ತಿತ್ತು?

  • ಮೊದಮೊದಲು ಅಖಿಲ್‌ಗೆ ಅವರು ಒಳ್ಳೇ ಸ್ನೇಹಿತರು ಅಂತ ಯಾಕೆ ಅನಿಸಿತು?

  • ಒಂಟಿತನದಿಂದ ಹೊರಬರೋಕೆ ಅಖಿಲ್‌ಗೆ ಯಾವುದು ಸಹಾಯ ಮಾಡಿತು?

5. ನಿಜವಾದ ಸ್ನೇಹಿತರನ್ನ ಮಾಡಿಕೊಳ್ಳಿ

ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋದು ಹೇಗೆ ಮತ್ತು ನಾವು ಒಳ್ಳೇ ಸ್ನೇಹಿತರಾಗಿ ಇರೋದು ಹೇಗೆ ಅಂತ ತಿಳಿಯಲು ವಿಡಿಯೋ ನೋಡಿ.

ಜ್ಞಾನೋಕ್ತಿ 18:24 ಮತ್ತು 27:17 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಒಳ್ಳೇ ಸ್ನೇಹಿತರು ಹೇಗೆ ಒಬ್ಬರಿಗೊಬ್ಬರು ಸಹಾಯ ಮಾಡ್ತಾರೆ?

  • ನಿಮಗೆ ಒಳ್ಳೇ ಸ್ನೇಹಿತರಿದ್ದಾರಾ, ಇಲ್ಲ ಅಂದರೆ ಹೇಗೆ ಮಾಡಿಕೊಳ್ಳಬಹುದು?

ಫಿಲಿಪ್ಪಿ 2:4 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಿಮಗೆ ಒಳ್ಳೇ ಸ್ನೇಹಿತರು ಇರಬೇಕಾದ್ರೆ ಮೊದಲು ನೀವು ಒಳ್ಳೇ ಸ್ನೇಹಿತರು ಆಗಿರಬೇಕು. ನೀವು ಹೇಗೆ ಒಳ್ಳೇ ಸ್ನೇಹಿತರಾಗಿರಬಹುದು?

ನಿಮಗೆ ಒಳ್ಳೇ ಸ್ನೇಹಿತರು ಇರಬೇಕಾದ್ರೆ ಮೊದಲು ನೀವು ಒಳ್ಳೇ ಸ್ನೇಹಿತರು ಆಗಿರಬೇಕು

ಕೆಲವರು ಹೀಗಂತಾರೆ: “ನನ್ನ ಸ್ನೇಹಿತರು ಏನೇ ನಂಬಲಿ, ಏನೇ ಮಾಡಲಿ ನನ್ನ ಜೊತೆ ಚೆನ್ನಾಗಿದ್ರೆ ಸಾಕು.”

  • ನೀವೇನು ಹೇಳುತ್ತೀರಾ?

ನಾವೇನು ಕಲಿತ್ವಿ

ನಾವು ಒಳ್ಳೇ ಸ್ನೇಹಿತರನ್ನ ಆಯ್ಕೆ ಮಾಡಿದ್ರೆ ಯೆಹೋವ ದೇವರಿಗೆ ಖುಷಿಯಾಗುತ್ತೆ ಮತ್ತು ನಮಗೂ ಪ್ರಯೋಜನ ಆಗುತ್ತೆ.

ನೆನಪಿದೆಯಾ

  • ನಾವು ಒಳ್ಳೇ ಸ್ನೇಹಿತರನ್ನ ಆಯ್ಕೆ ಮಾಡಿಕೊಳ್ಳಬೇಕು ಅಂತ ಯೆಹೋವ ದೇವರು ಯಾಕೆ ಬಯಸುತ್ತಾನೆ?

  • ನಾವು ಎಂಥ ಸಹವಾಸದಿಂದ ದೂರ ಇರಬೇಕು?

  • ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋದು ಹೇಗೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಕಷ್ಟದ ಸಮಯದಲ್ಲಿ ನಿಜ ಸ್ನೇಹಿತರು ಹೇಗೆಲ್ಲಾ ಸಹಾಯ ಮಾಡ್ತಾರೆ ಅಂತ ನೋಡಿ.

“ಅಂತ್ಯ ಬರುವುದಕ್ಕೂ ಮುಂಚೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ” (ಕಾವಲಿನಬುರುಜು, ನವೆಂಬರ್‌ 2019)

ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋಕೆ ನಾವು ಏನೆಲ್ಲಾ ಮಾಡಬೇಕು ಅಂತ ನೋಡಿ.

“ನಾನು ಒಳ್ಳೇ ಸ್ನೇಹಿತರನ್ನ ಹೇಗೆ ಮಾಡಿಕೊಳ್ಳಲಿ?” (jw.org ಲೇಖನ)

ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ಗೆಳೆತನವನ್ನ ಮಾಡಿಕೊಳ್ಳುವಾಗ ಏನೆಲ್ಲಾ ನೆನಪಿನಲ್ಲಿಡಬೇಕು?

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ (4:12)

ಒಬ್ಬ ವ್ಯಕ್ತಿಗೆ ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋಕೆ ಯಾವುದು ಸಹಾಯ ಮಾಡಿತು ಅಂತ ತಿಳಿಯಲು “ತಂದೆಗಾಗಿ ನನ್ನ ಮನ ತುಡಿಯುತ್ತಿತ್ತು” ಅನ್ನೋ ಜೀವನ ಕಥೆ ನೋಡಿ.

“ಬದುಕನ್ನೇ ಬದಲಾಯಿಸಿತು ಬೈಬಲ್‌” (ಕಾವಲಿನಬುರುಜು, ಜುಲೈ 1, 2012)