ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 52

ನಮ್ಮ ಬಟ್ಟೆ ಮತ್ತು ಹೊರತೋರಿಕೆ ಯಾಕೆ ಮುಖ್ಯ?

ನಮ್ಮ ಬಟ್ಟೆ ಮತ್ತು ಹೊರತೋರಿಕೆ ಯಾಕೆ ಮುಖ್ಯ?

ನಮ್ಮ ಬಟ್ಟೆ, ಕೇಶಾಲಂಕಾರ (ಹೇರ್‌ಸ್ಟೈಲ್‌), ಹೊರತೋರಿಕೆ ಮತ್ತು ಇನ್ನಿತರ ವಿಷಯಗಳಲ್ಲಿ ಅಂದರೆ ನಮ್ಮ ಉಡುಗೆ ತೊಡುಗೆಯಲ್ಲಿ ನಮ್ಮದೇ ಆದ ಆಯ್ಕೆಗಳಿವೆ. ಈ ವಿಷಯಗಳಲ್ಲಿ ಬೈಬಲಿನಲ್ಲಿರುವ ಕೆಲವು ತತ್ವಗಳನ್ನ ಪಾಲಿಸೋದಾದ್ರೆ ನಮಗೂ ಯೆಹೋವ ದೇವರಿಗೂ ಇಷ್ಟ ಆಗುವಂಥ ಆಯ್ಕೆಯನ್ನ ಮಾಡಬಹುದು. ಅಂಥ ಕೆಲವು ತತ್ವಗಳು ಯಾವುವು ಅಂತ ನೋಡೋಣ.

1. ಬಟ್ಟೆ ಮತ್ತು ಹೊರತೋರಿಕೆಯ ವಿಷಯದಲ್ಲಿ ನಮಗೆ ಸಹಾಯ ಮಾಡುವ ಕೆಲವು ಬೈಬಲ್‌ ತತ್ವಗಳು ಯಾವುವು?

ನಾವು ‘ಗೌರವ ತರುವಂಥ ಬಟ್ಟೆ ಹಾಕಬೇಕು, ನಮ್ಮ ಆಯ್ಕೆಯಿಂದ ನಮಗೆ ಬುದ್ಧಿಯಿದೆ, ದೇವರ ಮೇಲೆ ಭಕ್ತಿಯಿದೆ ಮತ್ತು ತೋರಿಸ್ಕೊಳ್ಳೋರಲ್ಲ’ ಅಂತ ಬೇರೆಯವರಿಗೆ ಗೊತ್ತಾಗಬೇಕು. (1 ತಿಮೊತಿ 2:9, 10) ಈ ನಾಲ್ಕು ತತ್ವಗಳನ್ನ ನಾವು ಯಾವಾಗ್ಲೂ ಮನಸ್ಸಲ್ಲಿ ಇಡಬೇಕು: (1) ನಾವು “ಗೌರವ ತರುವಂಥ” ಬಟ್ಟೆ ಹಾಕಬೇಕು. ರಾಜ್ಯ ಸಭಾಗೃಹದಲ್ಲಿ ಸಹೋದರರು ಬೇರೆಬೇರೆ ತರದ ಬಟ್ಟೆ ಹಾಕಿಕೊಂಡಿರುವುದನ್ನ ನೀವು ನೋಡಿರುತ್ತೀರ, ಆದರೆ ಅವೆಲ್ಲಾ ಯೆಹೋವನಿಗೆ ಗೌರವ ತರುವಂಥ ರೀತಿಯಲ್ಲಿ ಇದೆ ಅನ್ನೋದನ್ನ ನೀವು ಗಮನಿಸಿರುತ್ತೀರ ಅಲ್ವಾ? (2) ನಾವು “ತೋರಿಸ್ಕೊಳ್ಳೋರಲ್ಲ” ಅಂತ ಬೇರೆಯವರಿಗೆ ಗೊತ್ತಾಗಬೇಕು. ಲೈಂಗಿಕವಾಗಿ ಪ್ರಚೋದಿಸುವ ಮತ್ತು ನಮ್ಮ ಕಡೆಗೆ ಅತಿಯಾಗಿ ಗಮನ ಸೆಳೆಯುವಂಥ ಬಟ್ಟೆಯನ್ನ ಹಾಕಬಾರದು. ಸಭ್ಯವಾಗಿರುವ ಬಟ್ಟೆಯನ್ನ ಹಾಕಬೇಕು. (3) ಮಾರ್ಕೆಟಿಗೆ ಬರುವ ಹೊಸಹೊಸ ಫ್ಯಾಶನ್ನಿನ ಬಟ್ಟೆ ಮತ್ತು ಹೊರತೋರಿಕೆಯ ಹಿಂದೆ ಹೋಗದಿರುವ ಮೂಲಕ ನಮಗೆ “ಬುದ್ಧಿ ಇದೆ” ಅಂತ ತೋರಿಸಿಕೊಡಬೇಕು. (4) ನಮ್ಮ ಹೊರತೋರಿಕೆಯಿಂದ ನಮಗೆ “ದೇವರ ಮೇಲೆ ಭಕ್ತಿ” ಇದೆ ಮತ್ತು ನಾವು ದೇವರ ಸೇವಕರು ಅಂತ ತೋರಿಸಿಕೊಡಬೇಕು.—1 ಕೊರಿಂಥ 10:31.

