ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 51

ನಿಮ್ಮ ಮಾತು ಯೆಹೋವನಿಗೆ ಸಂತೋಷ ತರಲಿ

ನಿಮ್ಮ ಮಾತು ಯೆಹೋವನಿಗೆ ಸಂತೋಷ ತರಲಿ

ಯೆಹೋವನು ನಮ್ಮನ್ನ ಸೃಷ್ಟಿ ಮಾಡಿದಾಗ ಒಂದು ವಿಶೇಷ ಉಡುಗೊರೆಯನ್ನ ಕೊಟ್ಟನು. ಅದೇ ಮಾತಾಡುವ ಸಾಮರ್ಥ್ಯ. ಅದನ್ನ ನಾವು ಹೇಗೆ ಬಳಸುತ್ತೇವೆ ಅಂತ ಆತನು ಗಮನಿಸುತ್ತಾನಾ? ಖಂಡಿತ. (ಯಾಕೋಬ 1:26 ಓದಿ.) ಹಾಗಾದ್ರೆ ಯೆಹೋವ ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಆ ಉಡುಗೊರೆಯನ್ನ ಹೇಗೆ ಉಪಯೋಗಿಸಬಹುದು?

1. ಮಾತಾಡುವ ಸಾಮರ್ಥ್ಯವನ್ನ ನಾವು ಹೇಗೆ ಒಳ್ಳೇ ರೀತಿಯಲ್ಲಿ ಬಳಸಬಹುದು?

“ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ ಇರಿ” ಅಂತ ಬೈಬಲ್‌ ಹೇಳುತ್ತೆ. (1 ಥೆಸಲೊನೀಕ 5:11) ನಿಮಗೆ ಗೊತ್ತಿರುವ ಯಾರಾದ್ರೂ ಬೇಜಾರಲ್ಲಿ ಇದ್ದಾರಾ? ಅವರು ಅದರಿಂದ ಹೊರಬರೋಕೆ ನೀವು ಹೇಗೆ ಸಹಾಯ ಮಾಡಬಹುದು? ಅವರನ್ನ ಸಂತೈಸಲು, ಅವರಲ್ಲಿ ನಿಮಗೆ ಇಷ್ಟವಾಗುವ ಯಾವುದಾದ್ರೂ ಒಳ್ಳೇ ವಿಷಯದ ಬಗ್ಗೆ ಮಾತಾಡಿ. ಅಷ್ಟೇ ಅಲ್ಲ, ಅವರನ್ನ ಬಲಪಡಿಸಲಿಕ್ಕಾಗಿ ಯಾವುದಾದ್ರೂ ಒಂದು ಬೈಬಲ್‌ ವಚನವನ್ನ ಬಳಸಿ. ಬೈಬಲಿನಲ್ಲಿ ಸಾಂತ್ವನ ಕೊಡುವ ತುಂಬ ವಚನಗಳಿವೆ; ಸೂಕ್ತವಾದ ವಚನವನ್ನ ಬಳಸಿ. ಆದರೆ ಒಂದು ವಿಷಯ ನೆನಪಲ್ಲಿಡಿ, ನೀವು ಏನು ಮಾತಾಡುತ್ತೀರ ಅನ್ನೋದು ಎಷ್ಟು ಮುಖ್ಯನೋ, ಅದನ್ನ ಹೇಗೆ ಮಾತಾಡುತ್ತೀರ ಅನ್ನೋದು ಅಷ್ಟೇ ಮುಖ್ಯ. ಹಾಗಾಗಿ ನಾವು ಪ್ರತಿಯೊಬ್ಬರ ಹತ್ತಿರ ಮೃದುವಾಗಿ ಮತ್ತು ಪ್ರೀತಿಯಿಂದ ಮಾತಾಡಬೇಕು.—ಜ್ಞಾನೋಕ್ತಿ 15:1.

2. ನಾವು ಹೇಗೆ ಮಾತಾಡಬಾರದು?

“ನಿಮ್ಮ ಬಾಯಲ್ಲಿ ಕೆಟ್ಟ ಮಾತು ಬರಬಾರದು” ಅಂತ ಬೈಬಲ್‌ ಹೇಳುತ್ತೆ. (ಎಫೆಸ 4:29 ಓದಿ.) ಅದರ ಅರ್ಥ ನಾವು ಹೊಲಸಾಗಿ ಅಥವಾ ಬೇರೆಯವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತಾಡಬಾರದು. ಅಷ್ಟೇ ಅಲ್ಲ, ನಾವು ಇನ್ನೊಬ್ಬರಿಗೆ ಹಾನಿಯಾಗುವ ಹರಟೆ ಮಾತಾಡಬಾರದು ಮತ್ತು ಚಾಡಿ ಹೇಳಬಾರದು.—ಜ್ಞಾನೋಕ್ತಿ 16:28 ಓದಿ.

3. ಬೇರೆಯವರನ್ನ ಪ್ರೋತ್ಸಾಹಿಸುವ ರೀತಿಯಲ್ಲಿ ಮಾತಾಡಕ್ಕೆ ಯಾವುದು ಸಹಾಯ ಮಾಡುತ್ತೆ?

ನಾವು ಏನು ಮಾತಾಡುತ್ತೇವೋ ಅದು ನಮ್ಮ ಹೃದಯದಲ್ಲಿ ಏನಿದೆ, ನಾವು ಏನು ಯೋಚಿಸುತ್ತೇವೆ ಅನ್ನೋದನ್ನ ತೋರಿಸಿಕೊಡುತ್ತೆ. (ಲೂಕ 6:45) ಹಾಗಾಗಿ ನಮ್ಮ ಮನಸ್ಸನ್ನ ಮತ್ತು ಹೃದಯವನ್ನ ಒಳ್ಳೇ ವಿಷಯಗಳ ಕಡೆಗೆ ತಿರುಗಿಸಬೇಕು. ಅಂದರೆ ಯಾವುದು ನೀತಿನೋ, ಶುದ್ಧನೋ, ಪ್ರೀತಿಯನ್ನ ಬೆಳೆಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದೆಯೋ ಅಂಥ ವಿಷಯಗಳ ಕಡೆಗೆ ನಮ್ಮ ಗಮನಹರಿಸಬೇಕು. (ಫಿಲಿಪ್ಪಿ 4:8) ಅದಕ್ಕಾಗಿ ನಾವು ಒಳ್ಳೇ ಸ್ನೇಹಿತರನ್ನ ಮತ್ತು ಒಳ್ಳೇ ಮನರಂಜನೆಯನ್ನ ಆರಿಸಿಕೊಳ್ಳಬೇಕು. (ಜ್ಞಾನೋಕ್ತಿ 13:20) ಇದು ನಾವು ಏನು ಮಾತಾಡುತ್ತೇವೆ, ಹೇಗೆ ಮಾತಾಡುತ್ತೇವೆ ಅಂತ ಯೋಚಿಸಿ ಮಾತಾಡಕ್ಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ನೀವು ಆಡುವ ಮಾತಿನಿಂದ ಬೇರೆಯವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತ ಯೋಚಿಸಿ. ಬೈಬಲ್‌ ಹೀಗೆ ಹೇಳುತ್ತೆ, “ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ, ಬುದ್ಧಿವಂತನ ಮಾತು ಮದ್ದಿನಂತೆ ಇರುತ್ತೆ.”ಜ್ಞಾನೋಕ್ತಿ 12:18.

ಹೆಚ್ಚನ್ನ ತಿಳಿಯೋಣ

ಯೆಹೋವ ದೇವರನ್ನ ಸಂತೋಷಪಡಿಸುವ ಮತ್ತು ಬೇರೆಯವರನ್ನ ಪ್ರೋತ್ಸಾಹಿಸುವ ರೀತಿಯಲ್ಲಿ ಮಾತಾಡೋದು ಹೇಗೆ ಅಂತ ತಿಳಿಯಿರಿ.