2. ನಮ್ಮ ಉಡುಗೆ ತೊಡುಗೆ ಬಗ್ಗೆ ಬೇರೆಯವರಿಗೆ ಹೇಗನಿಸುತ್ತೆ ಅನ್ನೋದನ್ನೂ ಪರಿಗಣಿಸಬೇಕು ಯಾಕೆ?

ಯಾವ ರೀತಿ ಬಟ್ಟೆ ಹಾಕಬೇಕು, ಹೊರತೋರಿಕೆ ಹೇಗಿರಬೇಕು ಅಂತ ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗೆಲ್ಲರಿಗೂ ಇದೆ. ಆದರೆ ನಮ್ಮ ಹೊರತೋರಿಕೆಯಿಂದ ಬೇರೆಯವರಿಗೆ ಹೇಗನಿಸುತ್ತೆ ಅಂತನೂ ಯೋಚಿಸಬೇಕು. ನಮ್ಮ ಆಯ್ಕೆ ಯಾವತ್ತೂ ಬೇರೆಯವರನ್ನ ಎಡವಿಸಬಾರದು. ಬದಲಿಗೆ ನಾವು ‘ಬೇರೆಯವ್ರನ್ನ ಮೆಚ್ಚಿಸೋಕೆ ಮತ್ತು ಬಲಪಡಿಸೋಕೆ’ ನಮ್ಮಿಂದಾದ ಎಲ್ಲವನ್ನ ಮಾಡಬೇಕು.—ರೋಮನ್ನರಿಗೆ 15:1, 2 ಓದಿ.

3. ನಮ್ಮ ಹೊರತೋರಿಕೆ ಹೇಗೆ ಜನರನ್ನ ಸತ್ಯದ ಕಡೆಗೆ ಸೆಳೆಯುತ್ತೆ?

ನಾವು ಪ್ರತಿಯೊಂದು ಸನ್ನಿವೇಶಕ್ಕೂ ಸೂಕ್ತವಾದ, ಸಭ್ಯವಾದ ಬಟ್ಟೆಯನ್ನ ಹಾಕುತ್ತೇವೆ. ಮುಖ್ಯವಾಗಿ ರಾಜ್ಯ ಸಭಾಗೃಹಕ್ಕೆ ಮತ್ತು ಸಾರೋಕೆ ಹೋಗುವಾಗ ನೀಟಾಗಿರುವ ಬಟ್ಟೆಯನ್ನ ಹಾಕಿಕೊಳ್ಳುತ್ತೇವೆ. ಯಾಕಂದ್ರೆ ಜನರ ಗಮನ ನಮ್ಮ ಮೇಲೆ ಅಲ್ಲ ಸಿಹಿಸುದ್ದಿಯ ಮೇಲಿರಬೇಕು. ಹೀಗೆ ನಮ್ಮ ಬಟ್ಟೆ ಮತ್ತು ಹೊರತೋರಿಕೆಯಿಂದ “ದೇವರ ಬೋಧನೆಯ ಅಂದವನ್ನ” ಹೆಚ್ಚಿಸೋಕೆ ಆಗುತ್ತೆ.—ತೀತ 2:10.

ಹೆಚ್ಚನ್ನ ತಿಳಿಯೋಣ

ನಮ್ಮ ಬಟ್ಟೆ ಮತ್ತು ಹೊರತೋರಿಕೆ ಕ್ರೈಸ್ತರಿಗೆ ತಕ್ಕಂತೆ ಇರಬೇಕು ಯಾಕೆ ಅಂತ ತಿಳಿದುಕೊಳ್ಳಿ.