4. ಮಾತಾಡುವ ಮುಂಚೆ ಯೋಚಿಸಿ

ಕೆಲವೊಮ್ಮೆ ನಾವು ಯೋಚಿಸದೆ ಮಾತಾಡಿಬಿಡುತ್ತೇವೆ. ಆಮೇಲೆ ‘ಅಯ್ಯೋ ನಾನು ಹಾಗೆ ಮಾತಾಡಬಾರದಿತ್ತು’ ಅಂತ ಅಂದುಕೊಳ್ಳುತ್ತೇವೆ. (ಯಾಕೋಬ 3:2) ಗಲಾತ್ಯ 5:22, 23 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೋಚಿಸಿ ಮಾತಾಡಲು ಇಲ್ಲಿ ಕೊಡಲಾಗಿರುವ ಯಾವ ಗುಣಗಳಿಗಾಗಿ ನೀವು ದೇವರ ಹತ್ತಿರ ಬೇಡಿಕೊಳ್ಳಬೇಕಾಗುತ್ತೆ? ಈ ಗುಣಗಳು ನಿಮಗೆ ಹೇಗೆ ಸಹಾಯ ಮಾಡುತ್ತೆ?

1 ಕೊರಿಂಥ 15:33 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಮ್ಮ ಸಹವಾಸ ಮತ್ತು ಮನರಂಜನೆ ನಾವು ಮಾತಾಡುವ ರೀತಿಯನ್ನ ಬದಲಾಯಿಸಕ್ಕೆ ಸಾಧ್ಯ ಇದೆಯಾ?

ಪ್ರಸಂಗಿ 3:1, 7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಕೆಲವೊಮ್ಮೆ ಸುಮ್ಮನಿರೋದು ಅಥವಾ ಮಾತಾಡಲು ಸೂಕ್ತ ಸಮಯಕ್ಕಾಗಿ ಕಾಯುವುದು ಯಾಕೆ ಒಳ್ಳೇದು?

5. ಬೇರೆಯವರ ಬಗ್ಗೆ ಒಳ್ಳೇದನ್ನ ಮಾತಾಡಿ

ಬೇರೆಯವರಿಗೆ ನೋವಾಗದಂತೆ ಮತ್ತು ಅವರ ತಪ್ಪನ್ನ ಎತ್ತಿ ಆಡದಂತೆ ಮಾತಾಡೋದು ಹೇಗೆ? ವಿಡಿಯೋ ನೋಡಿ ನಂತರ ಪ್ರಶ್ನೆಗಳನ್ನ ಚರ್ಚಿಸಿ.

  • ವಿಡಿಯೋದಲ್ಲಿದ್ದ ಸಹೋದರ ತಾನು ಮಾತಾಡುವ ರೀತಿಯನ್ನ ಬದಲಾಯಿಸಬೇಕು ಅಂತ ಯಾಕೆ ಅಂದುಕೊಂಡರು?

  • ಅದಕ್ಕಾಗಿ ಅವರು ಏನು ಮಾಡಿದರು?

ಪ್ರಸಂಗಿ 7:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡಬೇಕು ಅಂತ ಅನಿಸುವಾಗ ಯಾವ ವಿಷಯವನ್ನ ನೆನಪಿನಲ್ಲಿಡಬೇಕು?

ಪ್ರಸಂಗಿ 7:21, 22 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಬೇರೆಯವರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ, ಅದನ್ನೆಲ್ಲಾ ನಿಮ್ಮ ಮನಸ್ಸಿಗೆ ತೆಗೆದುಕೊಳ್ಳದೇ ಇರೋಕೆ ಈ ವಚನಗಳು ಹೇಗೆ ಸಹಾಯ ಮಾಡುತ್ತೆ?

6. ನಿಮ್ಮ ಕುಟುಂಬದವರ ಜೊತೆ ಪ್ರೀತಿಯಿಂದ ಮಾತಾಡಿ

ನಾವು ನಮ್ಮ ಕುಟುಂಬದವರ ಜೊತೆ ದಯೆಯಿಂದ, ಪ್ರೀತಿಯಿಂದ ಮಾತಾಡಬೇಕು ಅಂತ ಯೆಹೋವನು ಬಯಸುತ್ತಾನೆ. ವಿಡಿಯೋ ನೋಡಿ ನಂತರ ಪ್ರಶ್ನೆಯನ್ನ ಚರ್ಚಿಸಿ.

  • ನಮ್ಮ ಕುಟುಂಬದವರ ಜೊತೆ ಪ್ರೀತಿಯಿಂದ ಮಾತಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಎಫೆಸ 4:31, 32 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಹೇಗೆ ಮಾತಾಡಿದರೆ ನಮ್ಮ ಕುಟುಂಬದವರಿಗೆ ಖುಷಿಯಾಗುತ್ತೆ?