ನಾವು ಅಧಿಕಾರಿಗಳನ್ನ ಗೌರವಿಸುತ್ತೇವೆ ಅಂತ ನಮ್ಮ ಬಟ್ಟೆ ಮತ್ತು ಹೊರತೋರಿಕೆಯಿಂದ ತೋರಿಸಿಕೊಡುತ್ತೇವೆ. ಯೆಹೋವ ದೇವರು ನಮ್ಮ ಹೃದಯದಲ್ಲಿ ಇರೋದನ್ನ ನೋಡೋದಾದ್ರೂ ನಮ್ಮ ಹೊರತೋರಿಕೆಯ ಮೂಲಕನೂ ಆತನಿಗೆ ಗೌರವ ತೋರಿಸುತ್ತೇವೆ

4. ಒಳ್ಳೇ ಹೊರತೋರಿಕೆ ಯೆಹೋವ ದೇವರಿಗೆ ಗೌರವ ತರುತ್ತೆ

ನಾವು ಯಾಕೆ ನಮ್ಮ ಬಟ್ಟೆ ಮತ್ತು ಹೊರತೋರಿಕೆಗೆ ಗಮನ ಕೊಡಬೇಕು? ಕೀರ್ತನೆ 47:2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಜನರು ನಮ್ಮನ್ನ ಯೆಹೋವನ ಸಾಕ್ಷಿಗಳು ಅಂತ ಗುರುತಿಸೋದ್ರಿಂದ ನಮ್ಮ ಬಟ್ಟೆ ವಿಷಯದಲ್ಲಿ ನಾವು ಯಾಕೆ ಜಾಗ್ರತೆ ವಹಿಸಬೇಕು?

  • ಮೀಟಿಂಗಿಗೆ ಅಥವಾ ಸಾರೋಕೆ ಹೋಗುವಾಗ ನಮ್ಮ ಹೊರತೋರಿಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?

5. ಉಡುಗೆ ತೊಡುಗೆಯ ವಿಷಯದಲ್ಲಿ ಸರಿಯಾದ ಆಯ್ಕೆ ಮಾಡಿ

ವಿಡಿಯೋ ನೋಡಿ.

ನಾವು ಬೆಲೆಬಾಳುವ ಅಥವಾ ಕಡಿಮೆ ಬೆಲೆಯ ಬಟ್ಟೆ ಹಾಕಿರಲಿ ಅದು ಶುದ್ಧವಾಗಿರಬೇಕು ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸಭ್ಯವಾಗಿ ಇರಬೇಕು. 1 ಕೊರಿಂಥ 10:24 ಮತ್ತು 1 ತಿಮೊತಿ 2:9, 10 ಓದಿ. ನಂತರ ಕೆಳಗೆ ಸೂಚಿಸಲಾಗಿರುವಂಥ ಬಟ್ಟೆಗಳನ್ನ ನಾವು ಯಾಕೆ ಹಾಕಲ್ಲ ಅಂತ ಚರ್ಚೆ ಮಾಡಿ:

  • ಗಲೀಜಾಗಿರುವ ಅಥವಾ ಅಸ್ತವ್ಯಸ್ತವಾಗಿರುವ

  • ಮೈಗೆ ಅಂಟಿಕೊಂಡಿರುವ, ಮೈ ಕಾಣಿಸುವಂಥ ಅಥವಾ ಲೈಂಗಿಕವಾಗಿ ಪ್ರಚೋದಿಸುವ

ಯೆಹೋವ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮದ ಕೆಳಗೆ ನಾವಿಲ್ಲ. ಆದರೂ ಆ ನಿಯಮಗಳಿಂದ ಯೆಹೋವ ದೇವರ ಯೋಚನೆಗಳ ಬಗ್ಗೆ ಕಲಿಯಬಹುದು. ಧರ್ಮೋಪದೇಶಕಾಂಡ 22:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಸ್ತ್ರೀ ಪುರುಷನ ತರ ಮತ್ತು ಪುರುಷ ಸ್ತ್ರೀ ತರ ಕಾಣಿಸುವಂಥ ಬಟ್ಟೆ ಹಾಕಿಕೊಳ್ಳಬಾರದು ಮತ್ತು ಹೊರತೋರಿಕೆಗಳನ್ನ ಮಾಡಿಕೊಳ್ಳಬಾರದು ಯಾಕೆ?

1 ಕೊರಿಂಥ 10:32, 33 ಮತ್ತು 1 ಯೋಹಾನ 2:15, 16 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಮ್ಮ ಹೊರತೋರಿಕೆ ನಮ್ಮ ಸುತ್ತಮುತ್ತ ಇರುವ ಅಥವಾ ಸಭೆಯಲ್ಲಿರುವ ಯಾರನ್ನೂ ಎಡವಿಸುವ ತರ ಇರಬಾರದು ಯಾಕೆ?

  • ನಿಮ್ಮ ಸುತ್ತಮುತ್ತ ಇರುವ ಜನರು ಸಾಮಾನ್ಯವಾಗಿ ಯಾವೆಲ್ಲಾ ತರದ ಬಟ್ಟೆಗಳನ್ನ ಹಾಕಿಕೊಳ್ಳುತ್ತಾರೆ, ಕೇಶಾಲಂಕಾರ ಮತ್ತು ಇನ್ನಿತರ ವಿಷಯಗಳನ್ನ ಮಾಡುತ್ತಾರೆ?

  • ಇದರಲ್ಲಿ ಕೆಲವು ಸ್ಟೈಲು ಕ್ರೈಸ್ತರಿಗೆ ಸೂಕ್ತವಾಗಿರಲ್ಲ ಅಂತ ನಿಮಗೆ ಅನಿಸುತ್ತಾ? ಯಾಕೆ?

ನಮ್ಮ ಬಟ್ಟೆ ಮತ್ತು ಹೊರತೋರಿಕೆ ಬೇರೆಬೇರೆ ತರದ್ದಾಗಿದ್ರೂ ಅದು ಸಭ್ಯವಾಗಿದ್ದರೆ ಯೆಹೋವನಿಗೆ ಖುಷಿಯಾಗುತ್ತೆ

ಕೆಲವರು ಹೀಗಂತಾರೆ: “ಯಾವ ತರದ ಬಟ್ಟೆ ಬೇಕಾದ್ರೂ ಹಾಕ್ತೀನಿ, ಅದು ನನ್ನ ಇಷ್ಟ.”

  • ನಿಮಗೂ ಹಾಗೆ ಅನಿಸುತ್ತಾ? ಯಾಕೆ?

ನಾವೇನು ಕಲಿತ್ವಿ

ಬಟ್ಟೆ ಮತ್ತು ಹೊರತೋರಿಕೆಯ ವಿಷಯದಲ್ಲಿ ನಾವು ಒಳ್ಳೇ ಆಯ್ಕೆಗಳನ್ನ ಮಾಡುವಾಗ ಯೆಹೋವ ದೇವರಿಗೆ ಮತ್ತು ಬೇರೆಯವರಿಗೆ ಖುಷಿಯಾಗುತ್ತೆ.

ನೆನಪಿದೆಯಾ

  • ನಮ್ಮ ಬಟ್ಟೆ ಮತ್ತು ಹೊರತೋರಿಕೆ ಚೆನ್ನಾಗಿರಬೇಕು ಅಂತ ಯೆಹೋವ ದೇವರು ಯಾಕೆ ಬಯಸುತ್ತಾನೆ?

  • ಬಟ್ಟೆ ಮತ್ತು ಹೊರತೋರಿಕೆಯ ವಿಷಯಗಳಲ್ಲಿ ನಾವು ಯಾವ ತತ್ವಗಳನ್ನ ಮನಸ್ಸಿನಲ್ಲಿ ಇಡಬೇಕು?

  • ನಮ್ಮ ಹೊರತೋರಿಕೆ ಜನರನ್ನ ಹೇಗೆ ಸತ್ಯದ ಕಡೆಗೆ ಸೆಳೆಯುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ನಿಮ್ಮ ಬಟ್ಟೆ ನೋಡಿ ಜನರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ನೋಡಿ.

“ನಾನು ಹೇಗೆ ಕಾಣಿಸ್ತಾ ಇದ್ದೀನಿ?” (jw.org ಲೇಖನ)

ಒಳ್ಳೇ ತೀರ್ಮಾನಗಳನ್ನ ಮಾಡಲು ಸಹಾಯ ಮಾಡುವ ಇನ್ನೂ ಕೆಲವು ತತ್ವಗಳನ್ನ ನೋಡಿ.

“ನಿಮ್ಮ ಬಟ್ಟೆ ದೇವರಿಗೆ ಮಹಿಮೆ ತರುವ ಹಾಗಿದೆಯಾ?” (ಕಾವಲಿನಬುರುಜು, ಸೆಪ್ಟೆಂಬರ್‌ 2016)

ಬಟ್ಟೆಯನ್ನ ಆಯ್ಕೆ ಮಾಡುವ ವಿಷಯದಲ್ಲಿ ಬೇರೆಯವರು ಮಾಡುವ ನಿರ್ಧಾರವನ್ನ ಗೌರವಿಸೋಕೆ ಕಲಿತ ಒಬ್ಬ ಸ್ತ್ರೀಯ ಅನುಭವ ನೋಡಿ.

“ಅವರ ಬಟ್ಟೆ ಮತ್ತು ಹೊರತೋರಿಕೆ ನನ್ನ ಪ್ರಗತಿಗೆ ಅಡ್ಡಗಾಲಾಗಿತ್ತು” (ಎಚ್ಚರ! ಲೇಖನ)