ತನ್ನ ಮಗನಾದ ಯೇಸುವಿನ ಬಗ್ಗೆ ತನಗೆ ಹೇಗನಿಸುತ್ತೆ ಅಂತ ಯೆಹೋವನು ಮನಬಿಚ್ಚಿ ಹೇಳಿದನು. ಮತ್ತಾಯ 17:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರ ತರ ನಾವು ಕುಟುಂಬದವರ ಜೊತೆ ಹೇಗೆ ಮಾತಾಡಬಹುದು?

ಬೇರೆಯವರನ್ನ ಪ್ರಶಂಸಿಸಲು ಅವಕಾಶಗಳಿಗಾಗಿ ಹುಡುಕಿ

ಕೆಲವರು ಹೀಗಂತಾರೆ: “ನನಗೆ ಇಷ್ಟ ಬಂದಂತೆ ಮಾತಾಡ್ತೀನಿ, ಅದರಿಂದ ಬೇರೆಯವರಿಗೆ ಬೇಜಾರಾದ್ರೆ ನಾನೇನೂ ಮಾಡಕ್ಕಾಗಲ್ಲ.”

  • ನಿಮಗೂ ಹಾಗೇ ಅನಿಸುತ್ತಾ? ಯಾಕೆ?

ನಾವೇನು ಕಲಿತ್ವಿ

ಮಾತಿಗೆ ತುಂಬ ಶಕ್ತಿ ಇದೆ. ಹಾಗಾಗಿ ನಾವು ಏನು ಮಾತಾಡುತ್ತೇವೆ, ಯಾವಾಗ ಮಾತಾಡುತ್ತೇವೆ, ಮತ್ತು ಹೇಗೆ ಮಾತಾಡುತ್ತೇವೆ ಅನ್ನೋ ವಿಷಯದಲ್ಲಿ ತುಂಬ ಜಾಗ್ರತೆ ವಹಿಸಬೇಕು.

ನೆನಪಿದೆಯಾ

  • ಮಾತಾಡುವ ಸಾಮರ್ಥ್ಯವನ್ನ ನಾವು ಹೇಗೆ ಒಳ್ಳೇ ರೀತಿಯಲ್ಲಿ ಉಪಯೋಗಿಸಬಹುದು?

  • ನಾವು ಹೇಗೆಲ್ಲಾ ಮಾತಾಡಬಾರದು?

  • ಯಾವಾಗಲೂ ಬೇರೆಯವರ ಜೊತೆ ಪ್ರೀತಿಯಿಂದ ಮತ್ತು ಅವರನ್ನ ಪ್ರೋತ್ಸಾಹಿಸುವ ರೀತಿಯಲ್ಲಿ ಮಾತಾಡಕ್ಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಒಳ್ಳೇ ರೀತಿಯಲ್ಲಿ ಮಾತಾಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

ನಿಮ್ಮ ಮಾತು ಬುದ್ಧಿವಂತನ ಮಾತಿನಂತೆ ಇರಲಿ (8:04)

ಕೆಟ್ಟ ಮಾತು ಆಡದೇ ಇರೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ ಅಂತ ತಿಳಿದುಕೊಳ್ಳಿ.

“ಕೆಟ್ಟ ಮಾತು ಆಡೋದು ನಿಜವಾಗಲೂ ತಪ್ಪಾ?” (jw.org ಲೇಖನ)

ಚಾಡಿ ಹೇಳದೇ ಇರೋಕೆ ಯಾವುದು ಸಹಾಯ ಮಾಡುತ್ತೆ ಅಂತ ನೋಡಿ.

ಗಾಸಿಪ್‌ಗೆ ಬ್ರೇಕ್‌ (2:36)

ಕೆಟ್ಟಕೆಟ್ಟದಾಗಿ ಮಾತಾಡದೇ ಇರೋಕೆ ಒಬ್ಬ ವ್ಯಕ್ತಿಗೆ ಯೆಹೋವ ದೇವರು ಹೇಗೆ ಸಹಾಯ ಮಾಡಿದನು ಅಂತ ನೋಡಿ.

“ನಾನು ಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಶುರುಮಾಡಿದೆ” (ಕಾವಲಿನಬುರುಜು, ಅಕ್ಟೋಬರ್‌ 1, 2013)